ದೀಪಾವಳಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಬ್ಬ ಎಂದಾಗ ಎಲ್ಲೆಡೆ ಸಂಭ್ರಮ ತುಂಬಿಕೊಂಡಿರುತ್ತದೆ. ನಮ್ಮ ಮನೆಯಿಂದ ನೆಂಟರ ಮನೆಗೆ, ನೆಂಟರ ಮನೆಯಿಂದ ನಮ್ಮ ಮನೆಗೆ ಹೀಗೆ ಪ್ರಯಾಣ ಮಾಡುತ್ತೇವೆ. ಅದು ಮಾತ್ರವಲ್ಲದೆ ನಾವು ಪ್ರವಾಸ ಪ್ಲ್ಯಾನ್ ಮಾಡುವುದು ಕೂಡಾ ಇದೆ.
ಹಾಗಿದ್ದಾಗ ನಮ್ಮ ಪ್ರಯಾಣವನ್ನು ಸುಗಮ ಹಾಗೂ ಸರಳಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಹಲವಾರು ವಿಶೇಷ ರೈಲು ಸೇವೆಗಳನ್ನು ಆರಂಭ ಮಾಡಿದೆ. ದೇಶದಾದ್ಯಂತ ಈ ವಿಶೇಷ ರೈಲುಗಳ ಇರಲಿದೆ. ಅಂತಹುದ್ದೆ ಒಂದು ವಿಶೇಷ ರೈಲು ಸಮಯ, ಸ್ಥಳ, ವಿವರ ಇಲ್ಲಿ ನೀಡಿದ್ದೇವೆ ಮುಂದೆ ಓದಿ.....

ದೀಪಾವಳಿ ವಿಶೇಷ ರೈಲು
ದಕ್ಷಿಣ ರೈಲ್ವೆಯು ವಿಶೇಷ ವಂದೇ ಭಾರತ್ ರೈಲನ್ನು ಘೋಷಿಸಿದ್ದು, ಇದು ದಕ್ಷಿಣದ ಜಿಲ್ಲೆಗಳಿಗೆ ಸೇರಿದ ಜನರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಹಾಯವಾಗಲಿದೆ. ಈ ವಿಶೇಷ ವಂದೇ ಭಾರತ್ ರೈಲು ಸೇವೆಯು ಚೆನ್ನೈ- ತಿರುನೆಲ್ವೇಲಿಯ ನಡುವೆ ಇರಲಿದೆ. ಈ ಬಗ್ಗೆ ದಕ್ಷಿಣ ರೈಲ್ವೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
"ಕಾರ್ ನಂ. 06067 ಚೆನ್ನೈ ಎಗ್ಮೋರ್-ತಿರುನೆಲ್ವೇಲಿ ವಂದೇ ಭಾರತ್ ರೈಲು ನವೆಂಬರ್ 9 ರಂದು ಬೆಳಿಗ್ಗೆ 6 ಗಂಟೆಗೆ ಎಗ್ಮೋರ್‌ನಿಂದ ಹೊರಟು ಮಧ್ಯಾಹ್ನ 2.15 ಕ್ಕೆ ತಿರುನಲ್ವೇಲಿಗೆ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11.15ಕ್ಕೆ ಚೆನ್ನೈ ಎಗ್ಮೋರ್ ತಲುಪಲಿದೆ. 8 ಕೋಚ್‌ಗಳನ್ನು ಹೊಂದಿರುವ ವಂದೇ ಭಾರತ್ ರೈಲು ತಾಂಬರಂ, ವಿಲ್ಲುಪುರಂ, ತಿರುಚ್ಚಿ, ದಿಂಡಿಗಲ್, ಮಧುರೈ ಮತ್ತು ವಿರುಧುನಗರ ರೈಲು ನಿಲ್ದಾಣಗಳಲ್ಲಿ ನಿಲ್ಲಲಿದೆ," ಎಂದು ದಕ್ಷಿಣ ರೈಲ್ವೆ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ತಾಂಬರಂ - ನಾಗರಕೋಯಿಲ್ ವಿಶೇಷ ರೈಲು
ಇದಲ್ಲದೆ, ಮತ್ತೊಂದು ದೀಪಾವಳಿ ವಿಶೇಷ ರೈಲು ತಾಂಬರಂ-ನಾಗರ್ಕೋಯಿಲ್ ಮಾರ್ಗವಾಗಿ ಸಂಚಾರ ಮಾಡಲಿದೆ. ಅದರಂತೆ, ವಿಶೇಷ ರೈಲು (06061) ಶುಕ್ರವಾರದಂದು ತಾಂಬರಂನಿಂದ ಕಾರ್ಯನಿರ್ವಹಿಸಲಿದೆ. ನವೆಂಬರ್ 10, 17 ಮತ್ತು 24 ರಂದು ಕಾರ್ಯನಿರ್ವಹಿಸುತ್ತದೆ . ತಾಂಬರಂನಿಂದ ರಾತ್ರಿ 07:30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07:10 ಕ್ಕೆ ನಾಗರಕೋಯಿಲ್ ತಲುಪುತ್ತದೆ.
ಈ ರೈಲು ಚೆಂಗಲ್ಪಟ್ಟು, ವಿಲ್ಲುಪುರಂ, ವಿರುಧಾಚಲಂ, ತಿರುಚ್ಚಿ, ದಿಂಡಿಗಲ್, ಮಧುರೈ, ವಿರುಧುನಗರ, ಸತ್ತೂರ್, ಕೋವಿಲ್ಪಟ್ಟಿ, ತಿರುನಲ್ವೇಲಿ ಮತ್ತು ವಲ್ಲಿಯೂರ್ ರೈಲು ನಿಲ್ದಾಣಗಳಲ್ಲಿ ನಿಲ್ಲಲಿದೆ.
ನೀವು ಚೆನ್ನೈನಲ್ಲಿದ್ದೀರಾ?, ಈಗಲೇ ಬುಕ್ ಮಾಡಿ
ಈ ರೈಲಿನಲ್ಲಿ ಎಂಟು 8 ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಇರುವ ಸಾಧ್ಯತೆ ಇದೆ. ವಿಶೇಷ ರೈಲು ಸೇವೆಗೆ ಟಿಕೆಟ್ ಬುಕ್ ಮಾಡಲು ಈಗ ಅವಕಾಶ ನೀಡಲಾಗಿದೆ. ಇನ್ನು ಪ್ರಮುಖವಾಗಿ ಈ ಮಾರ್ಗದಲ್ಲಿ ಸಾಮಾನ್ಯ ರೈಲುಗಳ ಬುಕಿಂಗ್ ಸುಮಾರು ಮೂರು ತಿಂಗಳ ಹಿಂದೆ ಸಂಪೂರ್ಣವಾಗಿ ಮಾರಾಟವಾಗಿದೆ. ದೀಪಾವಳಿ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ಹಬ್ಬದ ಸಂದರ್ಭದಲ್ಲಿ ಜನರ ದಟ್ಟಣೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರಂಭಿಸಲಾಗಿದೆ.


Click it and Unblock the Notifications