For Quick Alerts
ALLOW NOTIFICATIONS  
For Daily Alerts

Brexit ಅಂದರೇನು? ಹೇಗೆ ಸ್ಪಂದಿಸಲಿದೆ ಭಾರತದ ಅರ್ಥ ವ್ಯವಸ್ಥೆ?

By ಸುಷ್ಮಾ ಚಾತ್ರ
|

ಸದ್ಯಕ್ಕೆ ವಿಶ್ವದ ಗಮನ ಸೆಳೆದಿರುವ ವಿಚಾರದಲ್ಲಿ ಮುಖ್ಯವಾದದ್ದು ಗ್ರೇಟ್ ಬ್ರಿಟನ್ (ಯು.ಕೆ.) ಯುರೋಪಿಯನ್ ಒಕ್ಕೂಟದಿಂದ ಹೊರಬರುವ ತೀರ್ಮಾನ. ಅದುವೇ ಬ್ರೆಕ್ಸಿಟ್. ಅಂದರೆ ಬ್ರಿಟನ್ ಎಕ್ಸಿಟ್ ಎಂದರ್ಥ. ಯುರೋಪಿಯನ್ ಒಕ್ಕೂಟದಿಂದ ಯುನೈಟೆಡ್ ಕಿಂಗ್ ಡಂ ಹೊರಬರುವುದು ಎಂದರ್ಥ. ತನ್ನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ಸ್ವತಂತ್ರವಾಗಿ ಬ್ರಿಟನ್ ದೇಶ ನಿಭಾಯಿಸಿಕೊಳ್ಳಬೇಕಾಗುತ್ತದೆ.

 

ಆದರೆ, ಇದು ಕೇವಲ ಯುರೋಪಿಯನ್ ಒಕ್ಕೂಟ ರಾಷ್ಟ್ರ ಮತ್ತು ಬ್ರಿಟನ್ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ. ಬದಲಾಗಿ ಇಡೀ ವಿಶ್ವದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಭಾರತವೂ ಹೊರತಾಗಿಲ್ಲ. ಈ ವಿಚಾರದಲ್ಲಿ ಬ್ರಿಟನ್ ನಲ್ಲಿಯೇ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳಿವೆ.

2016 ರ ವರದಿಯ ಪ್ರಕಾರ ಬ್ರಿಟನ್ ನಲ್ಲಿ ನೋಂದಣಿ ಆಗಿರುವ ಮತದಾರರು 46,500,001. ಆ ಪೈಕಿ 17,410,742 ಮಂದಿ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕು ಎಂದು ಮತ ಚಲಾಯಿಸಿದ್ದಾರೆ. 16,141,241 ಮತದಾರರು ಪ್ರತ್ಯೇಕವಾಗುವುದು ಬೇಡ ಎಂದು ಮತ ನೀಡಿದ್ದಾರೆ. ಇನ್ನುಳಿದ ಶೇಕಡಾ 0.08 ರಷ್ಟು ಮತಗಳು ಅಸಿಂಧು ಆಗಿವೆ.

ಒಟ್ಟಿನಲ್ಲಿ ಬ್ರೆಕ್ಸಿಟ್ ಬ್ರಿಟನ್ ನಲ್ಲಿ ರಾಜಕೀಯ ಅಸ್ತ್ರವಾಗಿದೆ. ಆ ಬಗ್ಗೆ ಜನಸಾಮಾನ್ಯರಲ್ಲೂ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಲ್ಲಿ ಇಂಗ್ಲೆಂಡ್ ಬ್ರೆಕ್ಸಿಟ್ ಗೆ ನಿರ್ಣಾಯಕವಾಗಿ ಮತ ಚಲಾವಣೆ ಮಾಡಿದೆ. ಅದರಲ್ಲಿ 53.2% ಪರವಾದರೆ, 46.8% ಮಂದಿ ವಿರೋಧಿಸಿದ್ದಾರೆ.

