For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಏರಿಕೆ: ಪಾದರಕ್ಷೆ, ಬಟ್ಟೆ ಹೊಸ ವರ್ಷದಿಂದ ದುಬಾರಿ!

|

ಕೇಂದ್ರ ಸರ್ಕಾರವವು ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಅನ್ನು ಅಧಿಕ ಮಾಡಿದ ಕಾರಣದಿಂದಾಗಿ ಜನವರಿ 1, 2022 ರಿಂದ ಬಟ್ಟೆಗಳು ಹಾಗೂ ಪಾದರಕ್ಷೆಗಳು ದುಬಾರಿ ಆಗಲಿದೆ. ಬಟ್ಟೆಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗು‌ತ್ತದೆ. ಈ ಏರಿಕೆಯು ಪ್ರಮುಖವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲಿದೆ.

ಇನ್ನು ವ್ಯಾಪಾರಿಗಳು ಆಧಾರ್‌ ಕಾರ್ಡ್‌ನ ವೆರಿಫಿಕೇಶನ್‌ ಅನ್ನು ಮಾಡಿದ್ದರೆ ಮಾತ್ರ ಜಿಎಸ್‌ಟಿ ಮರು ಪಾವತಿ ಆಗಲಿದೆ. ತೆರಿಗೆ ಪಾವತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇನ್ನು ಆಧಾರ್‌ನ ವೆರಿಫಿಕೇಶನ್‌ ಮಾಡದಿದ್ದರೆ, ಆಧಾರ್‌ನಲ್ಲಿ ಜಿಎಸ್‌ಟಿಆರ್‌-1 ಸಲ್ಲಿಕೆಯು ಸಾಧ್ಯವಾಗಲಾರದು. ಇದರಿಂದಾಗಿ ವ್ಯಾಪಾರಿಗಳಿಗೆ ಐಟಿ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗಲಾರದು.

ಉಡುಪು, ಪಾದರಕ್ಷೆ ಜಿಎಸ್‌ಟಿ ಶೇ. 12 ಕ್ಕೆ ಏರಿಕೆ: ವ್ಯಾಪಾರಸ್ಥರು ಗರಂಉಡುಪು, ಪಾದರಕ್ಷೆ ಜಿಎಸ್‌ಟಿ ಶೇ. 12 ಕ್ಕೆ ಏರಿಕೆ: ವ್ಯಾಪಾರಸ್ಥರು ಗರಂ

ಈಗಾಗಲೇ ಕೇಂದ್ರ ಸರ್ಕಾರವು ಜಿಎಸ್‌ಟಿ ಪಾವತಿಯನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಗ್ರಾಹಕರು ಜೊಮ್ಯಾಟೊ ಹಾಗೂ ಸ್ವಿಗ್ಗಿ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್‌ ಮಾಡಿದರೆ, ಆಹಾರದ ಮೇಲೆ ಶೇಕಡ 5 ರಷ್ಟು ತೆರಿಗೆಯನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್‌ಗಳಿಗೆ ನೀಡುತ್ತಿದ್ದವು. ಆದರೆ ಕೆಲವು ರೆಸ್ಟೋರೆಂಟ್‌ಗಳು ಈ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಲ್ಲ. ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಆದರೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿಲ್ಲ. ಕೆಲವು ರೆಸ್ಟೋರೆಂಟ್‌ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಫುಡ್‌ ಡೆಲಿವರಿ ಆಪ್ಲಿಕೇಷನ್‌ಗಳು ಜನವರಿ 1 ರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯವನ್ನು ಮಾಡಲಿದೆ.

 ಜಿಎಸ್‌ಟಿ ಏರಿಕೆ: ಪಾದರಕ್ಷೆ, ಬಟ್ಟೆ ಹೊಸ ವರ್ಷದಿಂದ ದುಬಾರಿ!

