For Quick Alerts
ALLOW NOTIFICATIONS  
For Daily Alerts

ಹ್ಯಾಕರ್‌ಗೆ 2 ಕೋಟಿ ರೂ. ವರ್ಗಾಯಿಸಿದ ಗೂಗಲ್, ಮುಂದಾಗಿದ್ದೇನು?

|

ತನ್ನನ್ನು ತಾನು ಹ್ಯಾಕರ್ ಎಂದು ಹೇಳಿಕೊಂಡಿರುವ ವ್ಯಕ್ತಿಗೆ ಗೂಗಲ್ ಆಕಸ್ಮಿಕವಾಗಿ ಎರಡು ಕೋಟಿ ರೂಪಾಯಿ ಅಂದರೆ 250,000 ಡಾಲರ್ ಅನ್ನು ವರ್ಗಾವಣೆ ಮಾಡಿದೆ. ಈ ಹಣ ಪಡೆದ ಬೆನ್ನಲ್ಲೇ ಆಶ್ಚರ್ಯಕ್ಕೆ ಒಳಗಾದ ಹ್ಯಾಕರ್ ಈ ಬಗ್ಗೆ ಟ್ವೀಟ್ ಮಾಡಿದ್ದಾನೆ. ಹಾಗೆಯೇ ಟೆಕ್ ದೈತ್ಯ ಕಂಪನಿಯಾದ ಗೂಗಲ್ ಯಾಕೆ ಹಣ ವರ್ಗಾವಣೆ ಮಾಡಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾನೆ.

ಈ ಬಗ್ಗೆ ತನ್ನನ್ನು ತಾನು ಹ್ಯಾಕರ್ ಎಂದು ಕರೆದುಕೊಂಡಿರುವ ಸ್ಯಾಮ್ ಖರಿ ಟ್ವೀಟ್ ಮಾಡಿದ್ದಾನೆ. "ಗೂಗಲ್ ಒಮ್ಮೆಲೇ ನನಗೆ 249,999 ಡಾಲರ್ ಕಳುಹಿಸಿ ಮೂರು ವಾರಗಳಿಗಿಂತ ಅಧಿಕ ಸಮಯವಾಗಿದೆ. ಇನ್ನು ಕೂಡಾ ಈ ಬಗ್ಗೆ ಯಾವುದೇ ಟಿಕೆಟ್ ರೈಸ್ ಆಗಿಲ್ಲ. ಏನೂ ಮಾತುಕತೆಯೂ ನಡೆದಿಲ್ಲ," ಎಂದು ತಿಳಿಸಿದ್ದಾನೆ.

ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ

"ನನಗೆ ಆಕಸ್ಮಿಕವಾಗಿ ಭಾರೀ ಮೊತ್ತ ಬಂದಿದೆ. ಇದರ ಬಗ್ಗೆ ಸ್ಪಷ್ಟಣೆಗಾಗಿ ಗೂಗಲ್ ಅನ್ನು ಸಂಪರ್ಕಿಸಲು ಯಾವುದೇ ಮಾರ್ಗವಿದೆಯೇ?," ಎಂದು ಸ್ಯಾಮ್ ಖರಿ ಮಂಗಳವಾರ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಹಾಗೆಯೇ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟಿನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಹ್ಯಾಕರ್‌ಗೆ 2 ಕೋಟಿ ರೂ. ವರ್ಗಾಯಿಸಿದ ಗೂಗಲ್, ಮುಂದಾಗಿದ್ದೇನು?

ನ್ಯೂಸ್‌ವೀಕ್‌ನ ಪ್ರಕಾರ, ಸ್ಯಾಮ್ ಖರಿ ನೆಬ್ರಸ್ಕಾದ ಒಮಾಹಾದಲ್ಲಿರುವ ಯುಗಾ ಲ್ಯಾಬ್ಸ್‌ನ ಸಿಬ್ಬಂದಿ ಭದ್ರತಾ ಇಂಜಿನಿಯರ್. ತಾನು ಹ್ಯಾಕಿಂಗ್ ಕೂಡಾ ಮಾಡುವುದಾಗಿ ಸ್ಯಾಮ್ ಖರಿ ಹೇಳಿದ್ದಾರೆ. ಹಲವಾರು ಕಂಪನಿಗಳು ತಮ್ಮ ಸಾಫ್ಟ್‌ವೇರ್‌ನಲ್ಲಿ ದೋಷಗಳು ಅಥವಾ ಭದ್ರತಾ ಸಮಸ್ಯೆಗಳನ್ನು ಕಂಡುಹಿಡಿದ ವ್ಯಕ್ತಿಗಳಿಗೆ ಬಹುಮಾನವನ್ನು ನೀಡುತ್ತದೆ. ಈ ದೋಷವನ್ನು ಕಂಡುಹಿಡಿಯುವ ಕಾರ್ಯವನ್ನು ತಾನು ಮಾಡುತ್ತಿರುವುದಾಗಿ ಸ್ಯಾಮ್ ಖರಿ ಹೇಳಿದ್ದಾನೆ.

ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್‌ಬ್ಯಾಕ್ ನೀಡುತ್ತಿದೆ, ಏಕೆ?ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್‌ಬ್ಯಾಕ್ ನೀಡುತ್ತಿದೆ, ಏಕೆ?

ಆಕಸ್ಮಿಕವಾಗಿ ಹಣ ವರ್ಗಾವಣೆ ಎಂದ ಗೂಗಲ್

ಈ ಹಿಂದೆ ತಾನು ಗೂಗಲ್‌ನಲ್ಲಿಯೂ ಇದೇ ಕಾರ್ಯವನ್ನು ಮಾಡಿರುವುದಾಗಿ ಸ್ಯಾಮ್ ಖರಿ ಹೇಳಿಕೊಂಡಿದ್ದಾನೆ. ಇನ್ನು ಮಾನವ ಸಹಜ ತಪ್ಪಿನಿಂದಾಗಿ ಆಕಸ್ಮಿಕವಾಗಿ ಹಣವನ್ನು ಪಾವತಿ ಮಾಡಲಾಗಿದೆ ಎಂದು ಎನ್‌ಪಿಆರ್‌ಗೆ ಗೂಗಲ್ ದೃಢಪಡಿಸಿದೆ. "ನಮ್ಮ ತಂಡವು ಇತ್ತೀಚೆಗೆ ಮಾನವ ದೋಷದ ಪರಿಣಾಮವಾಗಿ ತಪ್ಪಾಗಿ ಬೇರೆಯವರಿಗೆ ಹಣವನ್ನು ಪಾವತಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಕೂಡಲೇ ಮಾಹಿತಿ ಲಭ್ಯವಾಗಿದೆ. ನಾವು ಆದ ತಪ್ಪನ್ನು ಸರಿಪಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ," ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

ಇನ್ನು ಸ್ಯಾಮ್ ಖರಿ ತನಗೆ ಪಾವತಿ ಮಾಡಲಾದ 250,000 ಡಾಲರ್‌ ಹಣದಲ್ಲಿ ಒಂದು ಡಾಲರ್ ಅನ್ನು ಕೂಡ ಖರ್ಚು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಗೂಗಲ್ ವಕ್ತಾರರು ಆ ಹಣವನ್ನು ಮರಳಿ ಪಡೆಯುವುದಾಗಿ ಹೇಳಿದ್ದಾರೆ.

English summary

Google accidentally paid Rs 2 crore to a hacker, What next

A self-described hacker randomly received $250,000 (approximately Rs 2 crore) from Google last month. What happened next.
Story first published: Saturday, September 17, 2022, 17:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X