ಸ್ಕಾಟ್ಲೆಂಡ್ ನಲ್ಲಿ 38% ಪರವಾದರೆ, 62% ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಉತ್ತರ ಐರ್ಲೆಂಡ್ ನಲ್ಲಿ 44.3% ಮಂದಿ ಬ್ರೆಕ್ಸಿಟ್ ಪರವಾಗಿದ್ದರೆ, 55.7% ಮಂದಿ ವಿರೋಧಿಸಿದ್ದಾರೆ. 18ರಿಂದ 29 ವರ್ಷ ವಯಸ್ಸಿನವರಲ್ಲಿ 73% ಮಂದಿ ಯುರೋಪಿಯನ್ ಒಕ್ಕೂಟದಲ್ಲಿ ಉಳಿಯುವುದರ ಪರವಾಗಿ ಮತ ಚಲಾಯಿಸಿದರೆ, ಶೇ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರು 63% ಮಂದಿ ಬ್ರೆಕ್ಸಿಟ್ ಗೆ ಬೆಂಬಲಿಸಿ, ಮತ ಚಲಾಯಿಸಿದ್ದಾರೆ.

ಬಹುಪಾಲು ವಿದ್ಯಾವಂತ ಮತ್ತು ವೈಟ್ ಕಾಲರ್ ವರ್ಕರ್ ಗಳು ಎಂದು ಕರೆಯುವ ಮಂದಿ ಯುರೋಪಿಯನ್ ಒಕ್ಕೂಟದಲ್ಲೇ ಉಳಿದುಕೊಳ್ಳುವುದಕ್ಕೆ ಬೆಂಬಲ ನೀಡುತ್ತಿದ್ದಾರೆ.

ಆರ್ಥಿಕ ಪರಿಣಾಮಗಳೇನು?

ಆರ್ಥಿಕ ಪರಿಣಾಮಗಳೇನು?

ಬ್ರೆಕ್ಸಿಟ್ ನ ಆರ್ಥಿಕ ಪರಿಣಾಮಗಳು ಕಡಿಮೆ ಇರುವುದಿಲ್ಲ. ಯಾವುದೇ ಒಪ್ಪಂದವಿಲ್ಲದೆ ಯುರೋಪಿಯನ್ ಒಕ್ಕೂಟ ತೊರೆದು, ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ನಿಯಮಗಳನ್ನು ಸರಳವಾಗಿ ಅನ್ವಯಿಸುವ ಆಯ್ಕೆಯು ಯು.ಕೆ.ಗೆ ಹೆಚ್ಚಿನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಡಬ್ಲ್ಯುಟಿಒ ನಿಯಮಗಳ ಅಡಿಯಲ್ಲಿ ವ್ಯಾಪಾರ ಮಾಡುವುದರಿಂದ ಭವಿಷ್ಯದ ಜಿಡಿಪಿಯನ್ನು ಬ್ರೆಕ್ಸಿಟ್ ಆದ ಹತ್ತು ವರ್ಷಗಳ ಅವಧಿಗೆ 5% ನಷ್ಟು ಅಥವಾ ಈಗಿನ ಸನ್ನಿವೇಶಕ್ಕೆ ಹೋಲಿಸಿದರೆ 140 ಬಿಲಿಯನ್ ಡಾಲರ್ ಗಳಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.

