For Quick Alerts
ALLOW NOTIFICATIONS  
For Daily Alerts

ಗತಿಶಕ್ತಿ ಯೋಜನೆಗೆ ಚಾಲನೆ, ಲಾಜಿಸ್ಟಿಕ್ ದರ ಇಳಿಕೆ ಗುರಿ

|

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ [ಸಿಸಿಇಎ] ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡಿದೆ. ಬಹುಹಂತದ ಮಾದರಿಯ ಸಂಪರ್ಕ ವ್ಯವಸ್ಥೆ ಒದಗಿಸಲು ಸಾಂಸ್ಥಿಕ ಚೌಕಟ್ಟು ಅನುಷ್ಠಾನ, ಮೇಲ್ವಿಚಾರಣೆ ಮತ್ತು ಬೆಂಬಲದ ಕಾರ್ಯವಿಧಾನವನ್ನು ಇದು ಒಳಗೊಂಡಿದೆ.

2021 ರ ಅಕ್ಟೋಬರ್ 13 ರಂದು ಪಿಎಂ ಗತಿಶಕ್ತಿ ಎನ್.ಎಂ.ಪಿ ಗೆ ಗೌರವಾನ್ವಿತ ಪ್ರಧಾನಮಂತ್ರಿ ಅವರು ಚಾಲನೆ ನೀಡಿದ್ದರು. ಈ ಅನುಷ್ಠಾನದ ಚೌಕಟ್ಟಿನಲ್ಲಿ ಕಾರ್ಯದರ್ಶಿಗಳ ಸಶಕ್ತ ಗುಂಪು [ಇ.ಜಿ.ಒ.ಎಸ್], ಸಂಪರ್ಕಜಾಲದ ಯೋಜನಾ ಗುಂಪು [ಎನ್.ಪಿ.ಜಿ] ಮತ್ತು ತಾಂತ್ರಿಕ ಬೆಂಬಲ ಘಟಕ [ಟಿ.ಎಸ್.ಯು] ಗಳನ್ನು ಒಳಗೊಂಡ ತಾಂತ್ರಿಕ ಸಾಮರ್ಥ್ಯಗಳ ವ್ಯವಸ್ಥೆ ಇದರಲ್ಲಿ ಅಡಕವಾಗಿದೆ.

ಇ.ಜಿ.ಒ.ಎಸ್ ನ ಮುಖ್ಯಸ್ಥರಾಗಿ ಸಂಪುಟ ಕಾರ್ಯದರ್ಶಿ ಮತ್ತು 18 ಸಚಿವಾಲಯದ ಕಾರ್ಯದರ್ಶಿಗಳು ಈ ಸಮಿತಿಯ ಸದಸ್ಯರಾಗಿ ಇರಲಿದ್ದಾರೆ ಹಾಗೂ ಸಂಚಾಲನಾ ಸದಸ್ಯರಾಗಿ ಲಾಜಿಸ್ಟಿಕ್ಸ್ ವಿಭಾಗ ಕಾರ್ಯನಿರ್ವಹಿಸಲಿದೆ. ಲಾಜಿಸ್ಟಿಕ್ ಸಾಮರ್ಥ್ಯ ಖಚಿತಪಡಿಸಿಕೊಳ್ಳುವ ಮೂಲಕ ಪ್ರಧಾನಮಂತ್ರಿ ಗತಿಶಕ್ತಿ ಎನ್.ಎಂ.ಪಿ ಅನುಷ್ಠಾನದ ಪ್ರಗತಿ ಪರಿಶೀಲನೆಯ ಮೇಲೆ ನಿಗಾ ಇಡುವುದನ್ನು ಇ.ಜಿ.ಒ.ಎಸ್ ಗೆ ಕಡ್ಡಾಯ ಮಾಡಲಾಗಿದೆ. ಎನ್.ಎಂ.ಪಿಗೆ ಯಾವುದೇ ತಿದ್ದುಪಡಿಗಳನ್ನು ತರಲು ಮತ್ತು ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿದೆ.

