ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿಯೇ ಪ್ರಯಾಣಿಕರ ಪ್ರಮಾಣ ಅಧಿಕವಾಗಲಿದೆ. ಪ್ರಯಾಣಿಕರ ದಟ್ಟಣೆ ತಪ್ಪಿಸಲು ಭಾರತೀಯ ರೈಲ್ವೆ ವಿವಿಧ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಆರಂಭ ಮಾಡುತ್ತಿದೆ.
ರೈಲುಗಳ ವೇಳಾಪಟ್ಟಿ, ನಿಲ್ದಾಣದ ವಿವರಗಳನ್ನು ಪ್ರಕಟಿಸುತ್ತಿದೆ. ಬೆಂಗಳೂರು ವಿಜಯಪುರ ನಡುವೆಯೇ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ವಿಜಯಪುರ ನಡುವೆ ದೀಪಾವಳಿ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಘೋಷಣೆ ಮಾಡಿದೆ.

ವಿಶೇಷ ರೈಲುಗಳ ವಿವರ ಇಲ್ಲಿದೆ
ರೈಲು ಸಂಖ್ಯೆ 06231/ 06232 ಬೆಂಗಳೂರು-ವಿಜಯಪುರ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ಈ ವಿಶೇಷ ರೈಲು 16 ಬೋಗಿಯನ್ನು ಒಳಗೊಂಡಿದೆ. ವಿಶೇಷ ರೈಲಿನ ವೇಳಾಪಟ್ಟಿ, ನಿಲ್ದಾಣದ ಮಾಹಿತಿಯನ್ನು ನೈಋತ್ಯ ರೈಲ್ವೆ ಘೋಷಿಸಿದೆ.
ನವೆಂಬರ್ 10ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರೈಲು ಸಂಖ್ಯೆ 06231 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ವಿಜಯಪುರ ನಡುವಿನ ವಿಶೇಷ ರೈಲು ಸಂಜೆ 7 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10.55ಕ್ಕೆ ವಿಜಯಪುರ ತಲುಪಲಿದೆ.
ಯಾವ ಸಮಯಕ್ಕೆ ರೈಲು ಎಲ್ಲಿ ತಲುಪಲಿದೆ?
ಈ ರೈಲು ತುಮಕೂರು (8.30/ 8.32), ಅರಸೀಕರೆ (10.20/ 10.25), ಬೀರೂರು (11.05/ 11.07), ಚಿಕ್ಕಜಾಜೂರು (11.55/ 11.57), ಚಿತ್ರದುರ್ಗ (12.35/ 12.37), ರಾಯದುರ್ಗ (2.20/ 2.22), ಬಳ್ಳಾರಿ (3.43/ 3.45), ತೋರಣಗಲ್ಲು (4.13/ 4.15) ಹೊಸಪೇಟೆ (4.45/ 4.50), ಮುನಿರಾಬಾದ್ ( 4.57/ 4.58), ಕೊಪ್ಪಳ (5.18/ 5.20), ಗದಗ (6.03/ 06.05), ಬಾದಾಮಿ (7.13/ 7.15), ಬಾಗಲಕೋಟೆ (7.43/ 7.45), ಆಲಮಟ್ಟಿ (8.18/ 8.20) ಆಗಮನ/ ನಿರ್ಗಮನವಾಗಲಿದೆ.
ನವೆಂಬರ್ 14 ರ ವಿಶೇಷ ರೈಲು
ಒಂದು ಟ್ರಿಪ್ ವಿಶೇಷ ರೈಲು ವಾಪಸ್ ಆಗುವ ದಿಕ್ಕಿನಲ್ಲಿ ನವೆಂಬರ್ 14ರಂದು ಹೊರಡಲಿದೆ. ರೈಲು ಸಂಖ್ಯೆ 06232 ವಿಜಯಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ರೈಲು ಸಂಜೆ 5 ಗಂಟೆಗೆ ವಿಜಪುರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 9.30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.