ಸದ್ಯ ಹಣಕಾಸು ಸೇವೆ ಸೇರಿದಂತೆ ಸೇವಾ ವಲಯವು ಯು.ಕೆ. ಆರ್ಥಿಕತೆಯ ಮೇಲೆ ಪ್ರಾಬಲ್ಯ ಹೊಂದಿದೆ. ಒಟ್ಟಾರೆ ಜಿಡಿಪಿಯ 80% ನಷ್ಟು ಸದ್ಯಕ್ಕೆ ಇದರ ಕೊಡುಗೆ ಇದೆ. ವಿಭಜನೆಯ ನಂತರ ಈ ಮಟ್ಟದಲ್ಲಿ ಗಣನೀಯ ಕಡಿಮೆಯಾಗುವ ಸಾಧ್ಯತೆ ಇದೆ.
10% ಕ್ಕಿಂತ ಕಡಿಮೆ ಯುರೋಪಿಯನ್ ಟ್ರೇಡ್ ಯು.ಕೆ. ಜೊತೆಗಿದೆ. ವಾಸ್ತವವಾಗಿ ಹೇಳಬೇಕು ಎಂದರೆ ಜಾಗತಿಕ ವ್ಯಾಪಾರದ ಒಟ್ಟು 4% ಕ್ಕಿಂತ ಕಡಿಮೆಯನ್ನು ಯು. ಕೆ. ವ್ಯಾಪಾರವು ಪ್ರತಿನಿಧಿಸುತ್ತದೆ. ಸಂಪೂರ್ಣ ಬ್ರೆಕ್ಸಿಟ್ ಪ್ರಕ್ರಿಯೆ ಮುಗಿದ ನಂತರ ಯುಕೆ ಸರ್ಕಾರವು ಯುಎಸ್ಎ, ಭಾರತ, ಚೀನಾ, ಆಸ್ಟ್ರೇಲಿಯಾ ಸೇರಿದಂತೆ ಯುರೋಪಿಯನ್ ಒಕ್ಕೂಟದ ಹೊರಗಿನ ರಾಷ್ಟ್ರಗಳೊಂದಿಗೆ ವ್ಯಾಪಾರ- ವ್ಯವಹಾರಗಳ ಒಪ್ಪಂದಗಳಿಗೆ ಸಹಿ ಹಾಕುವುದಕ್ಕೆ ಪ್ರಯತ್ನಿಸುತ್ತದೆ. ಇತರ ದೇಶಗಳು ಪರಸ್ಪರ ವಿನಿಮಯಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗುತ್ತದೆ. ಈ ಪ್ರಮುಖ ದೇಶಗಳಿಗೆ ಯುರೋಪಿಯನ್ ಒಕ್ಕೂಟ ಬಹುದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.

ವಲಸೆಯ ಆರ್ಥಿಕ ಪರಿಣಾಮ
 

ವಲಸೆಯ ಆರ್ಥಿಕ ಪರಿಣಾಮ

ಯುರೋಪಿಯನ್ ಒಕ್ಕೂಟದಲ್ಲಿ ಇರುವ ಎಲ್ಲ ರಾಷ್ಟ್ರಗಳಿಗೆ ಹಲವು ನಿಯಮಗಳು ಒಂದೇ ಬಗೆಯಲ್ಲಿ ಇವೆ. ಒಕ್ಕೂಟದ ಒಳಗಿನ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು, ವಾಸಿಸಲು ಮತ್ತು ಉದ್ಯೋಗ ತೆಗೆದುಕೊಳ್ಳಲು ಸಂಪೂರ್ಣ ಹಕ್ಕಿದೆ. 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಬ್ರಿಟಿಷ್ ಮಂದಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಯುರೋಪಿಯನ್ ಒಕ್ಕೂಟ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಐರ್ಲೆಂಡ್, ಇಟಲಿ ಮತ್ತು ಲಿಥುವೇನಿಯಾ ದೇಶಗಳ ಕಾರ್ಮಿಕರು, ಯುರೋಪಿಯನ್ ಒಕ್ಕೂಟದ ಸಾಮಾನ್ಯ ಕರೆನ್ಸಿಗೆ ಸೇರಿಕೊಳ್ಳದ ಪೋಲೆಂಡ್ ಮತ್ತು ರೊಮಾನಿಯಾ ದೇಶದವರೂ ಕೆಲಸ ಹುಡುಕಿಕೊಂಡು ಯು.ಕೆ.ಗೆ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಹೀಗೆ ಯು.ಕೆ.ಯಲ್ಲಿನ ಶ್ರಮಿಕ ವರ್ಗಕ್ಕೆ ಸೇರ್ಪಡೆಯಾದವರ ಅಂದಾಜು ಸಂಖ್ಯೆ 3,33,000 ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದಾಗಿ ಕಾರ್ಮಿಕ ವೇತನವು ಬಹಳ ಕಡಿಮೆಯಾಗಿದೆ ಮತ್ತು ಸಾರ್ವಜನಿಕ ಸೇವೆಗಳ ಮೇಲಿನ ಒತ್ತಡವೂ ಹೆಚ್ಚಾಗಿದೆ.

