ಭಾರತದ ಆರ್ಥಿಕ ಪ್ರಗತಿ ಸ್ಥಿರದಿಂದ ಅಸ್ಥಿರತೆಯಡೆಗೆ; ರೇಟಿಂಗ್ ಏಜೆನ್ಸಿಸ್

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ ಮತ್ತು ಹೆಚ್ಚಿನ ಸಾರ್ವಜನಿಕ ಸಾಲದ ಮೇಲಿನ ಅವಲಂಬನೆಗಳನ್ನು ಬಹಿರಂಗಪಡಿಸಿದೆ ಎಂದು ರೇಟಿಂಗ್ ಏಜೆನ್ಸಿಗಳಾದ ಮೂಡೀಸ್ ಹಾಗೂ ಫಿಚ್ ಹೇಳಿವೆ.

ಮೂಡೀಸ್ ಭಾರತದ ಆರ್ಥಿಕ ಪ್ರಗತಿಗೆ ಬಗ್ಗೆ 22 ವರ್ಷಗಳಲ್ಲಿ ಕಡಿಮೆ ರೇಟಿಂಗ್ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇಕಡಾ 5 ರಷ್ಟು ಕುಗ್ಗುವ ನಿರೀಕ್ಷೆಯಿದೆ ಮತ್ತು ಅದು 2022 ರ ಹಣಕಾಸಿನ ವರ್ಷದಲ್ಲಿ ಶೇಕಡಾ 9.5 ರಷ್ಟು ಏರಿಕೆಯಾಗಬಹುದು ಎಂದು ಅಂದಾಜಿಸಿದೆ.

ಇನ್ನೊಂದೆಡೆ ಭಾರತದ ಆರ್ಥಿಕ ಸ್ಥಿತಿ ಬಗ್ಗೆ ಜಾಗತಿಕ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ ಕೂಡ ಭಾರತದ ಆರ್ಥಿಕ ಪ್ರಗತಿಯ ದೃಷ್ಟಿಕೋನವನ್ನು ಸ್ಥಿರದಿಂದ ಅಸ್ಥಿರತೆಯಡೆಗೆ ಎಂದು ಪರಿಷ್ಕರಿಸಿದೆ. ಸಮಾಧಾನಕರ ಸಂಗತಿಯಂದರೆ ಫಿಚ್ ಅಂದಾಜಿನ ಪ್ರಕಾರ, ಬ್ಯಾಂಕಿಂಗ್ ಕ್ಷೇತ್ರದ ನಿಷ್ಕ್ರಿಯ ಸಾಲ (ಎನ್‌ಪಿಎಲ್) ಅನುಪಾತವು ಎರಡು ವರ್ಷದ ಹಿಂದಿನ ಶೇಕಡಾ 11.6 ರಿಂದ ಈ ವರ್ಷ ಶೇ 9.0 ಕ್ಕೆ ಸುಧಾರಿಸಿದೆ ಎಂದು ಫಿಚ್ ಹೇಳಿದೆ.

'ಭಾರತದ ಆರ್ಥಿಕ ಪ್ರಗತಿ ಸ್ಥಿರದಿಂದ ಅಸ್ಥಿರತೆಯಡೆಗೆ'

ಕೊರೊನಾವೈರಸ್ ನಂತರದ ಪರಿಣಾಮವಾಗಿ 2021 ರಲ್ಲಿ ಸರ್ಕಾರದ ಸಾಮಾನ್ಯ ಸಾಲವು ಜಿಡಿಪಿಯ ಶೇಕಡಾ 71.0 ರಿಂದ 84.5 ಕ್ಕೆ ಏರಲಿದೆ ಎಂದು ಫಿಚ್ ನಿರೀಕ್ಷಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+