For Quick Alerts
ALLOW NOTIFICATIONS  
For Daily Alerts

ಸ್ವತ್ತು ಮಾರಾಟದಿಂದ ಬರುವ ಲಾಭಕ್ಕೆ ತೆರಿಗೆ; ಮಾರ್ಪಾಡಿಗೆ ಸರ್ಕಾರ ಚಿಂತನೆ

|

ಮುಂಬರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೆಲ ಮಹತ್ವದ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ಇದರಲ್ಲಿ ಕ್ಯಾಪಿಟಲ್ ಗೇನ್ಸ್ ತೆರಿಗೆ ರಚನೆಯಲ್ಲಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಸರ್ಕಾರ ಮಗ್ನವಾಗಿದೆ. ಷೇರು, ಚಿರಾಸ್ತಿ ಮೇಲಿನ ಹೂಡಿಕೆಗಳಿಂದ ಸಿಗುವ ಲಾಭಕ್ಕೆ ವಿಧಿಸಲಾಗುವ ತೆರಿಗೆಯ ದರವನ್ನು ಏಕೀಕೃತಗೊಳಿಸುವ ಮತ್ತು ಸರಳಗೊಳಿಸುವ ಸಾಧ್ಯತೆ ಇದೆ. ಬಜೆಟ್ ವೇಳೆಗೆ ಇದರ ರೂಪುರೇಖೆ ಸಿದ್ಧಪಡಿಸಬಹುದು.

 

ಸದ್ಯಕ್ಕೆ ಆಸ್ತಿ ಅಥವಾ ಸ್ವತ್ತುಗಳ ಮೇಲೆ ಏಕರೀತಿಯಲ್ಲಿ ತೆರಿಗೆ ವ್ಯವಸ್ಥೆ ಇಲ್ಲ. ಆಸ್ತಿ ಇರಿಸಿಕೊಳ್ಳುವ ವಿವಿಧ ಅವಧಿಯ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿಧಿಸಲಾಗುತ್ತಿದೆ. ಇದಕ್ಕೆ ಏಕರೂಪ ಕೊಡುವ ಅಗತ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈಗ ಇರುವ ಕ್ಯಾಪಿಟಲ್ ಗೇನ್ಸ್ ತೆರಿಗೆ ರಚನೆ ಸಂಕೀರ್ಣವಾಗಿದೆ. ಅದರ ಮರುರಚನೆ ಆಗುವುದು ಅವಶ್ಯ. ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ಸ್ವೀಕರಿಸುತ್ತಿದ್ದೇವೆ. ಬಜೆಟ್‌ನಲ್ಲಿ ಬದಲಾವಣೆಯ ಕ್ರಮವನ್ನು ನಿರೀಕ್ಷಿಸಬಹುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ನಿತಿನ್ ಗುಪ್ತ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಅದೇ ವೇಳೆ ಅವರು ಲಾಭ ತೆರಿಗೆ ರಚನೆಯಲ್ಲಿ ಏನು ಬದಲಾವಣೆ ಆಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ನಿರಾಕರಿಸಿದ್ದಾರೆ.

ಏನಿದು ಕ್ಯಾಪಿಟಲ್ ಗೇನ್ಸ್?

ಏನಿದು ಕ್ಯಾಪಿಟಲ್ ಗೇನ್ಸ್?

ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಂಬುದು ಬಂಡವಾಳ ಹೂಡಿಕೆ ಮಾಡಿದ ಆಸ್ತಿಗಳ ಮಾರಾಟದಿಂದ ಸಿಗುವ ಲಾಭದ ಮೇಲೆ ವಿಧಿಸಲಾಗುವ ತೆರಿಗೆ. ಆದಾಯ ತೆರಿಗೆ ಕಾಯ್ದೆ ಅಡಿ ನೀಡಲಾಗಿರುವ ವಿವರಣೆ ಪ್ರಕಾರ ಈ ರೀತಿಯ ಬಂಡವಾಳ ಆಸ್ತಿ ವ್ಯಾಪ್ತಿಗೆ ಚಿರಾಸ್ತಿ ಮತ್ತು ಚರಾಸ್ತಿಗಳು ಬರುತ್ತವೆ.