ಬ್ಲೂ ಕಾಲರ್ಡ್ ಕಾರ್ಮಿಕರು ಅಂದರೆ, ಸ್ಥಳೀಯ ಕಾರ್ಮಿಕರು ಬ್ರೆಕ್ಸಿಟ್ ಗೆ ಬೆಂಬಲ ನೀಡುತ್ತಾರೆ. ನಿರುದ್ಯೋಗ ಸಮಸ್ಯೆಯು ಸಾರ್ವಕಾಲಿಕವಾಗಿ 5% ನಷ್ಟಿದೆ. ಬ್ರಿಟಿಷ್ ಆರ್ಥಿಕತೆಗೆ ಈ ವಲಸೆಯು ಬಹಳ ಸಹಾಯ ಮಾಡಿದೆ ಎಂಬುದೇನೋ ನಿಜ. ಆದರೆ ಇವರು ಸ್ಥಳೀಯ ಜನಸಂಖ್ಯೆಯ ಕಾನೂನುಬದ್ಧ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದ್ದಾರೆ. ದುರದೃಷ್ಟವಶಾತ್ ರಾಜಕೀಯ ಕಾರಣಗಳಿಂದಾಗಿ ವಲಸಿಗರು ನಿರ್ಗಮನಕ್ಕೆ ಹೆಚ್ಚು ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ. ವಲಸೆಯಿಂದ ಆರ್ಥಿಕತೆ ಅಭಿವೃದ್ಧಿಯಾಗುತ್ತಿದ್ದು, ಬ್ರಿಟನ್ ಪ್ರತ್ಯೇಕವಾದಲ್ಲಿ ಈ ಅಭಿವೃದ್ಧಿಯು ಕುಂಠಿತವಾಗುವ ಸಾಧ್ಯತೆ ಇದೆ. ಯಾಕೆಂದರೆ ಪ್ರತ್ಯೇಕತೆಯ ನಂತರ ನಿರ್ಮಾಣವಾಗುವ ವಲಸೆಯ ಕಾನೂನುಗಳು ಯಾವ ರೀತಿ ಇರುತ್ತವೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಗೊಂದಲಗಳು ಇವೆ. ಈ ಗೊಂದಲಗಳು ಪರಿಹಾರವಾಗುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು.

 

