For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಮುಖ್ಯಸ್ಥರನ್ನೇ ಹಿಂದಿಕ್ಕಿದ ಎಲಾನ್ ಮಸ್ಕ್

|

ಜಗತ್ತಿನ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಎಲಾನ್ ಮಸ್ಕ್ ಅಗ್ರ ಶ್ರೇಯಾಂಕಕ್ಕೆ ತಲುಪಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್ ಎಸ್ಕ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಓ) ಆಗಿರುವ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಷ್ಟೇ ಅಲ್ಲ. ಬಿಲೇನಿಯರ್ ಆಗಿರುವ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಇಬ್ಬರ ಬಳಿಯಿರುವಷ್ಟು ಆಸ್ತಿಯನ್ನು ಮಸ್ಕ್ ಒಬ್ಬರೇ ಹೊಂದಿದ್ದಾರೆ.

 

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, 50 ವರ್ಷ ವಯಸ್ಸಿನ ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯ 230 ಬಿಲಿಯನ್ ಡಾಲರ್ ಆಗಿದೆ. 130 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಬಿಲ್ ಗೇಟ್ಸ್ ನಾಲ್ಕನೇ ಸ್ಥಾನದಲ್ಲಿದ್ದರೆ, 102 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಬಫೆಟ್ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಬಿಲ್ ಗೇಟ್ಸ್ ಮತ್ತು ಬಫೆಟ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಒಂದು ಕಾಲದಲ್ಲಿ ಜಗತ್ತಿನ ಅಗ್ರಮಾನ್ಯ ಶ್ರೀಮಂತರು ಎನಿಸಿದವರನ್ನೇ ಹಿಂದಿಕ್ಕಿರುವ ಎಲಾನ್ ಮಸ್ಕ್ ಅಗ್ರಸ್ಥಾನಕ್ಕೆ ಏರಿದ್ದಾರೆ.

 

ಸಲ್ಮಾನ್ ಖಾನ್ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ ಬಾಡಿಗೆ ತಿಂಗಳಿಗೆಷ್ಟಿದೆ? ಸಲ್ಮಾನ್ ಖಾನ್ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ ಬಾಡಿಗೆ ತಿಂಗಳಿಗೆಷ್ಟಿದೆ?

ಕಳೆದ 2017ರಿಂದ ಜಗತ್ತಿನ ಶ್ರೀಮಂತ ವ್ಯಕ್ತಿಯ ಸ್ಥಾನದಲ್ಲಿ ಅಮೆಜಾನ್ ಸಿಇಓ ಜೆಫ್ ಬೆಜೋಸ್ ಗುರುತಿಸಿಕೊಂಡಿದ್ದರು. ಆದರೆ ಜನವರಿ ತಿಂಗಳಿನಲ್ಲಿ 185 ಬಿಲಿಯನ್ ಡಾಲರ್ ಗಿಂತ ಹೆಚ್ಚು ನಿವ್ವಳ ಆದಾಯ ಗಳಿಸುವುದರ ಮೂಲಕ ಎಲಾನ್ ಮಸ್ಕ್, ಮೊದಲ ಬಾರಿಗೆ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಆಸ್ತಿ 230 ಬಿಲಿಯನ್ ಡಾಲರ್!

60 ಬಿಲಿಯನ್ ಡಾಲರ್ ಹೆಚ್ಚುವರಿ ಆದಾಯ:

ಈ ವರ್ಷ ಟೆಸ್ಲಾ ಷೇರುಗಳ ಉತ್ತಮ ಕಾರ್ಯಕ್ಷಮತೆ ಹಾಗೂ ಸ್ಪೇಸ್‌ಎಕ್ಸ್‌ನಲ್ಲಿ ಇತ್ತೀಚೆಗೆ ಷೇರು ಮಾರಾಟದಿಂದ 100 ಶತಕೋಟಿ ಡಾಲರ್ ಏರಿಕೆಯಾಗಿದ್ದು, ಮಸ್ಕ್ ಸಂಪತ್ತಿಗೆ 60 ಬಿಲಿಯನ್‌ ಡಾಲರ್ ಗಿಂತ ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ಪ್ರಕಾರ, ಸ್ಪೇಸ್‌ಎಕ್ಸ್ ಒಪ್ಪಂದದಿಂದ ಮಸ್ಕ್‌ನ ನಿವ್ವಳ ಮೌಲ್ಯಕ್ಕೆ 11 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ.