ಚಿರಾಸ್ತಿ ಎಂದರೆ ಭೂಮಿ, ಮನೆ ಇತ್ಯಾದಿ ಆಸ್ತಿ. ಚರಾಸ್ತಿ ಎಂದರೆ ಷೇರು, ಈಕ್ವಿಟಿ, ಬಾಂಡ್ ಇತ್ಯಾದಿ. ಚಿರಾಸ್ತಿ ಪೈಕಿ ಕಾರು, ಪೀಠೋಕರಣ, ಬಟ್ಟೆ ಇತ್ಯಾದಿ ವೈಯಕ್ತಿಕ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಸದ್ಯ ಇರುವ ಕಾಯ್ದೆ ಪ್ರಕಾರ ಬಂಡವಾಳ ಆಸ್ತಿಯನ್ನು ದೀರ್ಘಾವಧಿಯೋ ಅಥವಾ ಅಲ್ಪಾವಧಿಯೋ ಇರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಹಾಕಲಾಗುತ್ತದೆ. ಅಲ್ಪಾವಧಿ ಹೂಡಿಕೆಯ ಅಸ್ತಿ ಮತ್ತು ದೀರ್ಘಾವಧಿ ಹೂಡಿಕೆಯ ಅಸ್ತಿಗೆ ಬೇರೆ ಬೇರೆ ರೀತಿಯ ತೆರಿಗೆಗಳಿವೆ. ತೆರಿಗೆ ಲೆಕ್ಕಾಚಾರವೂ ಬೇರೆಯೇ ಇದೆ.

ಷೇರುಗಳ ಮೇಲೆ...
 

ಷೇರುಗಳ ಮೇಲೆ...

ನೀವು ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳ ಮೇಲೆ ಹೂಡಿಕೆ ಮಾಡಿ ಒಂದು ವರ್ಷದ ನಂತರ ಅದನ್ನು ಮಾರಿ ಲಾಭ ಗಳಿಸಿದರೆ ಅದಕ್ಕೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯಲ್ಲಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಲಾಭ ಸಿಕ್ಕರೆ, ಆ ಲಾಭದ ಹಣಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಇನ್ನು, 12 ತಿಂಗಳ ಮೊದಲೇ ನೀವು ಷೇರುಗಳನ್ನು ಮಾರಿ ಗಳಿಸುವ ಲಾಭಕ್ಕೆ ಶೇ. 15ರಷ್ಟು ತೆರಿಗೆ ಹಾಕಲಾಗುತ್ತಿದೆ.

ಇನ್ನು, ಷೇರುಪೇಟೆಯಲ್ಲಿ ಲಿಸ್ಟ್ ಆಗದ ಕಂಪನಿಯ ಷೇರುಗಳನ್ನು ಖರೀದಿಸಿ ಅದನ್ನು ಎರಡು ವರ್ಷದ ಬಳಿಕ ಮಾರಿದಾಗ ಬರುವ ಲಾಭಕ್ಕೆ ದೀರ್ಘಾವಧಿ ಗಳಿಕೆ ತೆರಿಗೆ ಅನ್ವಯ ಆಗುತ್ತದೆ. ಜಮೀನು, ಸೈಟು, ಮನೆ ಇತ್ಯಾದಿ ಸ್ಥಿರಾಸ್ತಿಗೂ ಇದೇ ನಿಯಮ ಇದೆ. ಇಂಥ ಸ್ವತ್ತುಗಳ ವಿಚಾರದಲ್ಲಿ ದೇಶೀಯ ಹೂಡಿಕೆದಾರರಿಗೆ ಶೇ. 20ರಷ್ಟು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ ಇರುತ್ತದೆ. ನಾನ್-ರೆಸಿಡೆಂಟ್‌ಗಳಾದರೆ ಶೇ. 10ರಷ್ಟು ತೆರಿಗೆ ಹಾಕಲಾಗುತ್ತದೆ.

