For Quick Alerts
ALLOW NOTIFICATIONS  
For Daily Alerts

ಐಡಿಬಿಐ ಬ್ಯಾಂಕಿಗೆ 63.10 ಕೋಟಿ ರೂ. ವಂಚನೆ: ನಾಲ್ವರ ವಿರುದ್ದ ಪ್ರಕರಣ ದಾಖಲು

|

ಮುಂಬೈ ಮೂಲದ ಟಾಪ್‌ವರ್ತ್ ಸ್ಟೀಲ್ಸ್ & ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಹಾಗೂ ಅದರ ನಾಲ್ವರು ನಿರ್ದೇಶಕರ ವಿರುದ್ಧ ಸುಮಾರು 63.10 ಕೋಟಿ ರೂಪಾಯಿಯ ವಂಚನೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲು ಮಾಡಿದೆ.

ಐಡಿಬಿಡಿ ಬ್ಯಾಂಕಿಗೆ 2014 ರಿಂದ 2016 ರವರೆಗೆ ಸುಮಾರು 63.10 ಕೋಟಿ ರೂಪಾಯಿಯ ವಂಚನೆಯನ್ನು ಮುಂಬೈ ಮೂಲದ ಟಾಪ್‌ವರ್ತ್ ಸ್ಟೀಲ್ಸ್ & ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಇನ್ನು ಈ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಸುಮಾರು ಒಂಬತ್ತು ಪ್ರದೇಶಗಳಲ್ಲಿ ದಾಳಿ ನಡೆಸಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದೆ. ಈ ದಾಳಿಯು ಮುಂಬೈನಲ್ಲಿ ಮಾತ್ರವಲ್ಲದೇ ನಾಗಪುರ ಹಾಗೂ ಛತ್ತೀಸ್‌ಗಢದಲ್ಲಿ ಸಿಬಿಐ ನಡೆಸಿದೆ.

ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?

ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರೀಯ ತನಿಖಾ ದಳ (ಸಿಬಿಐ) ದ ವಕ್ತಾರ ಆರ್‌ ಸಿ ಜೋಶಿ, "ಮುಂಬೈ, ನಾಗ್ಪುರ ಮತ್ತು ಛತ್ತೀಸ್‌ಗಢ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ ದಾಳಿಯನ್ನು ನಡೆಸಿ ಶೋಧ ಕಾರ್ಯಚರಣೆ ನಡೆಸಿದೆ. ಅಗತ್ಯ ದಾಖಲೆಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ," ಎಂದು ತಿಳಿಸಿದ್ದಾರೆ.

 63.10 ಕೋಟಿ ರೂ. ವಂಚನೆ: ನಾಲ್ವರ ವಿರುದ್ದ ಪ್ರಕರಣ ದಾಖಲು

ಇನ್ನು ಈ ಮುಂಬೈ ಮೂಲದ ಟಾಪ್‌ವರ್ತ್ ಸ್ಟೀಲ್ಸ್ & ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಮಾತ್ರವಲ್ಲದೇ ಈ ಸಂಸ್ಥೆಯ ನಾಲ್ವರು ನಿರ್ದೇಶಕರ ವಿರುದ್ಧ ಸುಮಾರು 63.10 ಕೋಟಿ ರೂಪಾಯಿಯ ವಂಚನೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲು ಮಾಡಿದೆ.

ಪಂಡೋರಾ ಪೇಪರ್ ಲೀಕ್: ಸಚಿನ್ ಸೇರಿ ನೂರಾರು ಸೆಲೆಬ್ರೆಟಿಗಳ ತೆರಿಗೆ ವಂಚನೆ ಬಹಿರಂಗಪಂಡೋರಾ ಪೇಪರ್ ಲೀಕ್: ಸಚಿನ್ ಸೇರಿ ನೂರಾರು ಸೆಲೆಬ್ರೆಟಿಗಳ ತೆರಿಗೆ ವಂಚನೆ ಬಹಿರಂಗ

ಟಾಪ್‌ವರ್ತ್ ಸ್ಟೀಲ್ಸ್ & ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಾಲ್ವರು ನಿರ್ದೇಶಕರುಗಳಾದ ಸುರೇಂದ್ರ ಚಂಪಲಾಲ್‌ ಲೋದಾ, ಅಭಯ್ ನರೇಂದ್ರ ಲೋದಾ, ಅಶ್ವಿನ್‌ ನರೇಂದ್ರ ಲೋದಾ ಹಾಗೂ ನಿತೀಂಗ್‌ ಗೊಲೆಚಾ ವಿರುದ್ಧ ಕೇಂದ್ರೀಯ ತನಿಖಾ ದಳವು ದೂರು ದಾಖಲು ಮಾಡಿಕೊಂಡಿದೆ. ಆದರೆ ಬಂಧನವಾಗಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ.