ಇ.ಜಿ.ಒ.ಎಸ್ ವಿವಿಧ ಚಟುವಟಿಕೆಗಳನ್ನು ಸಂಯೋಜಿಸುವ ಕಾರ್ಯವಿಧಾನ ಮತ್ತು ನಿರ್ದಿಷ್ಟ ಚೌಕಟ್ಟನ್ನು ಸಹ ರೂಪಿಸುತ್ತದೆ. ಮೂಲ ಸೌಕರ್ಯ ಅಭಿವೃದ್ಧಿಯ ವಿವಿಧ ಉಪಕ್ರಮಗಳು ಸಾಮಾನ್ಯ, ಸಮಗ್ರ ಡಿಜಿಟಲ್ ವೇದಿಕೆಯ ಭಾಗವಾಗಿದೆಯೇ ಎಂಬುದನ್ನು ಇದು ಖಚಿತಪಡಿಸುತ್ತದೆ. ಉಕ್ಕು, ಕಲ್ಲಿದ್ದಲು, ರಸಗೊಬ್ಬರ ಇನ್ನಿತರ ಸಚಿವಾಲಯಗಳ ಅಗತ್ಯಗಳಿಗೆ ಅನುಗುಣವಾಗಿ ಬೃಹತ್ ಸರಕುಗಳನ್ನು ಪರಿಣಾಮಕಾರಿಯಾಗಿ ಸಾಗಿಸುವ, ಬೇಡಿಕೆಗಳನ್ನು ಪೂರೈಸಲು ಅಗತ್ಯವಿರುವ ಮಧ್ಯಸ್ಥಿಕೆಗಳನ್ನು ಇ.ಜಿ.ಒ.ಎಸ್ ನೋಡಿಕೊಳ್ಳಲಿದೆ.

ಗತಿಶಕ್ತಿ ಯೋಜನೆಗೆ ಚಾಲನೆ, ಲಾಜಿಸ್ಟಿಕ್ ದರ ಇಳಿಕೆ ಗುರಿ

ಸಿ.ಸಿ.ಇ.ಎ ಕೂಡ ಸಂಬಂಧಿತ ಮೂಲ ಸೌಕರ್ಯ ಸಚಿವಾಲಯಗಳ ಸಂಪರ್ಕ ಕುರಿತ ಯೋಜನಾ ವಿಭಾಗ ಮುಖ್ಯಸ್ಥರನ್ನು ಒಳಗೊಂಡ ಎನ್.ಪಿ.ಜಿ ರಚನೆ, ಸಂಯೋಜನೆ ಮತ್ತು ಉಲ್ಲೇಖಿತ ನಿಯಮಗಳನ್ನು ಇದರಡಿ ಅನುಮೋದಿಸಲಾಗಿದೆ ಮತ್ತು ಇದು ಇ.ಜಿ.ಒ.ಎಸ್‌ಗೆ ನೆರವಾಗುತ್ತದೆ.

ಇದಲ್ಲದೇ ಒಟ್ಟಾರೆ ಏಕೀಕೃತ ಜಾಲದಲ್ಲಿನ ಸಂಕೀರ್ಣತೆಗಳ ದೃಷ್ಟಿಯಿಂದ ಯಾವುದೇ ಪ್ರದೇಶದ ಅಭಿವೃದ್ಧಿ ಕೆಲಸಗಳ ನಕಲು ತಪ್ಪಿಸಲು ಹಾಗೂ ಸೂಕ್ಷ್ಮ ಯೋಜನಾ ವಿವರಗಳ ಮೂಲಕ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲು, ಪರಿಸ್ಥಿತಿಯನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸುವ, ತಾಂತ್ರಿಕ ಬೆಂಬಲದ ಘಟಕ [ಟಿ.ಎಸ್.ಯು] ಒದಗಿಸಲು ಸಹ ಅನುಮೋದಿಸಲಾಗಿದೆ. ಟಿ.ಎಸ್.ಯು ನ ಚೌಕಟ್ಟಿಗೆ ಅನುಮೋದನೆ ನೀಡಲಾಗಿದೆ. ಈ ಟಿ.ಎಸ್.ಯು ವಾಯುಯಾನ, ಸಾಗರ, ಸಾರ್ವಜನಿಕ ಸಾರಿಗೆ, ರೈಲು, ರಸ್ತೆ, ಹೆದ್ದಾರಿ, ಬಂದರು ಮುಂತಾದ ವಿವಿಧ ಮೂಲ ಸೌಕರ್ಯ ವಲಯಗಳಿಂದ ಭೂ ತಜ್ಞರನ್ನು ಒಳಗೊಂಡಿರಬೇಕು. ವಿಷಯ ಪರಿಣಿತರು [ಎಸ್.ಎಂ.ಇಗಳು], ನಗರ ಮತ್ತು ಸಾರಿಗೆ ಯೋಜನೆ, ರಚನೆಗಳು [ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳು], ವಿದ್ಯುತ್, ಪೈಪ್ ಲೈನ್, ಜಿ.ಐ.ಎಸ್, ಐ.ಸಿ.ಟಿ, ಹಣಕಾಸು/ಮಾರುಕಟ್ಟೆ, ಲಾಜಿಸ್ಟಿಕ್ಸ್, ದತ್ತಾಂಶ ವಿಶ್ಲೇಷಣೆಯನ್ನು ಸಹ ಇದು ಒಳಗೊಂಡಿದೆ.

