For Quick Alerts
ALLOW NOTIFICATIONS  
For Daily Alerts

ಎಫ್ ಪಿಐ ಹೂಡಿಕೆ ಫೆಬ್ರವರಿ 1ರಿಂದ 5ರ ಮಧ್ಯೆ ರು. 12,266 ಕೋಟಿ

By ಅನಿಲ್ ಆಚಾರ್
|

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ಫೆಬ್ರವರಿಯ ಐದು ದಿನಗಳ ಟ್ರೇಡಿಂಗ್ ಸೆಷನ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರು. 12,266 ಕೋಟಿ ರುಪಾಯಿಯಷ್ಟು ನಿವ್ವಳ ಖರೀದಿ ಮಾಡಿದ್ದಾರೆ. ಬಜೆಟ್ 2021ರ ಸಕಾರಾತ್ಮಕ ಭಾವನೆಗಳಿಂದ ಹೂಡಿಕೆಯಲ್ಲಿ ಏರಿಕೆ ಕಂಡಿದೆ.

 

ಡೆಪಾಸಿಟರಿಗಳ ಎಫ್ ಪಿಐ ದತ್ತಾಂಶದ ಪ್ರಕಾರ, ವಿದೇಶಿ ಹೂಡಿಕೆದಾರರು ಫೆಬ್ರವರಿ 1ರಿಂದ 5ರ ಮಧ್ಯೆ ನಿವ್ವಳ ಹೂಡಿಕೆ ಈಕ್ವಿಟಿಯಲ್ಲಿ ರು. 10,793 ಕೋಟಿ ಮತ್ತು ಡೆಟ್ ಸೆಗ್ಮೆಂಟ್ ನಲ್ಲಿ ರು. 1473 ಕೋಟಿ ಆಗಿದೆ. ಒಟ್ಟಾರೆ ನಿವ್ವಳ ಹೂಡಿಕೆ ರು. 12,266 ಕೋಟಿ ಆಗಿದೆ.

 

ಕರ್ನಾಟಕ ಬಜೆಟ್ 2 ವರ್ಷದ ಮೊತ್ತ ಒಂದೇ ವಾರ ಷೇರುಪೇಟೆಯಲ್ಲಿ ಏರಿಕೆಕರ್ನಾಟಕ ಬಜೆಟ್ 2 ವರ್ಷದ ಮೊತ್ತ ಒಂದೇ ವಾರ ಷೇರುಪೇಟೆಯಲ್ಲಿ ಏರಿಕೆ

ಕೇಂದ್ರ ಬಜೆಟ್ ನಿಂದ ಏರಿಕೆ ಮುಂದುವರಿದಿದೆ ಮತ್ತು ಎಫ್ ಪಿಐ ಒಳಹರಿವಿಗೆ ಕಾರಣವಾಗಿದೆ. ಬಂಡವಾಳ ಹೂಡಿಕೆಯಲ್ಲಿ ತೀವ್ರ ಏರಿಕೆ ಮತ್ತು 2025- 26ರ ತನಕ ವಿತ್ತೀಯ ಕೊರತೆ ಪ್ರಮಾಣ ಎತ್ತರದಲ್ಲಿ ಇರುವುದರಿಂದ ಪ್ರಬಲವಾದ ಆರ್ಥಿಕ ಪುನಶ್ಚೇತನ ಮತ್ತು ಭವಿಷ್ಯದಲ್ಲಿ ಗಳಿಕೆ ಬೆಳವಣಿಗೆ ಆಗಲಿದೆ ಎಂಬ ನಿರೀಕ್ಷೆಯಿದೆ ಎಂದು ಕೊಟಕ್ ಸೆಕ್ಯೂರಿಟೀಸ್ ಉಪಾಧ್ಯಕ್ಷ ರುಸ್ಮಿಕ್ ಓಜಾ ಹೇಳಿದ್ದಾರೆ.

ಎಫ್ ಪಿಐ ಹೂಡಿಕೆ ಫೆಬ್ರವರಿ 1ರಿಂದ 5ರ ಮಧ್ಯೆ ರು. 12,266 ಕೋಟಿ

ಜಾಗತಿಕ ಮಟ್ಟದಲ್ಲಿ ಕೇಂದ್ರ ಬ್ಯಾಂಕ್ ಗಳು ದರ ಕಡಿತಕ್ಕೆ ಅವಕಾಶ ಮುಕ್ತವಾಗಿಟ್ಟಿರುವುದರಿಂದ ಭಾರತದಂಥ ಬೆಳವಣಿಗೆಯ ಮಾರುಕಟ್ಟೆಗಳಿಗೆ ವಿದೇಶಿ ಹೂಡಿಕೆ ಹರಿವಿನ ಪ್ರಮಾಣ ಹರಿದುಬರುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

English summary

Foreign Portfolio Investors Net Investment Between February 1 To 5 Rs 12266 Crore

Foreign Portfolio Investors (FPI) net investment between February 1 to 5 amounted to Rs 12,266 crore.
Story first published: Sunday, February 7, 2021, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X