ವಂಚನೆ ಮಾಡುವ ಪಿತೂರಿ ರೂಪಿಸಿದ ಸಂಸ್ಥೆ

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ದ ವಕ್ತಾರ ಆರ್‌ ಸಿ ಜೋಶಿ, "ಈ ಸಂಸ್ಥೆಯ ಮೂಲಕ ಐಡಿಬಿಡಿ ಬ್ಯಾಂಕಿಗೆ ವಂಚನೆ ಮಾಡುವ ಪಿತೂರಿಯನ್ನು ಈ ನಾಲ್ವರು ಆರೋಪಿಗಳು ಮೊದಲಿನಿಂದಲೇ ಮಾಡಿಕೊಂಡಿದ್ದಾರೆ. ಬಳಿಕ ಹಲವಾರು ಸಾಲ ಸೌಲಭ್ಯಗಳನ್ನು ಪಡೆದುಕೊಂಡು ವಂಚನೆಯನ್ನು ಮಾಡಿದ್ದಾರೆ. ಲೆಟರ್ ಆಫ್ ಕ್ರೆಡಿಟ್/ಟ್ರೇಡ್ ಕ್ರೆಡಿಟ್ ಬ್ಯಾಂಕ್ ಗ್ಯಾರಂಟಿ (ಎಲ್‌ಸಿ/ಟಿಸಿಬಿಜಿ), ಬ್ಯಾಂಕ್ ಗ್ಯಾರಂಟಿ ಮತ್ತು ನಗದು ಕ್ರೆಡಿಟ್ ಮಿತಿಗಳ ಅಡಿಯಲ್ಲಿ ಈ ವಂಚನೆಯನ್ನು ಆರೋಪಿಗಳು ಮಾಡಿದ್ದಾರೆ," ಎಂದು ಹೇಳಿದರು.

"ಈ ಆರೋಪಿಗಳ ಸಂಸ್ಥೆಯಿಂದ ನಿರಂತರ ಸಾಲವನ್ನು ಪಡೆದುಕೊಳ್ಳಲಾಗಿದೆ. ಅದು ಕೂಡಾ ಅಕ್ರಮವಾಗಿ ಸಾಲವನ್ನು ಈ ಸಂಸ್ಥೆಯು ಪಡೆದುಕೊಂಡಿದೆ. ಅದನ್ನು ಬಳಿಕ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರ್ಗೀಕರಿಸಲಾಗಿದೆ. ಇದರಿಂದಾಗಿ ಐಡಿಬಿಐ ಬ್ಯಾಂಕ್‌ಗೆ ಅಂದಾಜು 63.10 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಆರೋಪಿಗಳು ಐಡಿಬಿಐ ಬ್ಯಾಂಕ್‌ಗೆ ಅಂದಾಜು 63.10 ಕೋಟಿ ರೂಪಾಯಿ ವಂಚನೆಯನ್ನು ಮಾಡಿದ್ದಾರೆ," ಎಂದು ಕೂಡಾ ಕೇಂದ್ರೀಯ ತನಿಖಾ ದಳ (ಸಿಬಿಐ) ದ ವಕ್ತಾರ ಆರ್‌ ಸಿ ಜೋಶಿ ಉಲ್ಲೇಖ ಮಾಡಿದ್ದಾರೆ.

3 ಸಾವಿರ ಕೋಟಿ ವಂಚನೆ: ಹೈದರಾಬಾದ್‌ ಕಂಪನಿಯ ಎಂಡಿ ಇಡಿ ವಶಕ್ಕೆ3 ಸಾವಿರ ಕೋಟಿ ವಂಚನೆ: ಹೈದರಾಬಾದ್‌ ಕಂಪನಿಯ ಎಂಡಿ ಇಡಿ ವಶಕ್ಕೆ

2018 ರಲ್ಲಿ ಬಂಧನವಾಗಿದ್ದ ಇಬ್ಬರು ನಿರ್ದೇಶಕರು

ಇನ್ನು ಟಾಪ್‌ವರ್ತ್ ಸ್ಟೀಲ್ಸ್ & ಪವರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಾಲ್ವರು ನಿರ್ದೇಶಕರುಗಳ ಪೈಕಿ ಇಬ್ಬರಾದ ಸುರೇಂದ್ರ ಚಂಪಲಾಲ್‌ ಲೋದಾ, ಅಭಯ್ ನರೇಂದ್ರ ಲೋದಾ ಬಂಧನಕ್ಕೆ ಒಳಗಾಗಿದ್ದರು. ಸಾಲದಾತರಿಗೆ ನೀಡಿದ ಸುಮಾರು ಹತ್ತು ಕೋಟಿ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಇಬ್ಬರು ಬಂಧನಕ್ಕೆ ಒಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಇನ್ನು ಇದ್ದಕ್ಕೂ ಮುನ್ನ ಮುಂಬೈನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಟಾಪ್‌ವರ್ತ್ ಗ್ರೂಪ್ ಆಫ್ ಕಂಪನಿ ವಿರುದ್ಧ ಹಾಗೂ ಅದರ ನಿದೇರ್ಶಕರುಗಳ ವಿರುದ್ಧ ಹಲವಾರು ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬಂಧನದ ವಾರೆಂಟ್‌ ಅನ್ನು ನೀಡಿತ್ತು. ಈ ಇಬ್ಬರ ವಿರುದ್ಧ ಹಲವಾರು ಚೆಕ್‌ ಬೌನ್ಸ್‌ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 47 ಕೋಟಿ ಚೆಕ್‌ ಅಮಾನ್ಯ ಪ್ರಕರಣ ದಾಖಲು ಆಗಿದ್ದವು.

English summary

CBI books Mumbai firm, directors for cheating IDBI Bank of ₹63.10 cr

CBI books Mumbai-based firm for cheating IDBI Bank of Rs 63.10 crore.
Story first published: Tuesday, November 2, 2021, 14:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X