For Quick Alerts
ALLOW NOTIFICATIONS  
For Daily Alerts

ರಸ್ತೆ ಅಪಘಾತದಿಂದ ಭಾರತಕ್ಕೆ ಪ್ರತಿವರ್ಷ ಆಗುತ್ತಿರುವ ಆರ್ಥಿಕ ನಷ್ಟ ಎಷ್ಟಿದೆ?: ಬಾಷ್‌ ಅಧ್ಯಯನ

|

ಬೆಂಗಳೂರು, ಅಕ್ಟೋಬರ್ 26: ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆ ಸುಧಾರಣೆ ಕಾಣುವ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಸರ್ಕಾರ ಹೊಸ ರಸ್ತೆ ಸರಿಗೆ ನೀತಿಗಳು ಮತ್ತು ಅಂತಾರಾಷ್ಟ್ರೀಯ ಪೂರೈಕೆ ಸರಣಿಯ ವರ್ಗೀಕರಣದತ್ತ ಗಮನ ಹರಿಸುವ ತುರ್ತು ಅಗತ್ಯವಿದೆ. ಅದರ ನಡುವೆಯೂ, ರಸ್ತೆ ಅಪಘಾತಗಳಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ನಷ್ಟ ಕುರಿತ ದತ್ತಾಂಶಗಳು ಮಾತ್ರ ಲಭ್ಯವಿರುವುದು, ಹೊಸ ನೀತಿಗಳ ರಚನೆ ಹಾಗೂ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆ.ಆದ್ದರಿಂದ ಬಾಷ್‌ ಇಂಡಿಯಾ, ಭಾರತದ ರಸ್ತೆ ಅಪಘಾತಗಳಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ನಷ್ಟವನ್ನು ವಿಶ್ಲೇಷಿಸುವ ವಿನೂತನ ಅಧ್ಯಯನದ ವರದಿಯನ್ನು ಬಿಡುಗಡೆಗೊಳಿಸಿದೆ.

ಈ ಅಧ್ಯಯನಕ್ಕಾಗಿ, ಬಾಷ್ ಇಂಡಿಯಾದ ಸುಧಾರಿತ ಸ್ವಾಯತ್ತ ಸುರಕ್ಷತಾ ವ್ಯವಸ್ಥೆಗಳು ಮತ್ತು ಕಾರ್ಪೊರೇಟ್ ಸಂಶೋಧನಾ ವಿಭಾಗದ ಅಪಘಾತ ಸಂಶೋಧನಾ ತಂಡವು ಕಳೆದ ಎರಡು ದಶಕಗಳ ಜಾಗತಿಕ ರಸ್ತೆ ಅಪಘಾತದ ದತ್ತಾಂಶಗಳ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಿದೆ. ರಸ್ತೆ ಸುರಕ್ಷತಾ ನೀತಿಗಳನ್ನು ಗುರುತಿಸಲು ಮತ್ತು ಹೊಸ ಉತ್ಪನ್ನಗಳು, ವ್ಯಾಪಾರ ತಂತ್ರಗಳಿಗೆ ಪರಿಣಾಮಕಾರಿಯಾಗಿ ಬಳಸಬಹುದಾದ ಫಲಿತಾಂಶ ಕಂಡುಕೊಳ್ಳುವುದು ಈ ಅಧ್ಯಯನದ ಉದ್ದೇಶವಾಗಿತ್ತು.

ಮಾನವ ಸಂಪನ್ಮೂಲ (ಎಚ್‌ಸಿ) ವಿಧಾನ, ಪಾವತಿಸುವ ಇಚ್ಚೆ (ಡಬ್ಲ್ಯುಟಿಪಿ) ಮತ್ತು ಥಂಪ್‌ನ ಐಆರ್‌ಎಪಿ ನೀತಿ (ಆರ್‌ಒಟಿ) ಮೂಲಕ ಸಂಬಂಧಿಸಿದ ವ್ಯಕ್ತಿ/ಸಂಸ್ಥೆಗಳಿಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಅಂದಾಜಿಸಲು ಸರ್ಕಾರಕ್ಕೆ ಈ ದತ್ತಾಂಶ ಮಾರ್ಗಸೂಚಿಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಒಂದು ಸಮಗ್ರ ದೃಷ್ಟಿಕೋನ ಒದಗಿಸಲು ಭಾರತದ ರಸ್ತೆ ಅಪಘಾತ ಮಾದರಿ ವ್ಯವಸ್ಥೆ (ಆರ್‌ಎಎಸ್‌ಎಸ್‌ಐ) ದತ್ತಾಂಶಗಳ ಸೂಕ್ತ ಅಂಶಗಳನ್ನು ಬಳಸಿಕೊಂಡ ಇಲ್ಲಿಯವರೆಗಿನ ಮೊದಲ ಅಧ್ಯಯನವಾಗಿದೆ.