ಇನ್ನು, ಸಾಲ ನಿಧಿ (ಡೆಟ್ ಫಂಡ್), ಬಾಂಡ್ ಇತ್ಯಾದಿ ಸೆಕ್ಯೂರಿಟಿಗಳ ಮೇಲೆ ಹಣ ಹೂಡಿಕೆ ಮಾಡಿ 3 ವರ್ಷ ಬಳಿಕ ಅದನ್ನು ಮಾರಿ ಲಾಭ ಗಳಿಸಿದರೆ ದೀರ್ಘಾವಧಿ ಲಾಭ ತೆರಿಗೆ ಅನ್ವಯ ಆಗುತ್ತದೆ.

 

ಏಕರೂಪಗೊಳಿಸಲು ಮನವಿ

ಏಕರೂಪಗೊಳಿಸಲು ಮನವಿ

ಷೇರುಪೇಟೆಯಲ್ಲಿ ಲಿಸ್ಟ್ ಆದ ಷೇರುಗಳಿಂದ ಸಿಗುವ ಲಾಭ ಮತ್ತು ಲಿಸ್ಟ್ ಆಗದ ಷೇರುಗಳಿಂದ ಸಿಗುವ ಲಾಭಕ್ಕೆ ವಿಧಿಸಲಾಗುವ ತೆರಿಗೆ ಸಮಾನವಾಗಿರಲಿ ಎಂಬುದು ಹಲವರ ಬೇಡಿಕೆಯಾಗಿದೆ. ಲಿಸ್ಟ್ ಆಗದ ಷೇರುಗಳಿಗೆ ಹೆಚ್ಚಿನ ತೆರಿಗೆ ವಿಧಿಸುವುದು ಸರಿಯಲ್ಲ ಎಂಬ ಅನಿಸಿಕೆ ಇದೆ. ಇದೂ ಸೇರಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡುವಂತೆ ಹೂಡಿಕೆದಾರರು ಕೇಂದ್ರಕ್ಕೆ ಮನವಿ ಮಾಡಿರುವುದು ತಿಳಿದುಬಂದಿದೆ. ಸರ್ಕಾರ ಇದನ್ನು ಪರಿಶೀಲಿಸುತ್ತಿದ್ದು ಮುಂದಿನ ಬಜೆಟ್‌ನೊಳಗೆ ಒಂದು ಅಂತಿಮ ತೀರ್ಮಾನಕ್ಕೆ ಬರುವ ನಿರೀಕ್ಷೆ ಇದೆ.

2019ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಬಂಡವಾಳ ಗಳಿಕೆ ತೆರಿಗೆಯಲ್ಲಿ ಮಾರ್ಪಾಡು ತಂದಿತ್ತು. ಲಿಸ್ಟ್ ಆದ ಷೇರುಗಳ ಮೇಲೆ ದೀರ್ಘಾವಧಿ ಲಾಭ ಗಳಿಕೆ ತೆರಿಗೆಯನ್ನು ಮತ್ತೆ ಅಳವಡಿಸಿತ್ತು. ಕಳೆದ ಎರಡು ವರ್ಷದಲ್ಲಿ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆದಿದ್ದರಿಂದ ಸರ್ಕಾರಕ್ಕೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಮೂಲಕ ಒಳ್ಳೆಯ ಆದಾಯ ಬಂದಿದೆ.

2023-2024ರ ಬಜೆಟ್ ಅನ್ನು ಮುಂದಿನ ಫೆಬ್ರುವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯ ಅಕ್ಟೋಬರ್ ತಿಂಗಳಲ್ಲೇ ಮುಂಗಡಪತ್ರ ತಯಾರಿ ಕಾರ್ಯವನ್ನು ಆರಂಭಿಸಿತ್ತು. ಆರ್ಥಿಕ ಹಿಂಜರಿತದ ಕರಿನೆರಳು, ಹಣದುಬ್ಬರ ಇತ್ಯಾದಿ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಬಜೆಟ್ ಯಾವ ರೀತಿ ಇರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

 

English summary

Budget 2023-24: Govt May Bring Changes In Capital Gains Tax

Finance ministry is preparing for 2023-24 budget amidst global economic gloom and higher inflation situation. Sources say govt may simplify capital gains tax structure.
Story first published: Wednesday, November 16, 2022, 9:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X