ಜನವರಿ ಒಂದರಿಂದ ಶೇಕಡ 12 ರಷ್ಟು ಜಿಎಸ್‌ಟಿ

ಜನವರಿ ಒಂದರಿಂದ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‌ಟಿಯು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಈ ಹಿನ್ನೆಲೆಯಿಂದಾಗಿ ಮುಂದಿನ ವರ್ಷದಿಂದ ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆಯು ದುಬಾರಿಯಾಗಲಿದೆ. ಇನ್ನ ಈ ವೇಳೆ ಹತ್ತಿಯ ವಸ್ತುಗಳಿಗೆ ವಿನಾಯತಿ ನೀಡಲಾಗಿದೆ. ಹಾಗಾಗಿ ಹತ್ತಿಯ ಬಟ್ಟೆಗಳ ಬೆಲೆಯಲ್ಲಿ ಯಾವುದೇ ಏರಿಕೆ ಆಗುವ ಸಾಧ್ಯತೆ ಇಲ್ಲ. ಹತ್ತಿಯ ಬಟ್ಟೆಗಳ ಮೇಲಿನ ಜಿಎಸ್‌ಟಿ ಈ ಹಿಂದಿನಂತೆಯೇ ಶೇಕಡ 5 ಆಗಿರುತ್ತದೆ.

ಸಿದ್ಧ ಉಡುಪುಗಳು, ಜವಳಿಗಳು ಹಾಗೂಪಾದರಕ್ಷೆಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯನ್ನು (ಜಿಎಸ್‌ಟಿ) ಕೇಂದ್ರ ಸರ್ಕಾರವು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕ ಘೋಷಣೆ ಮಾಡಿದ ಬಳಿಕ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ನವೆಂಬರ್‌ 18 ರಂದು ಈ ಸೂಚನೆಯನ್ನು ನೀಡಿದೆ. ಉಡುಪುಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯು 2022 ರ ಜನವರಿ ತಿಂಗಳಿನಿಂದ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಬಟ್ಟೆಗಳು ಅಥವಾ ಸರ್ವಿಯೆಟ್‌ಗಳು, ರಗ್ಗುಗಳು ಮತ್ತು ಟೇಪ್‌ಸ್ಟ್ರಿಗಳಂತಹ ಪರಿಕರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ಜಿಎಸ್‌ಟಿ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ಯಾವುದೇ ಬೆಲೆಯ ಚಪ್ಪಲಿಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗಿದೆ.

 ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!</a><a href=" title=" ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!" /> ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

ಈ ನಿಟ್ಟಿನಲ್ಲಿ ವ್ಯಾಪಾರಸ್ಥರು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), "ಸರ್ಕಾರವು ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಸರಳ ಮಾಡುವ ಬದಲಾಗಿ ಅದನ್ನು ಇನ್ನಷ್ಟೇ ಕಠಿಣ ಮಾಡುತ್ತಿದೆ," ಎಂದು ಹೇಳಿದೆ. ಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಬಾರ್ತಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, "ಹತ್ತಿ ಜವಳಿ ಉದ್ಯಮದಲ್ಲಿ ಯಾವುದೇ ಕಠಿಣ ತೆರಿಗೆ ರಚನೆ ಇರಲಿಲ್ಲ. ಹಾಗಿರುವಾಗ ಜವಳಿ ಮೇಲೆ ಜಿಎಸ್‌ಟಿಯನ್ನು ಶೇಕಡ 12 ಕ್ಕೆ ಏಕೆ ಏರಿಕೆ ಮಾಡಲಾಗಿದೆ," ಎಂದು ಪ್ರಶ್ನಿಸಿದ್ದಾರೆ. "ರೊಟ್ಟಿ, ಬಟ್ಟೆ ಹಾಗೂ ಮನೆ ಜೀವನದ ಮೂರು ಮೂಲಭೂತ ವಿಷಯಗಳು. ಬೆಲೆ ಏರಿಕೆಯ ಪರಿಣಾಮದಿಂದಾಗಿ ಈಗಾಗಲೇ ಆಹಾರದ ಬೆಲೆಯು ಏರಿಕೆ ಆಗಿದೆ. ಮನೆ ಖರೀದಿಯು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಈಗ ಬಟ್ಟೆಯನ್ನು ಕೂಡಾ ಖರೀದಿಸಲು ಸಾಧ್ಯವಾಗದಂತೆ ಜಿಎಸ್‌ಟಿ ಕೌನ್ಸಿಲ್‌ ಮಾಡಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary

Clothes, Footwear To Get Costlier As GST Rates Change From January 1, 2022

Clothes, Footwear To Get Costlier As GST Rates Change From January 1, 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X