For Quick Alerts
ALLOW NOTIFICATIONS  
For Daily Alerts

ಫ್ಲಿಪ್ ಕಾರ್ಟ್ ನಿಂದ 70 ಸಾವಿರ ಮಂದಿ ಹೊಸದಾಗಿ ನೇಮಕ

By ಅನಿಲ್ ಆಚಾರ್
|

ಡೆಲಿವರಿ ಸಹಭಾಗಿತ್ವ ಸೇರಿ ಇತರ ಹುದ್ದೆಗಳಿಗೆ ನೇಮಕ ಮಾಡಲು 70 ಸಾವಿರ ಮಂದಿಯನ್ನು ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ವಾಲ್ ಮಾರ್ಟ್ ಗೆ ಸೇರಿದ ಫ್ಲಿಪ್ ಕಾರ್ಟ್ ಮಂಗಳವಾರ ಹೇಳಿದೆ. ಭಾರತದಲ್ಲಿ ಹಬ್ಬದ ಋತುವಿನಲ್ಲಿ ಆನ್ ಲೈನ್ ಶಾಪಿಂಗ್ ಬೇಡಿಕೆ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಸಿದ್ಧತೆ ನಡೆದಿದೆ.

 

ಫ್ಲಿಪ್ ಕಾರ್ಟ್, ಅಮೆಜಾನ್.ಕಾಮ್ ಭಾರತದ ಘಟಕ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇ ಕಾಮರ್ಸ್ ವ್ಯವಹಾರದಲ್ಲಿ ಆನ್ ಲೈನ್ ರೀಟೇಲ್ ಮಾರುಕಟ್ಟೆಯಲ್ಲಿ ದೊಡ್ಡ ಪಾಲಿಗೆ ಪ್ರಯತ್ನಿಸುತ್ತಿವೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಆನ್ ಲೈನ್ ರೀಟೇಲ್ ಮಾರ್ಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ದಿನಸಿ ಮತ್ತಿತರ ವಸ್ತುಗಳನ್ನು ಭಾರತೀಯರು ಸ್ಮಾರ್ಟ್ ಫೋನ್ ಮೂಲಕವೇ ಖರೀದಿ ಮಾಡುತ್ತಿದ್ದಾರೆ.

ಫ್ಲಿಪ್‌ಕಾರ್ಟ್‌ನಿಂದ 90 ನಿಮಿಷಗಳಲ್ಲಿ ಡೆಲಿವರಿ ಸೇವೆ 'ಫ್ಲಿಪ್‌ಕಾರ್ಟ್ ಕ್ವಿಕ್'!

ಫ್ಲಿಪ್ ಕಾರ್ಟ್ ನಿಂದ 'ಬಿಗ್ ಬಿಲಿಯನ್ ಡೇ' ಶುರುವಾಗಲಿದೆ. ಇದು ಅಮೆಜಾನ್ ಪ್ರೈಮ್ ಡೇ ರೀತಿಯಲ್ಲೇ ಮಾರಾಟ ನಡೆಸುತ್ತಿದೆ. ಪ್ರತಿ ವರ್ಷದ ಅತಿ ದೊಡ್ಡ ಮಟ್ಟದ ಮಾರಾಟ ಇದು. ನಾಲ್ಕು ಅಥವಾ ಐದು ದಿನದ ಈ ಮಾರಾಟ ಸಾಮಾನ್ಯವಾಗಿ ಭಾರತದಲ್ಲಿ ಹಬ್ಬದ ಸೀಸನ್ ನಡೆಯುವ ಅಕ್ಟೋಬರ್ ನಲ್ಲಿ ನಡೆಯುತ್ತದೆ. ಅದು ದೀಪಾವಳಿ ವೇಳೆ ಬರುತ್ತದೆ.

ಫ್ಲಿಪ್ ಕಾರ್ಟ್ ನಿಂದ 70 ಸಾವಿರ ಮಂದಿ ಹೊಸದಾಗಿ ನೇಮಕ

ಐವತ್ತು ಸಾವಿರಕ್ಕೂ ಹೆಚ್ಚು ಸಣ್ಣ ಮಟ್ಟದ ದಿನಸಿ ಅಂಗಡಿಗಳು ಹಾಗೂ ಕಿರಾಣಿ ಅಂಗಡಿಗಳ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪೆನಿ ಹೇಳಿದೆ. ಫ್ಲಿಪ್ ಕಾರ್ಟ್ ಪೂರೈಕೆ ಜಾಲದಲ್ಲಿ ನೇರವಾದ ಉದ್ಯೋಗ ಸೃಷ್ಟಿಯಾಗುತ್ತದೆ. ಡೆಲಿವರಿ ಎಕ್ಸಿಕ್ಯುಟಿವ್ಸ್, ಪಿಕರ್ಸ್, ಪ್ಯಾಕರ್ಸ್ ಮತ್ತು ವಿಂಗಡಣೆ ಮಾಡುವವರು, ಜತೆಗೆ ಹೆಚ್ಚುವರಿಯಾಗಿ ಪರೋಕ್ಷ ಉದ್ಯೋಗಗಳು ಸೃಷ್ಟಿಸಲಾಗುತ್ತದೆ ಎಂದು ಇಮೇಲ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ಫ್ಲಿಪ್ ಕಾರ್ಟ್ ನಿಂದ ಆನ್ ಲೈನ್ ಹೋಲ್ ಸೇಲ್ ಸೇವೆ ಆರಂಭಿಸಲಾಗಿದೆ. ಫ್ಲಿಪ್ ಕಾರ್ಟ್ ಹೋಲ್ ಸೇಲ್, ಮಾಮ್ ಹಾಗೂ ಪಾಪ್ ಸ್ಟೋರ್ಸ್ ಮತ್ತು ಇತರ ಸಣ್ಣ ವ್ಯಾಪಾರಕ್ಕಾಗಿ ಆರಂಭಿಸಲಾಗಿದೆ.

English summary

Flipkart To Hire 70,000 Direct Roles In Supply Chain For Festival Season Sales In India

Walmart's Flipkart on Tuesday announced that, company to hire 70,000 direct roles in supply chain for festival season in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X