For Quick Alerts
ALLOW NOTIFICATIONS  
For Daily Alerts

ಅಮೆಜಾನ್ ವಿರುದ್ಧ ಹೊಸ ಕೇಸ್ ದಾಖಲಿಸಿದ ಫ್ಯೂಚರ್ ರೀಟೇಲ್

|

ಭಾರತದ ದೈತ್ಯ ಉದ್ಯಮ ಸಂಸ್ಥೆ ರಿಲಯನ್ಸ್‌ ಹಾಗೂ ಫ್ಯೂಚರ್ ರಿಟೇಲ್‌ ನಡುವಿನ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಮತ್ತೆ ತಡೆ ಹಿಡಿದ ಬಳಿಕ, ಫ್ಯೂಚರ್ ರೀಟೇಲ್ ಅಮೆಜಾನ್ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ಹೊಸ ದೂರು ದಾಖಲಿಸಿದೆ.

 

ಫ್ಯೂಚರ್ ರೀಟೇಲ್ 3.4 ಬಿಲಿಯನ್ ಡಾಲರ್ ಸ್ವತ್ತುಗಳ ಮಾರಾಟಕ್ಕೆ ಅನುಮತಿ ಪಡೆಯುವ ಪ್ರಯತ್ನದಲ್ಲಿರುವ ಫ್ಯೂಚರ್ ರೀಟೇಲ್ Amazon.com inc ವಿರುದ್ಧ ಹೊಸ ಸವಾಲು ಹಾಕಿದೆ.

 

ಸುಪ್ರೀಂ ಕೋರ್ಟ್ ಇದೇ ತಿಂಗಳು ಅಮೆಜಾನ್ ಪರವಾಗಿ ತೀರ್ಪು ನೀಡುವ ಮೂಲಕ ಫ್ಯೂಚರ್ ರೀಟೇಲ್‌ಗೆ ಆಘಾತ ನೀಡಿತು. ಅಕ್ಟೋಬರ್ 2020 ರಲ್ಲಿ ಸಿಂಗಾಪುರ್ ಮಧ್ಯಸ್ಥಗಾರರ ನ್ಯಾಯಾಲಯದ ಮಧ್ಯಂತರ ನಿರ್ಧಾರವು ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ತನ್ನ ಒಪ್ಪಂದವನ್ನು ಸ್ಥಗಿತಗೊಳಿಸಿತು.

ಫ್ಯೂಚರ್‌ನ ತನ್ನ ವಿರುದ್ಧ ಕೆಳ ನ್ಯಾಯಾಲಯದ ತೀರ್ಪನ್ನು ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರ ನಡುವೆ ತನ್ನ 6,000 ಪುಟಗಳ ಫೈಲಿಂಗ್‌ನಲ್ಲಿ, ರಿಲಯನ್ಸ್‌ನೊಂದಿಗೆ ಒಪ್ಪಂದ ಮಾಡದಿದ್ದರೆ, 35,575 ಉದ್ಯೋಗಿಗಳ ಉದ್ಯೋಗಕ್ಕೆ ಸಂಕಟ ಎದುರಾಗಲಿದೆ. ಜೊತೆಗೆ ಸುಮಾರು 280 ಶತಕೋಟಿ ರೂಪಾಯಿಗಳು (ಬ್ಯಾಂಕ್ ಸಾಲಗಳು) ಅಪಾಯ ಉಂಟಾಗಲಿದೆ ಎಂದು ದೂರಿನಲ್ಲಿ ತಿಳಿಸಿದೆ.

'' ಈ ಅರ್ಜಿಯನ್ನು ತೀವ್ರ ವಿಚಾರಣೆ ನಡೆಸುವ ಅನಿವಾರ್ಯತೆ ಇದೆ" ಎಂದು ಫ್ಯೂಚರ್ಸ್ ವಕೀಲ ಯುಗಂಧರ ಪವಾರ್ ಜಾ ಸುಪ್ರೀಂ ಕೋರ್ಟ್ ಫೈಲಿಂಗ್‌ನಲ್ಲಿ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಆದರೆ ಈ ಕುರಿತಾಗಿ ಅಮೆಜಾನ್ ಮತ್ತು ಫ್ಯೂಚರ್ಸ್ ರೀಟೇಲ್ ವಕ್ತಾರರು ಶನಿವಾರ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಅಮೆಜಾನ್ ವಿರುದ್ಧ ಹೊಸ ಕೇಸ್ ದಾಖಲಿಸಿದ ಫ್ಯೂಚರ್ ರೀಟೇಲ್

