For Quick Alerts
ALLOW NOTIFICATIONS  
For Daily Alerts

ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ

By ಅನಿಲ್ ಆಚಾರ್
|

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ)ನಿಂದ ಜನವರಿಯಲ್ಲಿ ಇಲ್ಲಿಯ ತನಕ ನಿವ್ವಳವಾಗಿ 18,456 ಕೋಟಿ ರುಪಾಯಿಯ ತನಕ ಖರೀದಿ ಮಾಡಿದ್ದಾರೆ. ಡೆಪಾಸಿಟರೀಸ್ ದತ್ತಾಂಶದ ಪ್ರಕಾರ, ವಿದೇಶೀ ಹೂಡಿಕೆದಾರರು ಜನವರಿ 1ರಿಂದ 22ನೇ ತಾರೀಕಿನವರೆಗೆ 24,469 ಕೋಟಿ ರುಪಾಯಿಯನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದ್ದು, ಬಾಂಡ್ ಮಾರ್ಕೆಟ್ ನಿಂದ ರು. 6013 ಕೋಟಿ ಹಿಂತೆಗೆದುಕೊಂಡಿದ್ದಾರೆ.

ಈ ಅವಧಿಯಲ್ಲಿ ನಿವ್ವಳ ಹೂಡಿಕೆ ಮೊತ್ತ ರು. 18,456 ಕೋಟಿ ಆಗಿದೆ. "ಜಾಗತಿಕ ಲಿಕ್ವಿಡಿಟಿಯು ಭಾರತದಂಥ ಬೆಳವಣಿಗೆಯ ಮಾರುಕಟ್ಟೆಗೆ ಬಂಡವಾಳ ಹರಿಯುವಂತೆ ಮಾಡಿದೆ," ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇನ್ನು ಲಾಕ್ ಡೌನ್ ನಂತರದ ಆರ್ಥಿಕ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ ಎನ್ನುತ್ತಾರೆ.

ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ

ಇಲ್ಲಿಯ ತನಕ ಇಂಡೋನೇಷ್ಯಾಗೆ $ 800 ಮಿಲಿಯನ್, ದಕ್ಷಿಣ ಕೊರಿಯಾಗೆ $ 320 ಮಿಲಿಯನ್, ತೈವಾನ್ 230 ಕೋಟಿ ಅಮೆರಿಕನ್ ಡಾಲರ್ ಮತ್ತು ಥಾಯ್ಲೆಂಡ್ ಗೆ 113 ಮಿಲಿಯನ್ ಯುಎಸ್ ಡಿ ವಿದೇಶೀ ಪೋರ್ಟ್ ಫೋಲಿಯೋ ಹೂಡಿಕೆ ಬಂದಿದೆ. ಇನ್ನು ಇಂಡೋನೇಷ್ಯಾ, ಥಾಯ್ಲೆಂಡ್, ಬ್ರೆಜಿಲ್ ಮತ್ತು ರಷ್ಯಾದಂಥ ಕೆಲ ದೇಶಗಳನ್ನು ಹೊರತುಪಡಿಸಿ ಬಹುತೇಕ ದೇಶಗಳು ಈ ತಿಂಗಳು ಉತ್ತಮ ಪ್ರದರ್ಶನ ನೀಡಿವೆ.

ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ

ಇನ್ನು ಎಫ್ ಪಿಐಗಳು ಐ.ಟಿ, ಟೆಲಿಕಾಂ ಮತ್ತು ಖಾಸಗಿ ಫೈನಾನ್ಷಿಯಲ್ ವಲಯಗಳಲ್ಲಿನ ಷೇರುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು.

English summary

FPI Investors Net Buyers Of Rs 18456 Crore Between January 1 To 22

On global liquidity led FPI investors net buyers of Rs 18,456 crore in Indian market between January 1- 22.
Story first published: Sunday, January 24, 2021, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X