ಉಳಿತಾಯಗಳು, ಬ್ರೆಕ್ಸಿಟ್ ನ ಒಳಿತು- ಕೆಡುಕುಗಳು

ಉಳಿತಾಯಗಳು, ಬ್ರೆಕ್ಸಿಟ್ ನ ಒಳಿತು- ಕೆಡುಕುಗಳು

ಯುರೋಪಿಯನ್ ಒಕ್ಕೂಟದಲ್ಲಿ ಇರುವುದರಿಂದ ಪ್ರತಿ ನಾಗರಿಕರೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಸದ್ಯ ಈ ನಿಟ್ಟಿನಲ್ಲಿ ಯು. ಕೆ. ವಾರ್ಷಿಕ $19 ಬಿಲಿಯನ್ ನಷ್ಟು ಕೊಡುಗೆ ನೀಡುತ್ತಿದೆ. ಈ ಹಣವನ್ನು ಯು.ಕೆ.ನಲ್ಲಿನ ಸಾರ್ವಜನಿಕ ಸೇವೆಗಳಿಗೆ ಖರ್ಚು ಮಾಡಲಾಗಿದೆ. ಆದರೂ ಬ್ರೆಕ್ಸಿಟ್ ಗೆ ಬೆಂಬಲಿಸುವ ಮಂದಿ, "ಯು.ಕೆ. ಹಣವನ್ನು ಸುಮ್ಮನೆ ಇಟ್ಟುಕೊಂಡು ಉಳಿತಾಯ ಮಾಡಬೇಕು" ಎಂದು ಹೇಳುತ್ತಾರೆ ಮತ್ತು ಅದನ್ನು ಹೇಗೆ ಖರ್ಚು ಮಾಡಬೇಕು ಎಂಬ ಬಗ್ಗೆ ಸಂಸತ್ತು ನಿರ್ಧಾರವನ್ನು ಕೈಗೊಳ್ಳಬೇಕು ಎಂದು ವಾದಿಸುತ್ತಾರೆ. ಅಂದರೆ ಸಾರ್ವಜನಿಕರಿಂದ ಕಲೆಹಾಕುವ ಶುಲ್ಕದ ಮೊತ್ತವು ಬ್ರೆಕ್ಸಿಟ್ ನ ನಂತರ ವಿಭಿನ್ನವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಪರ-ವಿರೋಧ ಅಭಿಪ್ರಾಯಗಳ ಹಗ್ಗಜಗ್ಗಾಟ ನಡೆಯಲಿದೆ.

ಯುರೋಪಿಯನ್ ಒಕ್ಕೂಟದ ಜೊತೆಗಿನ ಸದಸ್ಯತ್ವ ಶುಲ್ಕದ ಉಳಿತಾಯ ಮಾಡಬಹುದು. ವಿದೇಶಾಂಗ ನೀತಿಯಲ್ಲಿ ಬ್ರಿಟನ್ ಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುವುದರಿಂದಾಗಿ ಇತರ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಿಕೊಂಡು, ಸಿಂಗಾಪುರ ಶೈಲಿಯ ಆರ್ಥಿಕತೆಯನ್ನು ಹೊಂದಬಹುದು ಎಂಬ ನಂಬಿಕೆಯನ್ನು ಬ್ರೆಕ್ಸಿಟ್ ಗೆ ಬೆಂಬಲಿಸುವ ಮಂದಿ ಹೊಂದಿದ್ದಾರೆ. ಇನ್ನು ವಲಸೆಯನ್ನು ನಿಯಂತ್ರಣ ಮಾಡಬಹುದ್ದಾದರಿಂದ ಬ್ರಿಟನ್ ಆರ್ಥಿಕತೆಯ ಮೇಲೆ ಪರಿಣಾಮವಾಗುತ್ತದೆ.

ಬ್ಯಾಂಕ್ ಗಳೊಂದಿಗೆ ಹೆಚ್ಚಿನ ಪ್ರಮಾಣದ ವ್ಯವಹಾರ ಮಾಡುವ ಕಂಪೆನಿಗಳು ತಮ್ಮ ಪ್ರಧಾನ ಕಚೇರಿಯನ್ನು ಯುರೋಪಿಯನ್ ಒಕ್ಕೂಟದ ದೇಶಗಳಿಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಇದರಿಂದಾಗಿ ತೆರಿಗೆ ಆದಾಯ ಕುಸಿಯುವ ನಿರೀಕ್ಷೆ ಇದೆ. ಇನ್ನು ಯುರೋಪಿಯನ್ ಒಕ್ಕೂಟವನ್ನು ತೊರೆಯುವುದರಿಂದಾಗಿ ಬ್ರಿಟನ್ ವ್ಯಾಪಾರ ಸಂಬಂಧದಲ್ಲಿ ಸಮಾಲೋಚನಾ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಭಾರತವೂ ಸೇರಿದಂತೆ ಇತರೆ ದೇಶಗಳು ಬ್ರಿಟನ್ ನೊಂದಿಗೆ ವ್ಯಾಪಾರ- ವಹಿವಾಟು ನಡೆಸುವಾಗ ಚೌಕಾಶಿಗೆ ಮುಂದಾಗುತ್ತವೆ. ಈ ನಿಟ್ಟಿನಲ್ಲಿ ಬ್ರಿಟನ್ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

