For Quick Alerts
ALLOW NOTIFICATIONS  
For Daily Alerts

ಪಾಕಿಸ್ತಾನದಲ್ಲಿ ಪೆಟ್ರೋಲ್ ದರ ರೂ. 233.89ಕ್ಕೆ ಏರಿಕೆ: ಚಹಾ ಸೇವನೆ ಕಡಿಮೆ ಮಾಡಲು ಮನವಿ!

|

ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಏರಿಕೆ ಕಂಡಿದೆ. ಕಳೆದ 20 ದಿನದಲ್ಲಿ ಇಂಧನದ ಬೆಲೆಯು ಮೂರು ಬಾರಿ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರದಲ್ಲಿ 24 ರೂಪಾಯಿ ಏರಿಕೆಯಾಗಿದೆ. ಈ ಸಂದರ್ಭದಲ್ಲೇ ಡೀಸೆಲ್ ದರದಲ್ಲಿ 16.31 ರೂಪಾಯಿ ಏರಿಕೆಯಾಗಿದೆ.

ಈ ಬೆಲೆ ಪರಿಷ್ಕರಣೆಯ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು ರೂಪಾಯಿ 233.89ಕ್ಕೆ ಹೆಚ್ಚಳ ಕಂಡಿದೆ. ಈ ನಡುವೆ ಒಂದು ಲೀಟರ್ ಡೀಸೆಲ್ ದರವು ರೂಪಾಯಿ 263.31ಕ್ಕೆ ಹೆಚ್ಚಳವಾಗಿದೆ. ಇನ್ನು ಪಾಕಿಸ್ತಾನದಲ್ಲಿ ಧಾನ್ಯ, ಸಕ್ಕರೆ, ತರಕಾರಿ, ಹಣ್ಣುಗಳ ಬೆಲೆಯು ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ.

 ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು? ಪಾಕಿಸ್ತಾನದಲ್ಲಿ ಪೆಟ್ರೋಲ್ ದರ 30 ರೂ. ಏರಿಕೆ: ಕಾರಣವೇನು?

ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, "ಜೂನ್ 15ರ ಮಧ್ಯರಾತ್ರಿಯಿಂದ ಹೊಸ ದರವು ಜಾರಿಗೆ ಬಂದಿದೆ. ಇನ್ನೊಂದೆಡೆ ಸೀಮೆಎಣ್ಣೆ ಬೆಲೆಯು 29.49 ರೂಪಾಯಿ ಏರಿಕೆಯಾಗಿ ರೂಪಾಯಿ 211.43ಕ್ಕೆ ತಲುಪಿದೆ. ಕೈಗಾರಿಕೆಗಳಿಗೆ ಬಳಕೆ ಮಾಡಲಾಗುವ ಡೀಸೆಲ್ ಬೆಲೆಯು 29.16 ರೂಪಾಯಿ ಹೆಚ್ಚಳವಾಗಿದ್ದು, 207.47 ರೂಪಾಯಿಗೆ ತಲುಪಿದೆ," ಎಂದು ಮಾಹಿತಿ ನೀಡಿದ್ದಾರೆ.

 ಕಳೆದ 20 ದಿನದಲ್ಲಿ ಮೂರು ಬಾರಿ ಏರಿಕೆ

ಕಳೆದ 20 ದಿನದಲ್ಲಿ ಮೂರು ಬಾರಿ ಏರಿಕೆ

ಕಳೆದ 20 ದಿನಗಳಲ್ಲಿ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ಸುಮಾರು 84 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾತೈಲ ದರವು ಹೆಚ್ಚಳವಾದ ಕಾರಣ ಹಾಗೂ ಇತರೆ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಪೆಟ್ರೋಲ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಸರ್ಕಾರವು ಸಮರ್ಥನೆ ಮಾಡಿಕೊಂಡಿದೆ. ಇನ್ನು ಸರ್ಕಾರವು ಇಷ್ಟು ಬೆಲೆ ಏರಿಕೆ ಮಾಡಿದರೂ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24.03 ರೂಪಾಯಿ, ಡೀಸೆಲ್ ಮೇಲೆ 59.16 ರೂಪಾಯಿ, ಸೀಮೆಎಣ್ಣೆ 29.49 ರೂಪಾಯಿ ನಷ್ಟ ಅನುಭವಿಸುತ್ತಿದೆ.

 ಚಹಾ ಕಡಿಮೆ ಕುಡಿಯುವಂತೆ ಮನವಿ!

ಚಹಾ ಕಡಿಮೆ ಕುಡಿಯುವಂತೆ ಮನವಿ!

ಪಾಕಿಸ್ತಾನದಲ್ಲಿ ಆಹಾರ ಸಾಮಾಗ್ರಿ ಬೆಲೆಯು ಕೂಡಾ ಹೆಚ್ಚಳವಾಗಿದೆ. ಈ ನಡುವೆ ಜನರು ಚಹಾ ಕುಡಿಯುವುದನ್ನು ಕೊಂಚ ಕಡಿಮೆ ಮಾಡುವಂತೆ ನಾಗರಿಕರಿಗೆ ಸರ್ಕಾರವು ಮನವಿ ಮಾಡಿದೆ. "ಜನರು ಕಡಿಮೆ ಚಹಾ ಕುಡಿಯಿರಿ," ಎಂದು ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ. ಪಾಕಿಸ್ತಾನ ಸದ್ಯ ಹೊರ ದೇಶದಿಂದ ಚಹಾವನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಜನರು ಚಹಾ ಸೇವನೆ ಕಡಿಮೆ ಮಾಡಿದರೆ ಆಮದು ವೆಚ್ಚ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ.

 41 ವಸ್ತುಗಳ ಆಮದು ನಿಷೇಧ

41 ವಸ್ತುಗಳ ಆಮದು ನಿಷೇಧ

ಈ ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನವು ಸುಮಾರು 41 ವಸ್ತುಗಳ ಮೇಲೆ ನಿಷೇಧವನ್ನು ಹೇರಿದೆ. ಎರಡು ತಿಂಗಳುಗಳ ಕಾಲ ನಿಷೇಧವನ್ನು ಹೇರಿದೆ. ಹಾಗೆಯೇ ಆಮದು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಆಮದು ನಿಷೇಧವು ಆರ್ಥಿಕತೆ ಸುಧಾರಿಸಲು ಸಹಕಾರಿಯಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕೆಲವು ವಸ್ತುಗಳ ಆಮದು ನಿಷೇಧ ಮಾಡಿರುವ ಕಾರಣದಿಂದಾಗಿ ಪಾಕಿಸ್ತಾನಕ್ಕೆ 600 ಮಿಲಿಯನ್ ಯುಎಸ್‌ಡಿ ಲಾಭ ಉಂಟಾಗಿದೆ.

English summary

Fuel Prices in Pakistan: Petrol Rs 233.89, Diesel Rs 263.31 per Litre

Pakistan Economic crisis: The price of one litre of petrol in Pakistan has reached Rs 233.89, diesel Rs 263.31 per litre. Know more.
Story first published: Thursday, June 16, 2022, 15:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X