ಅಮೆಜಾನ್ ಹಾಗೂ ಫ್ಯೂಚರ್ಸ್‌ ರೀಟೇಲ್ ಜೊತೆಗಿನ ವಿವಾದವು ತಿಂಗಳುಗಟ್ಟಲೆಯಿಂದ ನಡೆಯುತ್ತಲೇ ಇದ್ದು, ಕಳೆದ ವರ್ಷ ತನ್ನ ರಿಟೇಲ್ ಸ್ವತ್ತನ್ನು ರಿಲಯನ್ಸ್‌ಗೆ ಮಾರಾಟ ಮಾಡಿದಾಗ ಭಾರತೀಯ ಸಂಸ್ಥೆಯು ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ರಿಲಯನ್ಸ್ ರೀಟೇಲ್‌ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವೆ 24,713 ಕೋಟಿ ಮೊತ್ತದ ಒಪ್ಪಂದದ ವಿರುದ್ಧವಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಿಲಯನ್ಸ್ ಹಾಗೂ ಫ್ಯೂಚರ್ ನಡುವಿನ ಒಪ್ಪಂದ ಕುರಿತಾಗಿ ದೆಹಲಿ ಹೈಕೋರ್ಟ್‌ ನೀಡಿದ್ದ ತುರ್ತು ಆದೇಶವನ್ನು ಸುಪ್ರೀಂಕೋರ್ಟ್‌ ಶುಕ್ರವಾರ (ಆಗಸ್ಟ್‌ 06) ಎತ್ತಿ ಹಿಡಿಯಿತು.

ಭಾರತದ ರೀಟೇಲ್ ವಲಯದ ಬಹುದೊಡ್ಡ ಒಪ್ಪಂದ
ಫ್ಯೂಚರ್ ರಿಟೇಲ್‌ ಹಾಗೂ ರಿಲಯನ್ಸ್ ರೀಟೇಲ್ ನಡುವಿನ 24,713 ಕೋಟಿ ರೂಪಾಯಿ ಮೊತ್ತದ ಒಪ್ಪಂದವು ಭಾರತದ ರೀಟೇಲ್ ವಲಯದಲ್ಲಿ ಅತಿದೊಡ್ಡ ಒಪ್ಪಂದವಾಗಿದೆ. ಈ ಮೂಲಕ ಬಿಗ್‌ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಪ್ರಮುಖ ಚಿಲ್ಲರೆ ವ್ಯಾಪಾರ ಮಳಿಗೆಗಳನ್ನು ಆರ್‌ಆರ್‌ವಿಎಲ್‌ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಈ ಒಪ್ಪಂದದ ಭಾಗವಾಗಿ ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಿತ್ತು. ಈ ಒಪ್ಪಂದು ಸೆಬಿ, ಸಿಸಿಐ, ಎನ್‌ಸಿಎಲ್‌ಟಿ, ಷೇರುದಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿತ್ತು.

ಅಮೆಜಾನ್ ತಕರಾರು ಏನು?
ಫ್ಯೂಚರ್ ರೀಟೇಲ್‌ನ ಶೇಕಡಾ 49ರಷ್ಟು ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪಿಗೆ ಮತ್ತು ಅನುಮತಿ ಇಲ್ಲದೆಯೇ ಫ್ಯೂಚರ್ ಕೂಪನ್ಸ್ ಲಿಮಿಟೆಡ್ ಜೊತೆಗೆ ರಿಲಯನ್ಸ್ ರೀಟೇಲ್ ಒಪ್ಪಂದ ಮಾಡಿಕೊಂಡಿದ್ದನ್ನು ಅಮೆಜಾನ್ ಪ್ರಶ್ನಿಸಿತ್ತು. ಈ ಕುರಿತಾಗಿ ನ್ಯಾಯಾಲಯದ ಮೆಟ್ಟಿಲೇರಿ, draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿತ್ತು. ಜೊತೆಗೆ ಈ ಹಿಂದಿನ ಡೀಲ್‌ನಂತೆ ಫ್ಯೂಚರ್ ಕೂಪನ್ಸ್ ಮೇಲೆ ಅಮೆಜಾನ್ ಪಾಲು ಶೇಕಡಾ 49ರಷ್ಟಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನ್ ಹಾಗೂ ಕುಟಂಬದ ಬಳಿಕ ಶೇಕಡಾ 49ರಷ್ಟು ಪಾಲಿದೆ.

English summary

Future Group Files New Case Against Amazon In SC Over 3.4 Billion Deal

Future Retail on Saturday filed a new case against Amazon.com Inc at the Supreme Court in its latest effort to seek clearance for its $3.4 billion retail assets sale
Story first published: Saturday, August 28, 2021, 18:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X