ಪ್ರಧಾನಮಂತ್ರಿ ಗತಿಶಕ್ತಿ ಎನ್.ಎಂ.ಪಿ ಬಹುಮಾದರಿಯ ಸಂಪರ್ಕ ಮತ್ತು ಕೊನೆಯ ಮೈಲಿ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ. ಸಮಗ್ರ ಮತ್ತು ಆಮೂಲಾಗ್ರ ಯೋಜನೆ ಮತ್ತು ಯೋಜನೆಗಳ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದ ಲಾಜಿಸ್ಟಿಕ್ ದರಗಳಲ್ಲಿ ಇಳಿಕೆಯಾಗಲಿದೆ. ಗ್ರಾಹಕರು, ರೈತರು, ಯುವಸಮೂಹ ಹಾಗೂ ವ್ಯಾಪಾರದಲ್ಲಿ ತೊಡಗಿರುವವರಿಗೆ ಅಧಿಕ ಆರ್ಥಿಕ ಲಾಭ ತಂದುಕೊಡಲಿದೆ.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ಅನುಮೋದನೆ ಮತ್ತು ಅನುಷ್ಠಾನದೊಂದಿಗೆ ದೇಶದಲ್ಲಿ ಮೂಲ ಸೌಕರ್ಯ ವಲಯದ ಅಭಿವೃದ್ಧಿಯಲ್ಲಿ ಸಮಗ್ರ ಯೋಜನಾ ಚೌಕಟ್ಟನ್ನು ಒದಗಿಸಲು ಸಾಧ್ಯವಾಗಲಿದೆ.

ಈ ಅನುಮೋದನೆಯೊಂದಿಗೆ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ವಿವಿಧ ಪಾಲುದಾರರನ್ನು ಒಂದೆಡೆ ತರಲಿದೆ ಮತ್ತು ವಿವಿಧ ಸಾರಿಗೆ ವಿಧಾನಗಳನ್ನು ಸಂಯೋಜಿಸಲು ಸಹಾಯ ಮಾಡಲಿದೆ. ಬಹುಮಾದರಿಯ ಸಂಪರ್ಕ ವ್ಯವಸ್ಥೆಗೆ ಪ್ರಧಾನಮಂತ್ರಿ ಗತಿಶಕ್ತಿ - ಎನ್.ಎಂ. ಪಿ ಕೇಂದ್ರದಲ್ಲಿ ಭಾರತದ ತಯಾರಕರು, ಭಾರತದ ಜನರು, ಭಾರತದ ಕೈಗಾರಿಕೆಗಳು ಮತ್ತು ಭಾರತದ ರೈತರನ್ನೊಳಗೊಂಡ ಸಮಗ್ರ ಆಡಳಿತವನ್ನು ಇದು ಖಚಿತಪಡಿಸುತ್ತದೆ.

English summary

CCEA Approves PM Gati Shakti National Master Plan

The Cabinet Committee on Economic Affairs (CCEA) has approved the PM GatiShakti National Master Plan, which includes the institutional framework for multimodal connectivity rollout, implementation, monitoring, and support mechanisms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X