For Quick Alerts
ALLOW NOTIFICATIONS  
For Daily Alerts

ಗಮನಿಸಿ; ಪ್ರಮುಖ ಬದಲಾವಣೆ ಕಾಣಲಿರುವ ಸರಕು ಮತ್ತು ಸೇವಾ ತೆರಿಗೆ

|

ನವದೆಹಲಿ, ಜುಲೈ 4: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ತನ್ನ ನಾಲ್ಕನೇ ವರ್ಷದಲ್ಲಿ ಪ್ರಮುಖ ಸುಧಾರಣೆಗಳನ್ನು ಕಾಣುವ ನಿರೀಕ್ಷೆಯಿದೆ ಎಂದು ವರದಿಗಳು ಬಂದಿವೆ.

 

ರಾಜಕೀಯ ಪರಿಗಣನೆಗಳಿಗಿಂತ ವಿವೇಕದ ಆಧಾರದ ಮೇಲೆ ತೆರಿಗೆ ದರಗಳ ನಿರ್ಧಾರಗೊಳಿಸುವ ಮತ್ತು ಅನುಸರಣೆಯನ್ನು ಸರಾಗಗೊಳಿಸುವಿಕೆ ಮೇಲೆ ಪುನಃ ಸುಧಾರಣೆಗಳನ್ನು ಕಾಣುವ ನಿರೀಕ್ಷೆ ಇದೆ ಎನ್ನಲಾಗಿದೆ.

ತಿನ್ನುವ ಪರೋಟ ಮೇಲೆ ಕೇಂದ್ರದ ಕಣ್ಣು; ಬಿತ್ತು ಶೇ 18 ರಷ್ಟು ಜಿಎಸ್‌ಟಿತಿನ್ನುವ ಪರೋಟ ಮೇಲೆ ಕೇಂದ್ರದ ಕಣ್ಣು; ಬಿತ್ತು ಶೇ 18 ರಷ್ಟು ಜಿಎಸ್‌ಟಿ

ಹೊಸ ಸುಧಾರಣೆ ಪ್ರಕಾರ ನಾಲ್ಕರ ಸ್ಲಾಬ್ ಬದಲು ಮೂರು ಸ್ಲಾಬ್‌ ಜಿಎಸ್‌ಟಿ ದರಗಳನ್ನು ಪರಿಗಣಿಸಬಹುದು ಎನ್ನಲಾಗಿದೆ.

ನಾಲ್ಕರ ಬದಲು ಮೂರು

ನಾಲ್ಕರ ಬದಲು ಮೂರು

ಪ್ರಸ್ತುತ 5%, 12%, 18% ಮತ್ತು 28% ಸ್ಲಾಬ್ ಬದಲಿಗೆ 8%, 18% ಮತ್ತು 28% ಸ್ಲಾಬ್‌ ಅಳವಡಿಸಲು ಜಿಎಎಸ್‌ಟಿ ಕೌನ್ಸಿಲ್ ಚಿಂತನೆ ಮಾಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತೆರಿಗೆ ದರಗಳಲ್ಲಿ ಹೆಚ್ಚಳ ಮತ್ತು ಇಳಿಕೆಗೆ ಕಾರಣವಾಗುತ್ತದೆ

ತೆರಿಗೆ ದರಗಳಲ್ಲಿ ಹೆಚ್ಚಳ ಮತ್ತು ಇಳಿಕೆಗೆ ಕಾರಣವಾಗುತ್ತದೆ

"ತೆರಿಗೆ ಸ್ಲಾಬ್‌ಗಳಲ್ಲಿನ ಕಡಿತ ಮತ್ತು ತಲೆಕೆಳಗಾದ ಸುಂಕದ ರಚನೆಯ ತಿದ್ದುಪಡಿ ಎರಡೂ ಕೆಲವು ವಸ್ತುಗಳ ತೆರಿಗೆ ದರಗಳಲ್ಲಿ ಹೆಚ್ಚಳ ಮತ್ತು ಇಳಿಕೆಗೆ ಕಾರಣವಾಗುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯು ಇನ್ನೂ ಚೇತರಿಸಿಕೊಳ್ಳುತ್ತಿರುವುದರಿಂದ, ವ್ಯವಹಾರಸ್ಥರು ಮತ್ತು ಗ್ರಾಹಕರು ಎರಡಕ್ಕೂ ಪ್ರತಿಕೂಲ ಪರಿಣಾಮ ಬೀರದಂತೆ ಜಿಎಸ್‌ಟಿ ಕೌನ್ಸಿಲ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಜಿಎಸ್‌ಟಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

2017 ರಲ್ಲಿ ಪ್ರಾರಂಭಿಸಲಾಯಿತು
 

2017 ರಲ್ಲಿ ಪ್ರಾರಂಭಿಸಲಾಯಿತು

ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾಗಿ ಜಿಎಸ್‌ಟಿಯನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ಜಿಎಸ್ಟಿ ಜಾರಿಗೆ ಬಂದ ಮೂರು ವರ್ಷಗಳ ನಂತರವೂ ತೆರಿಗೆದಾರರಿಗೆ ಜಟಿಲವಾಗಿದೆ ಎಂದು ತಜ್ಞರು, ವ್ಯವಹಾರಗಳು ಮತ್ತು ಕೆಲವು ಕೌನ್ಸಿಲ್ ಸದಸ್ಯರು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವರ ನೇತೃತ್ವ

ಕೇಂದ್ರ ಹಣಕಾಸು ಸಚಿವರ ನೇತೃತ್ವ

ಕೇಂದ್ರ ಹಣಕಾಸು ಸಚಿವರ ನೇತೃತ್ವದ ಜಿಎಸ್ಟಿ ಕೌನ್ಸಿಲ್, ಪರೋಕ್ಷ ತೆರಿಗೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಿರ್ಧರಿಸುವ ಒಂದು ಉನ್ನತ ಕೇಂದ್ರ ಸಂಸ್ಥೆಯಾಗಿದೆ. ರಾಜ್ಯ ಹಣಕಾಸು ಮಂತ್ರಿಗಳು ಪರಿಷತ್ತಿನ ಸದಸ್ಯರಾಗಿದ್ದಾರೆ ಮತ್ತು ಅದರ ನಿರ್ಧಾರಗಳು ಸಾಂಪ್ರದಾಯಿಕವಾಗಿ ಸರ್ವಾನುಮತದಿಂದ ಕೂಡಿವೆ.

English summary

GST Regime May Undergo 2 Major Reforms This Year

Major Changes Will Happen In GST Slabs Coming days
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X