ರಸ್ತೆ ಅಪಘಾತದಿಂದ ಭಾರತಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ಎಷ್ಟು?

ಸಂಶೋಧಕರು ಶಿಫಾರಸು ಮಾಡಿರುವ ಕೆಲ ಪ್ರಮುಖಾಂಶಗಳು:

* ಭಾರತದಲ್ಲಿ ರಸ್ತೆ ಅಪಘಾತದಿಂದ ಉಂಟಾಗುವ ಒಟ್ಟು ಸಾಮಾಜಿಕ-ಆರ್ಥಿಕ ನಷ್ಟ 15.71-38.81 ಬಿಲಿಯನ್‌ ಡಾಲರ್‌ಗಳು. ಇದು ದೇಶದ ಜಿಡಿಪಿಯ ಶೇ.0.55 ರಿಂದ ಶೇ.1.35ರಷ್ಟಿದೆ ಎಂದು ಅಂದಾಜಿಸಲಾಗಿದೆ.

* 2019ರಲ್ಲಿ ಸುಮಾರು 7,81,668 ವಾಹನಗಳು ರಸ್ತೆ ಅಪಘಾತಕ್ಕೀಡಾಗಿದ್ದು, ಆರ್‌ಎಎಸ್‌ಎಸ್ಐ ದತ್ತಾಂಶದ ಪ್ರಕಾರ ಇದರಿಂದ 0.57ರಿಂದ 1.81 ಬಿಲಿಯನ್‌ ಡಾಲರ್‌ನಷ್ಟು ಹಾನಿಯಾಗಿದೆ.

* ಇದರಲ್ಲಿ ವಾಣಿಜ್ಯ ವಾಹನಗಳ 356.2 ಬಿಲಿಯನ್‌ ಡಾಲರ್, ದ್ವಿಚಕ್ರ ವಾಹನಗಳಿಂದ 18.7 ಬಿಲಿಯನ್‌ ಡಾಲರ್‌ ಮತ್ತು ಬಸ್‌ಗಳಿಂದ 39.6 ಬಿಲಿಯನ್‌ ಡಾಲರ್‌ ನಷ್ಟ ಉಂಟಾಗಿದೆ.

* 2019ನೇ ಸಾಲಿನ ರಸ್ತೆ ಅಪಘಾತಗಳ ಸಂತ್ರಸ್ತರ ವೈದ್ಯಕೀಯ ಚಿಕಿತ್ಸೆಗೆ ಸುಮಾರು 0.82 ರಿಂದ 1.92 ಬಿಲಿಯನ್‌ ಡಾಲರ್ ವೆಚ್ಚವಾಗಿದೆ.

* 2019 ರಲ್ಲಿ, ಪುರುಷರ ಸಾವಿನಿಂದ 10.9 ಬಿಲಿಯನ್ ಡಾಲರ್ ಮತ್ತು ಮಹಿಳೆಯರ ಸಾವಿನಿಂದ 1.44 ಬಿಲಿಯನ್ ಡಾಲರ್‌ ಉತ್ಪಾದಕತೆ ನಷ್ಟವಾಗಿದೆ ( ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಸರಾಸರಿ ತಲಾ ನಿವ್ವಳ ರಾಷ್ಟ್ರೀಯ ಆದಾಯ ಪರಿಗಣನೆ)

* ಗಂಭೀರವಾದ ಗಾಯಗಳಿಂದಾಗಿ 2019 ರಲ್ಲಿ ಒಟ್ಟು ಉತ್ಪಾದಕತೆಯ ನಷ್ಟ 123 ಮಿಲಿಯನ್ ಡಾಲರ್‌ನಷ್ಟಿದ್ದರೆ, ಸಣ್ಣಪುಟ್ಟ ಗಾಯಗಳಿಂದ 14 ಮಿಲಿಯನ್ ಡಾಲರ್‌ನಷ್ಟು ನಷ್ಟವಾಗಿದೆ.

