ಆರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕೊಯಮತ್ತೂರಿನ ಜನರು ಬೆಂಗಳೂರನ್ನು ತಲುಪಲು ಸಾಧ್ಯವಾಗುವಂತಹ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್ವೆ ಬುಕ್ಕಿಂಗ್ ಅನ್ನು ಶುಕ್ರವಾರ ತೆರೆಯಲಾಗಿದೆ. ಫೆಬ್ರವರಿ 1 ರಿಂದ ಬುಕ್ಕಿಂಗ್ ಆರಂಭವಾಗಲಿದೆ.
ಕಳೆದೆರಡು ವಾರಗಳಿಂದ ಬುಕ್ಕಿಂಗ್ ಇಲ್ಲದ ಕಾರಣ ಪ್ರಯಾಣಿಕರು ತಮ್ಮ ಎಲ್ಲ ಪ್ಲ್ಯಾನ್‌ಗಳನ್ನು ಬದಲಾಯಿಸಬೇಕಾದ ಸ್ಥಿತಿ ಉಂಟಾಗಿತ್ತು. ಆದರೆ ಈಗ ಫೆಬ್ರವರಿ 1 ರಿಂದ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶವಿದ್ದು, ಪ್ರಯಾಣಿಕರಿಗೆ ಕೊಂಚ ರಿಲೀಫ್ ಸಿಕ್ಕಂತೆ ಆಗಿದೆ.

ಟಿಕೆಟ್ ಬುಕ್ಕಿಂಗ್ ಮತ್ತೆ ಆರಂಭ ಮಾಡಿರುವುದಕ್ಕೆ ರೈಲು ಬಳಕೆದಾರರ ಸಂಘಗಳು ಸಮಾಧಾನವನ್ನು ವ್ಯಕ್ತಪಡಿಸಿದೆ. ಬೆಳಿಗ್ಗೆ ರೈಲು ಪ್ರಯಾಣ ಆರಂಭವಾಗಲಿದ್ದು, ಆರೂವರೆ ಗಂಟೆಗಳ ಬಳಿಕ ನಿಲ್ದಾಣಕ್ಕೆ ತಲುಪಲಿದೆ. ಇದರಿಂದಾಗಿ ನಮ್ಮ ಸಮಯ ಉಳಿತಾಯವಾಗಲಿದೆ ಎಂದು ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ರೈಲ್ವೇ ಮೂಲಗಳ ಪ್ರಕಾರ, ಬುಕ್ಕಿಂಗ್‌ಗಳನ್ನು ಫ್ರೀಜ್ ಮಾಡಿದ ಬಳಿಕ ರೈಲಿನ ನಿರ್ಗಮನ-ಆಗಮನದ ಸಮಯದಲ್ಲಿ ಬದಲಾವಣೆಯಾಗುತ್ತದೆ ಎಂದು ನಿರೀಕ್ಷೆಯಿತ್ತು. ಹೊರಡುವ ಸಮಯವನ್ನು ಒಂದು ಗಂಟೆ ತಡ ಮಾಡಿದರೆ ಪಾಲಿಟಿವ್ ಫಲಿತಾಂಶ ಲಭ್ಯವಾಗಲಿದೆ ಎಂದು ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಗಳು ರೈಲ್ವೆ ಮಂಡಳಿಗೆ ತಿಳಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಈ ರೈಲು ಹೊರಡಲಿದೆ. ಆದರೆ ಈ ರೈಲು 6:10 ಕ್ಕೆ ಹೊರಟರೆ ರೈಲಿನ ಪ್ರಯಾಣಿಕರಿಗೆ ಸಹಾಯವಾಗಲಿದೆ. ಪ್ರಯಾಣಿಕರ ಸಂಖ್ಯೆಯೂ ಕೂಡಾ ಹೆಚ್ಚಳವಾಗಲಿದೆ ಎಂದು ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಮಾಜಿ ಸದಸ್ಯ ಜೆ ಸತೀಶ್ ಹೇಳಿದರು. ಇದರಿಂದ 15-20 ನಿಮಿಷಗಳ ಸಮಯ ಉಳಿತಾಯದ ಅನುಭವವನ್ನು ಪ್ರಯಾಣಿಕರು ಪಡೆಯಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ.
ರೈಲಿನ ದರವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಕೋಚ್‌ಗಳ ಸಂಯೋಜನೆ ಮತ್ತು ಅದು ಯಾವೆಲ್ಲ ನಿಲುಗಡೆಯಲ್ಲಿ ತಂಗಲಿದೆ ಎಂಬ ಮಾಹಿತಿಯನ್ನು ಕೂಡಾ ಬಹಿರಂಗಪಡಿಸಲಾಗಿಲ್ಲ. ರೈಲು ಬೆಳಿಗ್ಗೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ ಬೆಂಗಳೂರು ತಲುಪಲಿದೆ.
2024ರಲ್ಲಿ ಎಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭ
ಭಾರತೀಯ ರೈಲ್ವೇ 2023 ರಲ್ಲಿ 34 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದೆ. ಈಗ 2024 ರಲ್ಲಿ 14 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 60 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ವಂದೇ ಭಾರತ್ ರೈಲುಗಳು ಮತ್ತು ಬೋಗಿಗಳ ಉತ್ಪಾದನಾ ಯೋಜನೆಯ ಭಾಗವಾಗಿ, ಭಾರತೀಯ ರೈಲ್ವೇಯು 2024 ರಲ್ಲಿ ಸುಮಾರು 70 ರೈಲುಗಳನ್ನು ತಲುಪಿಸಲು ನಿರೀಕ್ಷಿಸುತ್ತದೆ. ಅವುಗಳಲ್ಲಿ ಸುಮಾರು 60 ರೈಲುಗಳು ನವೆಂಬರ್ 15 ರ ಮೊದಲು ಹೊಸ ಮಾರ್ಗಗಳಲ್ಲಿ ಪ್ರಾರಂಭವಾಗಲಿವೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


Click it and Unblock the Notifications