For Quick Alerts
ALLOW NOTIFICATIONS  
For Daily Alerts

ಜೂನ್‌ ತಿಂಗಳಿನಲ್ಲಿ ವಾಹನಗಳ ಮಾರಾಟ ಮೂರು ಪಟ್ಟು ಹೆಚ್ಚಳ!

|

ಕೋವಿಡ್-19 ಸಾಂಕ್ರಾಮಿಕ ನಿರ್ಬಂಧಗಳು ಸಡಿಲಗೊಂಡ ಬಳಿಕ ಜೂನ್‌ನಲ್ಲಿ ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ವಾಹನ ಮಾರಾಟ ಏರಿಕೆ ಕಂಡಿದೆ.

ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನ ಒಟ್ಟಾರೆ ವಾಹನಗಳ ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಮೇ ತಿಂಗಳಿನಲ್ಲಿ 46,555 ವಾಹನಗಳಷ್ಟೇ ಮಾರಾಟವಾಗಿತ್ತು. ಆದರೆ ಇದು ಜೂನ್ ತಿಂಗಳಿನಲ್ಲಿ ಬರೋಬ್ಬರಿ 1.47 ಲಕ್ಷಕ್ಕೆ ಜಿಗಿತ ಕಂಡಿದೆ.

ಟಾಟಾ ಮೋಟಾರ್ಸ್ ದೇಶೀಯ ಮಾರಾಟವು ಶೇಕಡಾ 78ರಷ್ಟು ಏರಿಕೆಗೊಂಡಿದ್ದು 43,704 ವಾಹನಗಳನ್ನು ಕಂಪನಿಯು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ. 125ರಷ್ಟು ಹೆಚ್ಚಾಗಿದೆ.

ಜೂನ್‌ ತಿಂಗಳಿನಲ್ಲಿ ವಾಹನಗಳ ಮಾರಾಟ ಮೂರು ಪಟ್ಟು ಹೆಚ್ಚಳ!

ಹುಂಡೈ ಮೋಟರ್ ಇಂಡಿಯಾದ ವಾಹನಗಳ ಮಾರಾಟವು ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಶೇಕಡಾ 77ರಷ್ಟು ಹೆಚ್ಚಾಗಿದ್ದು, 54,474ಕ್ಕೆ ತಲುಪಿದೆ.

ಇನ್ನು ಹೋಂಡಾ ಕಾರ್ಸ್‌ನ ದೇಶೀಯ ಮಾರಾಟವು 2,032 ರಿಂದ 4,767ಕ್ಕೆ ಹೆಚ್ಚಾಗಿದೆ. ಇದರ ಜೊತೆಗೆ ಟೊಯೊಟಾ ಕಂಪನಿಯು 8,801 ವಾಹನಗಳನ್ನು ಮಾರಾಟ ಮಾಡಿದ್ದು, ಮೇ ತಿಂಗಳಿಗೆ ಹೋಲಿಸಿದರೆ 13 ಪಟ್ಟು ಹೆಚ್ಚಾಗಿದೆ.

ಮಹೀಂದ್ರಾ & ಮಹೀಂದ್ರಾ ಕಂಪನಿಯ ಒಟ್ಟಾರೆ ವಾಹನ ಮಾರಾಟವು 17,447 ರಿಂದ 32,964ಕ್ಕೆ ಏರಿಕೆಗೊಂಡಿದೆ. ಕಿಯಾ ಮೋಟಾರ್ಸ್ ವಾಹನ ಮಾರಾಟ ಶೇ. 36ರಷ್ಟು ಹೆಚ್ಚಾಗಿದ್ದು 15,015ಕ್ಕೆ ಮುಟ್ಟಿದೆ.

ಕಾರುಗಳನ್ನ ಹೊರತುಪಡಿಸಿ ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಏರಿಕೆ ಕಂಡುಬಂದಿದ್ದು ಟಿವಿಎಸ್ ಮೋಟಾರ್ 2.51 ಲಕ್ಷ ಬೈಕ್ ಮಾರಾಟ ಮಾಡಿದೆ. ಇದು ಮೇ ತಿಂಗಳಿಗೆ ಹೋಲಿಸಿದ್ರೆ ಶೇ. 51ರಷ್ಟು ಹೆಚ್ಚಾಗಿದೆ.

English summary

Car Sales June 2021: Tata, Maruti Hyundai Mahindra And Toyata

In encouraging signs for the auto sector and economy, car sales have registered strong growth in June. A total of 2.55 lakh units were sold in the month, as compared to 1.17 lakh units in June last year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X