ವಿಜಯಪುರದಿಂದ ಹೊರಡು ರೈಲು ಆಲಮಟ್ಟಿ (6.03/ 06.05), ಬಾಗಲಕೋಟೆ (06.53/ 06.55), ಬಾದಾಮಿ (7.18/ 7.20), ಗದಗ (9.13/ 9.15), ಕೊಪ್ಪಳ (10.13/ 10.15), ಮುನಿರಾಬಾದ್ (10.33/ 10.35), ಹೊಸಪೇಟೆ (10.55/ 11), ತೋರಣಗಲ್ಲು (11.33/ 11.35), ಬಳ್ಳಾರಿ (12/ 12.02), ರಾಯದುರ್ಗ (3/ 03.02), ಚಿತ್ರದುರ್ಗ (4.30/ 4.32), ಚಿಕ್ಕಜಾಜೂರು (5.10/ 5.12), ಬೀರೂರು (6.08/ 6.10), ಅರಸೀಕೆರೆ (6.50/ 6.52) ಮತ್ತು ತುಮಕೂರು (8.30/ 8.32) ಆಗಮನ/ ನಿರ್ಗಮನವಾಗಲಿದೆ.
ಈ ವಿಶೇಷ ರೈಲು ಒಂದು ಎಸಿ 2 ಭೋಗಿ, ಮೂರು ಎಸಿ 3 ಭೋಗಿ, ಎಂಟು ಸ್ಲೀಪರ್, ಎರಡು ಸಾಮಾನ್ಯ 2ನೇ ದರ್ಜೆ, ಎರಡು ಎರಡನೇ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್/ ದಿವ್ಯಾಂಗ ಬೋಗಿ ಸೇರಿದಂತೆ ಒಟ್ಟಾಗಿ 16 ಬೋಗಿಯನ್ನು ಒಳಗೊಂಡಿದೆ.
ರೈಲು ನಂಬರ್ 09057 ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಉಧಾನ್ ಜಂಕ್ಷನ್‌ನಿಂದ 19.45ಕ್ಕೆ ಶುಕ್ರವಾರ ಮತ್ತು ಭಾನುವಾರ ಹೊರಡಲಿದೆ. ನವೆಂಬರ್ 3, 5, 10, 12, 17, 19, 24, 26ರಂದು ಸಂಚಾರ ನಡೆಸಲಿದೆ.
ಡಿಸೆಂಬರ್ ತಿಂಗಳಿನಲ್ಲಿ 1, 3, 8, 10, 15, 17, 22, 24, 29 ಮತ್ತು 31 ರಂದು ಸಂಚಾರ ನಡೆಸಲಿದೆ. ಉಧಾನ್ ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ 19:10ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ನಂಬರ್ 09058 ಮಂಗಳೂರು ಜಂಕ್ಷನ್ ಉಧಾನ್ ಜಂಕ್ಷನ್ ವಿಶೇಷ ದರದ ರೈಲು ಮಂಗಳೂರು ಜಂಕ್ಷನ್‌ನಿಂದ 21:10ಕ್ಕೆ ಶನಿವಾರ ಮತ್ತು ಸೋಮವಾರ ಹೊರಡಲಿದೆ. ನವೆಂಬರ್ 4, 6, 11, 13, 18, 20, 25 ಮತ್ತು 27ರಂದು ಸಂಚಾರ ನಡೆಸಲಿದೆ.
ಡಿಸೆಂಬರ್ ತಿಂಗಳಿನಲ್ಲಿ 2, 4, 9, 11, 16, 18, 23, 25, 30 ಮತ್ತು ಜನವರಿ 1ರಂದು ಸಂಚಾರ ನಡೆಸಲಿದೆ. ಮಂಗಳೂರಿನಿಂದ ಹೊರಡುವ ರೈಲು ಮರುದಿನ 21:30ಕ್ಕೆ ಉಧಾನ್ ಜಂಕ್ಷನ್ ತಲುಪಲಿದೆ.


Click it and Unblock the Notifications