ಎಲಾನ್ ಮಸ್ಕ್ ಗೆ ಕೊರೊನಾ ಪಾಸಿಟಿವ್ ಆಗಿದೆ, ರಾಕೆಟ್ ಕಂಪೆನಿ ಮೂಲಕ ನಾಲ್ವರು ಗಗನಯಾತ್ರಿಗಳನ್ನು ಕಳುಹಿಸಿದ್ದು ಹಾಗೂ ಸೋಮವಾರದಂದು ಎಲೆಕ್ಟ್ರಿಕ್ ಕಾರು ತಯಾರಿಕೆ ಕಂಪೆನಿ ಟೆಸ್ಲಾ ಅನ್ನು S&P 500ಕ್ಕೆ ಸೇರ್ಪಡೆ ಮಾಡಲು ಹೆಸರಿಸಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಶತಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದಾರೆ.
S&P 500ಕ್ಕೆ ಟೆಸ್ಲಾ ಸೇರ್ಪಡೆ ಆಗಲಿದೆ ಸುದ್ದಿಯಿಂದ 49 ವರ್ಷದ ಎಲಾನ್ ಮಸ್ಕ್ ಆಸ್ತಿಯಲ್ಲಿ ಭರ್ಜರಿ ಏರಿಕೆ ಕಂಡಿದ್ದು, ವಿಶ್ವದ ಮೂರನೇ ಸಿರಿವಂತ ಆಗಲು ಸಿದ್ಧವಾಗಿದ್ದಾರೆ. ಆ ಮೂಲಕ ಮಾರ್ಕ್ ಝುಕರ್ ಬರ್ಗ್ ಅವರನ್ನು ದಾಟಲು ಸಿದ್ಧವಾಗಿದ್ದಾರೆ. ಅಂದ ಹಾಗೆ ಷೇರಿನ ವಹಿವಾಟಿನಿಂದ ಮಸ್ಕ್ ನಿವ್ವಳ ಆಸ್ತಿ 1500 ಕೋಟಿ ಅಮೆರಿಕನ್ ಡಾಲರ್ ದಾಟಿದೆ.
ನ್ಯೂಯಾರ್ಕ್ ನಲ್ಲಿ ಟೆಸ್ಲಾ ಷೇರು ಸಂಜೆ 6.20ರ ಹೊತ್ತಿಗೆ 14 ಪರ್ಸೆಂಟ್ ಹೆಚ್ಚಳವಾಗಿ, 408.09 ಡಾಲರ್ ಗೆ ವಹಿವಾಟು ಮುಗಿಸಿತು. ಆ ಮೂಲಕ ಎಲಾನ್ ಮಸ್ಕ್ ನಿವ್ವಳ ಆಸ್ತಿ 11,700 ಕೋಟಿ ಅಮೆರಿಕನ್ ಡಾಲರ್ ದಾಟಿತು ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಮೂಲಕ ಗೊತ್ತಾಗಿದೆ. ಈ ವರ್ಷದಲ್ಲೇ ಎಲಾನ್ ಮಸ್ಕ್ ಆಸ್ತಿ ಮೌಲ್ಯ 9000 ಕೋಟಿ ಡಾಲರ್ ದಾಟಿದೆ. ವಿಶ್ವದ ಅತ್ಯಂತ 500 ಶ್ರೀಮಂತರಲ್ಲಿ ಅತಿದೊಡ್ಡ ಗಳಿಕೆ ಕಂಡಿರುವ ವ್ಯಕ್ತಿ ಮಸ್ಕ್.

ಟೆಸ್ಲಾ ಕಂಪೆನಿಯು S&P 500 ಅನ್ನು ಡಿಸೆಂಬರ್ 21ನೇ ತಾರೀಕು ಪ್ರವೇಶಿಸಲಿದೆ. ಈ ಗುಂಪಿನ ಇತಿಹಾಸದಲ್ಲೇ ಅತಿ ದೊಡ್ಡ ಪ್ರವೇಶ ಪ್ರವೇಶ ಪಡೆಯುತ್ತಿರುವ ಕಂಪೆನಿ ಟೆಸ್ಲಾ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications