For Quick Alerts
ALLOW NOTIFICATIONS  
For Daily Alerts

LICಯಲ್ಲಿ ಶೇಕಡಾ 25ರಷ್ಟು ಪಾಲನ್ನು ಮಾರಲು ಕೇಂದ್ರದ ಯೋಜನೆ

By ಅನಿಲ್ ಆಚಾರ್
|

ಭಾರತೀಯ ಜೀವ ವಿಮಾ ನಿಗಮದಲ್ಲಿನ (ಎಲ್ ಐಸಿ) ಶೇಕಡಾ 25ರಷ್ಟು ಪಾಲನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ಸಂಪುಟದಿಂದ ಅನುಮತಿ ಕೇಳಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಬ್ಲೂಮ್ ಬರ್ಗ್ ವರದಿ ಮಾಡಿದೆ. ಈ ಮಾರಾಟಕ್ಕೆ ಸಿದ್ಧವಾಗಲು ಕೇಂದ್ರದಿಂದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಕಾಯ್ದೆಗೆ ತಿದ್ದುಪಡಿ ತರಲು ಆಲೋಚಿಸಲಾಗುತ್ತಿದೆ.

 

ಈ ಕಾಯ್ದೆ ಅಡಿಯಲ್ಲೇ ಎಲ್ ಐಸಿ ಕಾರ್ಯ ನಿರ್ವಹಿಸುತ್ತಿದೆ. ಐಪಿಒ ಮೂಲಕವಾಗಿ ಕೇಂದ್ರ್ ಸರ್ಕಾರವು ಎಲ್ ಐಸಿಯಲ್ಲಿನ ಷೇರಿನ ಪಾಲನ್ನು ಹಿಂತೆಗೆದುಕೊಳ್ಳಲಿದೆ ಎಂದು ಬಜೆಟ್ ಮಂಡನೆ ಮಾಡುವ ವೇಳೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು.

LICಯ ಲ್ಯಾಪ್ಸ್ ಆದ ವಿಮೆಗಳಿಗೆ ಮತ್ತೆ ಜೀವ ನೀಡಲು ಅಕ್ಟೋಬರ್ 9ರ ತನಕ ಅವಕಾಶ

ಸದ್ಯಕ್ಕೆ ಎಲ್ ಐಸಿಯಲ್ಲಿ ಸರ್ಕಾರದ ಪಾಲು ಶೇಕಡಾ ನೂರರಷ್ಟಿದೆ. ಮಾರುಕಟ್ಟೆ ಪರಿಸ್ಥಿತಿಯು ಐಪಿಒ ಸಮಯವನ್ನು ನಿರ್ಧರಿಸುತ್ತದೆ. ಕಂತುಕಂತಿನಲ್ಲಿ ಮಾರಾಟ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ ಆದಾಯದ ಕೊರತೆಯನ್ನು ತುಂಬಿಕೊಳ್ಳಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಐಪಿಒ ಮೂಲಕ ಎಲ್ ಐಸಿ ಷೇರಿನ ಪಾಲನ್ನು ಮಾರಲು ಮುಂದಾಗಿದೆ.

LICಯಲ್ಲಿ ಶೇಕಡಾ 25ರಷ್ಟು ಪಾಲನ್ನು ಮಾರಲು ಕೇಂದ್ರದ ಯೋಜನೆ

ಎಲ್ ಐಸಿ ಕಾಯ್ದೆಗೆ ತಿದ್ದುಪಡಿ ತಂದು, 20 ಸಾವಿರ ಕೋಟಿ ರುಪಾಯಿ ಆಥರೈಸ್ಡ್ ಬಂಡವಾಳ ಸಂಗ್ರಹಕ್ಕೆ, 20 ಬಿಲಿಯನ್ ಅಂದರೆ, ಒಂದು ಬಿಲಿಯನ್ ಅಂದರೆ ನೂರು ಕೋಟಿ ಷೇರು ವಿತರಿಸಲು ಅನುಮತಿ ಕೇಳಲಾಗುತ್ತದೆ. ಸದ್ಯಕ್ಕೆ ಇರುವ ಕಾಯ್ದೆ ಪ್ರಕಾರ ಆಥರೈಸ್ಡ್, ಇಷ್ಯೂಡ್ ಕ್ಯಾಪಿಟಲ್ ಮುಂತಾದವುಗಳಿಂದ ತಡೆಯಲಾಗಿದೆ ಎಂದು ವರದಿ ಹೇಳಿದೆ.

ಇದಕ್ಕೆ ತಕ್ಕಂತೆ ಆಡಳಿತ ಮತ್ತು ನಿರ್ದೇಶಕ ಮಂಡಳಿಯನ್ನು ಸಹ ಪುನರ್ ರಚನೆ ಮಾಡಲಾಗುತ್ತದೆ.

English summary

Government Plan To Sell 25 Percent Stake In LIC Through IPO

Union government planning to sell 25% stake in LIC through IPO to fill budgetary gap.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X