 

ರಫ್ತು ವ್ಯವಹಾರ ನೀತಿ ರೂಪಿಸಬೇಕು

ರಫ್ತು ವ್ಯವಹಾರ ನೀತಿ ರೂಪಿಸಬೇಕು

ಟ್ರೇಡಿಂಗ್ ವಿಚಾರದಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್ ಬೇಕು ಎಂಬುದಕ್ಕಿಂತ ಬ್ರಿಟನ್ ಗೆ ಒಕ್ಕೂಟ ದೇಶಗಳ ಅಗತ್ಯವಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇ.ಯು. ಆಂತರಿಕ ಹೂಡಿಕೆಯಿಂದ ಪ್ರಯೋಜನ ಪಡೆಯುತ್ತದೆ. 50% ಯು.ಕೆ. ರಫ್ತು ವ್ಯವಹಾರ ಯುರೋಪಿಯನ್ ಒಕ್ಕೂಟದೊಂದಿಗೆ ಇದೆ. ಈ ರಫ್ತು ವ್ಯವಹಾರದ ಅಗತ್ಯ ಬ್ರಿಟನ್ ಗೂ ಇದೆ. ಒಂದು ವೇಳೆ ಬ್ರಿಟನ್ ಇದರಿಂದ ಹೊರಬಂದರೆ ಹೊಸದಾಗಿ ರಫ್ತು ವ್ಯವಹಾರ ನೀತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದಕ್ಕೆ ಯು.ಕೆ. ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಈಗಿರುವ ಪ್ರಶ್ನೆ. ಈ ಟ್ರೇಡಿಂಗ್ ನಲ್ಲಿ ಖಂಡಿತ ಸಮಸ್ಯೆ ಎದುರಾಗುತ್ತದೆ. ಭಾರತವೂ ಸೇರಿದಂತೆ ಹಲವು ದೇಶಗಳು ಯು.ಕೆ.ಯಲ್ಲಿ ಹೂಡಿಕೆ ಮಾಡಿವೆ. ಯುರೋಪಿಯನ್ ಒಕ್ಕೂಟವು ಸಾಂಪ್ರದಾಯಿಕ ಲಿಬರಲ್ ಗೇಟ್ ವೇ ಆಗಿರುವುದರಿಂದಾಗಿ ಹೊಸ ಬದಲಾವಣೆಯು ಎಫ್ ಡಿಐ ಕಡಿಮೆ ಮಾಡುತ್ತದೆ.

ಬ್ರಿಟನ್ ಆರ್ಥಿಕತೆ ಸಂಪೂರ್ಣ ಹದಗೆಡುತ್ತದೆ. ಯುರೋಪಿಯನ್ ಒಕ್ಕೂಟದ ದೇಶಗಳು ಸೇರಿದಂತೆ ಪ್ರತಿ ಹೊರದೇಶದೊಂದಿಗೂ ಹೊಸ ಒಪ್ಪಂದವನ್ನು ಬ್ರಿಟನ್ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಯುರೋಪಿಯನ್ ಒಕ್ಕೂಟದ ಜೊತೆಗೆ ಇರುವ 750ಕ್ಕೂ ಅಧಿಕ ವಿದೇಶಿ ಒಪ್ಪಂದಗಳಲ್ಲಿ ಬ್ರಿಟನ್ ಹೊರಗುಳಿಯುತ್ತದೆ ಮತ್ತು ಹೊಸ ಒಪ್ಪಂದವನ್ನು ಆರಂಭಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ಉದ್ಯಮ ಮತ್ತು ಸೇವಾ ಕೇಂದ್ರವು ಬ್ರಿಟನ್ ನಿಂದ ಹೊರಗುಳಿಯುವುದರಿಂದಾಗಿ ಬ್ರಿಟನ್ ನಲ್ಲಿ ನಿರುದ್ಯೋಗದ ಹಾಹಾಕಾರ ಎದುರಾಗಬಹುದು. ಇನ್ನು ಬ್ರಿಟನ್ ವಿಶೇಷ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಭದ್ರತಾ ವ್ಯವಸ್ಥೆಗಾಗಿ ಅತೀ ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ. ಸೈನ್ಯ ಮತ್ತು ಸೈನ್ಯದ ಒಪ್ಪಂದಗಳಿಗಾಗಿ ಹೊಸ ಹೊಸ ನೀತಿಗಳನ್ನು ಜಾರಿಗೆ ತರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹಣದ ಅವಶ್ಯಕತೆ ಬ್ರಿಟನ್ ಗೆ ಎದುರಾಗುತ್ತದೆ. ಹೇಗೆ ಈ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತದೆ ಎಂಬುದು ಸವಾಲಾಗುತ್ತದೆ.