ವರದಿಯು ಒಇಎಂಗಳು, ಫ್ಲೀಟ್ ಆಪರೇಟರ್‌ಗಳು ಮತ್ತು ಸಾರಿಗೆ ಅಧಿಕಾರಿಗಳಿಗೆ ಅಪಘಾತದ ಸಂದರ್ಭಗಳ ನಿಖರವಾದ ಮಾಹಿತಿ. ಯಾವುದೇ ಮಧ್ಯಸ್ಥಗಾರನು ಡೇಟಾ ಅಂತರವನ್ನು ಕಡಿಮೆ ಮಾಡುವ ಮೂಲಕ ಮತ್ತು ಇದು ಭಾರತೀಯ ರಸ್ತೆಗಳನ್ನು ಎಲ್ಲಾ ಬಳಕೆದಾರರಿಗೆ ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ.

ವರದಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ರಾಬರ್ಟ್‌ ಬಾಷ್‌ ಇಂಜಿನಿಯರಿಂಗ್‌ ಮತ್ತು ಬ್ಯುಸಿನೆಸ್‌ ಸಲ್ಯೂಷನ್‌ನ ಅಡ್ವಾನ್ಸ್ಡ್‌ ಅಟೊನೊಮಸ್‌ ಸೇಫ್ಟಿ ಸಿಸ್ಟಮ್‌ಗಳು ವಿಭಾಗದ ಭಾರತದ ಅಪಘಾತ ಸಂಶೋಧನಾ ತಂಡದ ಹಿರಿಯ ಪ್ರೋಗ್ರಾಂ ಮ್ಯಾನೇಜರ್‌ ಗಿರೀಶ್‌ಕುಮಾರ್ ಕುಮರೇಶ್, "ರಸ್ತೆ ಅಪಘಾತದ ಸಾವುನೋವುಗಳು ಸಾಮಾಜಿಕ, ವೈದ್ಯಕೀಯ ಮತ್ತು ಆರ್ಥಿಕ ವೆಚ್ಚಗಳಿಗೆ ಹೆಚ್ಚಿನ ಹೊರೆಯಾಗುತ್ತವೆ. ಅದನ್ನು ತಗ್ಗಿಸುವ ತುರ್ತು ಅಗತ್ಯವಿದೆ. ರಸ್ತೆ ಅಪಘಾತಗಳಿಂದಾಗುವ ನಷ್ಟದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದರಿಂದ, ಅದನ್ನು ತಡೆಯಲು ಸೂಕ್ತ ನೀತಿ ರೂಪಿಸಲು ಅಡ್ಡಿಯಾಗಿದೆ. ಈ ಅಧ್ಯಯನದ ವರದಿ, ರಸ್ತೆ ಅಪಘಾತಗಳ ಸಾಮಾಜಿಕ-ಆರ್ಥಿಕ ಪರಿಣಾಮವನ್ನು ಅಧ್ಯಯನ ಮಾಡಲು ಮತ್ತು ವಿಶ್ಲೇಷಿಸಲು ಪ್ರೇರಣೆಯಾಗಲಿದೆ. ಈ ಸಂಶೋಧನೆಯು ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆಯ ಎರಡು ವರ್ಷಗಳ ಕಠಿಣ ಪರಿಶ್ರಮದ ಸಂಯೋಜಿತ ಶ್ರಮಕ್ಕೆ ಸಾಕ್ಷಿಯಾಗಿದೆ,'' ಎಂದರು.

English summary

Estimation of Socio-Economic Loss due to Road Traffic Accidents in India is alarming: Bosch

India witnessed 151,113 road deaths in the year 2019 and this alarming number is due to increased urbanization, motorization and per capita income.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X