ಬೆಜೋಸ್ ಅವರು, ಟೆಸ್ಲಾ ಎಕ್ಸಿಕ್ಯುಟಿವ್ ಅವರಿಗೆ ಬೆಳ್ಳಿ ಪದಕ ಎಮೋಜಿಯನ್ನು ಟ್ವೀಟ್ ಮಾಡಿದಾಗ ಅವರು ಇತ್ತೀಚೆಗೆ ಮಸ್ಕ್ ಟ್ರೋಲಿಂಗ್‌ಗೆ ಒಳಗಾಗಿದ್ದರು, ಈಗಲೂ 191 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಎಲಾನ್ ಮಸ್ಕ್ ವಿರುದ್ಧ ಟೀಕೆ:

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಇದೀಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬಿಲ್ ಗೇಟ್ಸ್ ಮತ್ತು ಬಫೆಟ್ ಇಬ್ಬರೂ ಪರೋಪಕಾರಿ ಹಾಗೂ ಜನಪ್ರಿಯ ಕಾರ್ಯಗಳಿಗೆ ದಾನವನ್ನು ನೀಡದಿದ್ದರೆ ಸಂಪತ್ತಿನ ಶ್ರೇಯಾಂಕದಲ್ಲಿ ಕಡಿಮೆಯಾಗಿದ್ದಾರೆ. ಪ್ರತಿ ವರ್ಷದಲ್ಲಿ ಈ ಇಬ್ಬರೂ ಶ್ರೀಮಂತರು ಹತ್ತಾರು ಶತಕೋಟಿ ಡಾಲರ್‌ಗಳನ್ನು ದತ್ತಿ ಉದ್ದೇಶಗಳಿಗಾಗಿ ನೀಡಿದ್ದಾರೆ, ಆದರೆ ಮಸ್ಕ್ ತನ್ನ ಹೆಚ್ಚಿನ ಸಂಪತ್ತನ್ನು ಯಾವುದೇ ಕಾರ್ಯಗಳಿಗೆ ನೀಡಲಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ಅನಾಮಧೇಯ ಹೆಸರಿನಲ್ಲಿ ದಾನದ ಉಲ್ಲೇಖ:

ಹಣವನ್ನು ನೀಡುವಾಗ ಅಥವಾ ದಾನವನ್ನು ಮಾಡುವಾಗ ಅನಾಮಧೇಯವಾಗಿ ಉಳಿಯಲು ಆದ್ಯತೆ ನೀಡುವುದಾಗಿ ಎಲಾನ್ ಮಸ್ಕ್ ಈ ಹಿಂದೆ ಹೇಳಿದ್ದರು. ಈ ವರ್ಷದ ಆರಂಭದಲ್ಲಿ ಟ್ವಿಟರ್ ಬಳಕೆದಾರರಿಗೆ ದಾನ ಮಾಡುವ ವಿಧಾನಗಳ ಬಗ್ಗೆ "ವಿಮರ್ಶಾತ್ಮಕ ಪ್ರತಿಕ್ರಿಯೆ" ನೀಡುವಂತೆ ಎಲಾನ್ ಮಸ್ಕ್ ಕೇಳಿದ್ದರು.

150 ಮಿಲಿಯನ್ ಡಾಲರ್ ದತ್ತಿ:

ಈ ವರ್ಷ ಎಲಾನ್ ಮಸ್ಕ್ ಕೂಡ ಕಾರ್ಬನ್ ತೆಗೆಯುವ ಸ್ಪರ್ಧೆಯಲ್ಲಿ 100 ಮಿಲಿಯನ್ ಡಾಲರ್ ಬಹುಮಾನವನ್ನು ಒಳಗೊಂಡಂತೆ ಒಟ್ಟು 150 ಮಿಲಿಯನ್ ಡಾಲರ್ ದತ್ತಿ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ರೆಕೋಡ್ ಅಂದಾಜಿಸಿದ ಪ್ರಕಾರ, ಈ ಅಂಕಿ-ಅಂಶವು ಅವರ ಎಲ್ಲಾ ಹಿಂದಿನ ದತ್ತಿಗಿಂತ ಹೆಚ್ಚಾಗಿದೆ.

English summary

Elon Musk is now richer than Bill Gates and Warren uffett combined, With 230 billion dollar net worth

Tesla and SpaceX CEO Elon Musk is now worth more than both Bill Gates and Warren Buffett combined. According to the Bloomberg Billionaires Index, the 50-year-old’s net worth is $230 billion. Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X