 

ಭಾರತದ ಮೇಲೆ ಆಗಲಿರುವ ಪರಿಣಾಮಗಳೇನು?

ಭಾರತದ ಮೇಲೆ ಆಗಲಿರುವ ಪರಿಣಾಮಗಳೇನು?

ಭಾರತದ ಪಾಲಿಗೆ ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್ ಹೆಬ್ಬಾಗಿಲು ಇದ್ದಂತೆ. ಬ್ರೆಕ್ಸಿಟ್ ನಿಂದಾಗಿ ಈ ವಿಚಾರದಲ್ಲಿ ಭಾರೀ ಬದಲಾವಣೆಯಾಗಲಿದೆ. ಬ್ರಿಟನ್ ಗೆ ಪ್ರತಿಭಾವಂತ ಕಾರ್ಮಿಕರ ಸ್ಥಿರ ಒಳಹರಿವಿನ ಅಗತ್ಯ ಬೀಳುತ್ತದೆ. ಬ್ರಿಟನ್ ನ ಮುಖ್ಯ ಭೂಭಾಗದಿಂದ ವಲಸೆ ಕಡಿಮೆ ಆಗುವುದರಿಂದಾಗಿ ಭಾರತೀಯರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಇದೆ. ಹಾಗಾಗಿ ಇದು ಭಾರತದ ಹಿತಾಸಕ್ತಿಗೆ ಹೆಚ್ಚು ಅನುಕೂಲಕರ ವಾತಾವರಣ ನಿರ್ಮಾಣ ಮಾಡಬಹುದು. ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಚುರುಕುಗೊಳಿಸುವುದಕ್ಕೆ ಯುರೋಪಿಯನ್ ಒಕ್ಕೂಟ ಪ್ರಯತ್ನಿಸುತ್ತದೆ. ಯುಎಸ್ ಮತ್ತು ಚೀನಾ ಎರಡೂ ದೇಶಗಳನ್ನು ಸಮತೋಲನದಲ್ಲಿರಿಸಿ, ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಅನಿವಾರ್ಯವಾಗಿ ಯುರೋಪಿಯನ್ ಒಕ್ಕೂಟ ಮುಂದಾಗಬಹುದು. ಇದು ಭಾರತದ ವ್ಯಾಪಾರ- ವಹಿವಾಟನ್ನು ಹೆಚ್ಚಿಸುತ್ತದೆ. ಬ್ರೆಕ್ಸಿಟ್ ನ ಪರಿಣಾಮವಾಗಿ ಕಚ್ಚಾ ವಸ್ತುಗಳ ಬೆಲೆ ಕುಸಿತ ಕಾಣಬಹುದು.

English summary

Brexit: What Is The Significance And Impact On Indian Economy

Brexit is become trending subject now. What is Brexit and how it impact on Indian economy? Here is an analysis.
Story first published: Friday, December 20, 2019, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X