ಷೇರುಪೇಟೆ ಮೇಲೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಪ್ರಭಾವವೇನು?
ಷೇರು ಮಾರುಕಟ್ಟೆಯ ಮೇಲೆ ಜಾಗತಿಕ ಹಾಗೂ ರಾಷ್ಟ್ರೀಯ ಬೆಳವಣಿಗೆಗಳು ನೇರವಾಗಿ ಪ್ರಭಾವ ಉಂಟು ಮಾಡುತ್ತದೆ. ಚುನಾವಣೆಯೂ ಕೂಡಾ ಷೇರುಪೇಟೆಯ ಮೇಲೆ ಪರಿಣಾಮ ಬೀರುತ್ತದೆ. ಚುನಾವಣೆಯೂ ಆರ್ಥಿಕ, ಸಾಮಾಜಿಕ ಪ್ರಭಾವ ಬೀರುವ ಕಾರಣದಿಂದಾಗಿ ಯಾವುದೇ ದೇಶದಲ್ಲಿ ನಡೆಯುವ ಚುನಾವಣೆಯು ಅತೀ ಮುಖ್ಯವಾಗಿದೆ.
ಅದರಲ್ಲೂ ಮುಖ್ಯವಾಗಿ ಭಾರತದ ಸ್ಟಾಕ್ ಮಾರುಕಟ್ಟೆ ಅಥವಾ ಷೇರು ಮಾರುಕಟ್ಟೆಯ ಮೇಲೆ ಚುನಾವಣೆಗಳು ಅತೀ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಚುನಾವಣೆ ಫಲಿತಾಂಶಕ್ಕೆ ಅನುಗುಣವಾಗಿ ಸ್ಟಾಕ್‌ಗಳು ಏರಿಕೆ, ಇಳಿಕೆಯಾಗುತ್ತದೆ.
ನಿನ್ನೆ ಅಂದರೆ ಡಿಸೆಂಬರ್ 8ರಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಗುಜರಾತ್‌ನಲ್ಲಿ ಬಿಜೆಪಿ ದಾಖಲೆ ಸೃಷ್ಟಿ ಮಾಡಿದ್ದು, ಹಿಮಾಚಲ ಪ್ರದೇಶ ಕೈ ತೆಕ್ಕೆಗೆ ಸೇರಿದೆ. ಈ ನಡುವೆ ಈ ಚುನಾವಣೆಯ ಫಲಿತಾಂಶ ಷೇರುಪೇಟೆಯ ಮೇಲೆ ಹೇಗಿದೆ ನೋಡೋಣ ಮುಂದೆ ಓದಿ....

ತಜ್ಞರ ಅಭಿಪ್ರಾಯವೇನು?
ಚುನಾವಣೆ ಫಲಿತಾಂಶವು ಮಾರುಕಟ್ಟೆ ಮೇಲೆ ನೆಗೆಟಿವ್ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಯಿದೆ. ಆದರೆ ಮುಂದಿನ ವಾರದಲ್ಲಿ ಫೆಡರಲ್ ಸಭೆಯಿದ್ದು ಇದು ಕೂಡಾ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಫಲಿತಾಂಶಕ್ಕೂ ಮುನ್ನ ನೆಗೆಟಿವ್ ಪರಿಣಾಮ ಬೀರಲಿದೆ ಅಂದುಕೊಂಡಿದ್ದರು, ಆದರೆ ಡಿಸೆಂಬರ್ 9ರಂದು ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ ಏರಿಕೆಯಾಗಿದೆ.

ಆರಂಭಿಕ ವಹಿವಾಟು ಹೇಗಿತ್ತು?
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 122.80 ಅಂಕ ಅಥವಾ ಶೇಕಡ 0.20ರಷ್ಟು ಏರಿಕೆಯಾಗಿ 62693.48ಕ್ಕೆ ತಲುಪಿದೆ. ಇನ್ನು ನಿಫ್ಟಿ 37.30 ಅಂಕ ಅಥವಾ ಶೇಕಡ 0.20ರಷ್ಟು ಏರಿ 18646.60ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು 1504 ಷೇರುಗಳು ಏರಿಕೆಯಾಗಿದ್ದರೆ, 454 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಟಾಟಾ ಸ್ಟೀಲ್, ಎಚ್‌ಯುಎಲ್, ಇಂಡಸ್‌ಇಂಡ್ ಬ್ಯಾಂಕ್, ಗ್ರಾಸಿಮ್ ಇಂಡಸ್ಟ್ರೀಸ್, ಡಾ ರೆಡ್ಡೀಸ್ ಲ್ಯಾಬೋರೆಟರೀಸ್‌ಗಳು ನಿಫ್ಟಿಯಲ್ಲಿ ಪ್ರಮುಖ ಗೇನರ್ ಆಗಿದೆ. ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಅಪೋಲೋ ಹಾಸ್ಪಿಟಲ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್ ಟಾಪ್ ಸ್ಟಾಕ್‌ಗಳು ಆಗಿತ್ತು.

ವಹಿವಾಟಿನ ಅಂತ್ಯ ಹೇಗಿತ್ತು?
ಆದರೆ ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 389.01 ಅಂಕ ಅಥವಾ ಶೇಕಡ 0.62ರಷ್ಟು ಇಳಿಕೆಯಾಗಿ 62,181.67ಕ್ಕೆ ತಲುಪಿದೆ. ಇನ್ನು ನಿಫ್ಟಿ 112.70 ಅಂಕ ಅಥವಾ ಶೇಕಡ 0.61ರಷ್ಟು ಇಳಿದು 18,496.60ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 1199 ಷೇರುಗಳು ಏರಿಕೆಯಾಗಿದ್ದರೆ, 2220 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 113 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋ, ಹಿಂಡಾಲ್ಕೊ ಇಂಡಸ್ಟ್ರೀಸ್ ಟಾಪ್‌ನಲ್ಲಿತ್ತು. ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಡಾ ರೆಡ್ಡೀಸ್ ಲ್ಯಾಬೋರೆಟೀಸ್, ಟೈಟಾನ್ ಕಂಪನಿ, ಈಚರ್ ಮೋಟರ್ಸ್ ಸ್ಟಾಕ್‌ಗಳು ಇಳಿದಿದೆ.