For Quick Alerts
ALLOW NOTIFICATIONS  
For Daily Alerts

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ನಿಂದ ರು. 14,649 ಕೋಟಿ ಹೂಡಿಕೆ

By ಅನಿಲ್ ಆಚಾರ್
|

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಜನವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದು, ರು. 14,649 ಕೋಟಿ ಹೂಡಿಕೆ ಮಾಡಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿನ ನಗದು ಲಭ್ಯತೆ ಮತ್ತು ವಿದೇಶಿ ಹಣವನ್ನು ಹಾಕುವುದಕ್ಕೆ ಭಾರತದಂಥ ಮಾರುಕಟ್ಟೆಯನ್ನು ಆದ್ಯತೆ ಮೇಲೆ ಪರಿಗಣಿಸಲಾಗುತ್ತಿದೆ.

 

ಡೆಪಾಸಿಟರೀಸ್ ಗಳ ಬಳಿ ಲಭ್ಯವಿರುವ ಎಫ್ ಪಿಐ ಅಂಕಿ- ಅಂಶದ ಪ್ರಕಾರ, ವಿದೇಶಿ ಹೂಡಿಕೆದಾರರು ಈಕ್ವಿಟಿಯಲ್ಲಿ ನಿವ್ವಳವಾಗಿ ರು. 19,473 ಕೋಟಿ ಹೂಡಿಕೆ ಮಾಡಿದ್ದಾರೆ. ಜನವರಿ 1ರಿಂದ 29ರ ಮಧ್ಯೆ ಡೆಟ್ ಸೆಗ್ಮೆಂಟ್ ನಲ್ಲಿ 4,824 ಕೋಟಿ ರುಪಾಯಿಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಜನವರಿಯಲ್ಲಿ ಒಟ್ಟಾರೆ ನಿವ್ವಳ ಹೂಡಿಕೆ 14,649 ಕೋಟಿ ರುಪಾಯಿ ಬಂದಿದೆ.

 

ಈ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 3.96 ಲಕ್ಷ ಕೋಟಿ ರು. ಖಲಾಸ್ಈ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 3.96 ಲಕ್ಷ ಕೋಟಿ ರು. ಖಲಾಸ್

ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶಗಳಿಗೆ ಇಲ್ಲಿಯ ಎಫ್ ಪಿಐ ಹೊರಹರಿವು ಕ್ರಮವಾಗಿ $ 5.3 ಬಿಲಿಯನ್ ಹಾಗೂ $ 3.4 ಬಿಲಿಯನ್ ಕಂಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಭಾರತ ಮತ್ತು ಕೆಲವು ತೈಲ ಉತ್ಪಾದಿಸುವ ದೇಶಗಳು ಈಗಲೂ ಮಧ್ಯಮಾವಧಿಯಲ್ಲಿ ಎಫ್ ಪಿಐ ಸಕಾರಾತ್ಮಕ ಹರಿವು ನಿರೀಕ್ಷಿಸಬಹುದು ಎಂದು ಸೇರಿಸಿದ್ದಾರೆ.

ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ ರು. 14,649 ಕೋಟಿ ಹೂಡಿಕೆ

ದೇಶೀಯವಾಗಿ ಕೇಂದ್ರ ಬಜೆಟ್ ಮೇಲೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗಾಗಿ ಸರ್ಕಾರ ಯಾವ ಕ್ರಮಗಳನ್ನು ಘೋಷಿಸಬಹುದು ಎಂಬ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ.

English summary

FPI Net Buyers In January Amount of Investment Rs 14649 Crore

Till January 1st to 29th Foreign Portfolio Investors (FPI) net buyers with Rs 14,649 crore. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X