For Quick Alerts
ALLOW NOTIFICATIONS  
For Daily Alerts

ಮನೆ ಖರೀದಿದಾರರಿಗೆ ಗುಡ್‌ನ್ಯೂಸ್: ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಆಕರ್ಷಕ ಬಡ್ಡಿದರದಲ್ಲಿ ಗೃಹ ಸಾಲ

|

ಮನೆ ಖರೀದಿಸಬೇಕು ಎಂದು ಎದುರು ನೋಡುತ್ತಿದ್ದವರಿಗೆ ಇಲ್ಲಿದೆ ಗುಡ್‌ನ್ಯೂಸ್. ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪ್ (ಎಚ್‌ಡಿಎಫ್‌ಸಿ) ಬ್ಯಾಂಕ್ ಮಂಗಳವಾರ ಗೃಹ ಸಾಲದ ಬಡ್ಡಿದರವನ್ನು ಶೇಕಡಾ 6.7 ರಿಂದ ನೀಡುವುದಾಗಿ ಘೋಷಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾರ್ವಕಾಲಿನ ಕನಿಷ್ಠ ಗೃಹ ಸಾಲ ಬಡ್ಡಿದರ ಇದಾಗಿದ್ದು, "ಮುಂಬರುವ ಹಬ್ಬದ ಸೀಸನ್‌ಗಾಗಿ ವಿಶೇಷ ಗೃಹ ಸಾಲ ದರಗಳನ್ನು ಘೋಷಿಸಲು ನಮಗೆ ಸಂತೋಷವಾಗಿದೆ" ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರೇಣು ಸುದ್ ಕಾರ್ನಾಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗೃಹ ಸಾಲದ ಮೇಲಿನ ಸೀಮಿತ ಅವಧಿಯ ಆಫರ್ ಈಗಾಗಲೇ ಸೆಪ್ಟೆಂಬರ್ 20 ರಿಂದ ಜಾರಿಗೆ ಬಂದಿದೆ ಮತ್ತು ಮನೆ ಖರೀದಿದಾರರು ವಿಶೇಷ ಸಾಲದ ದರವನ್ನು ಸಾಲಗಾರರ ಕ್ರೆಡಿಟ್ ಸ್ಕೋರ್‌ಗೆ ಲಿಂಕ್ ಮಾಡಲಾಗುವುದು ಎಂಬುದನ್ನು ಗಮನಿಸಬೇಕು.

ನ್ಯೂಸ್ 18 ರೊಂದಿಗೆ ಮಾತನಾಡಿದ ಎಚ್‌ಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರು, ವಸತಿ ಎಂದಿಗಿಂತಲೂ ಇಂದು ಹೆಚ್ಚು ಕೈಗೆಟುಕುವಂತಿದೆ ಮತ್ತು ಕಳೆದ ಒಂದೆರಡು ವರ್ಷಗಳಲ್ಲಿ, ದೇಶಾದ್ಯಂತದ ಪ್ರಮುಖ ಆಸ್ತಿ ಬೆಲೆಗಳು ಹೆಚ್ಚೂ ಕಡಿಮೆ ಒಂದೇ ರೀತಿ ಉಳಿದಿವೆ ಆದರೆ ಆದಾಯದ ಮಟ್ಟವು ಹೆಚ್ಚಾಗಿದೆ ಎಂದು ಹೇಳಿದರು . ದಾಖಲೆಯ ಕಡಿಮೆ ಬಡ್ಡಿ ದರಗಳು, ಪಿಎಂಎವೈ ಅಡಿಯಲ್ಲಿ ಸಬ್ಸಿಡಿಗಳು ಮತ್ತು ತೆರಿಗೆ ಪ್ರಯೋಜನಗಳು ಸಹ ಸಹಾಯ ಮಾಡಿದೆ ಎಂದು ಅವರು ಹೇಳಿದರು.

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಆಕರ್ಷಕ ಬಡ್ಡಿದರದಲ್ಲಿ ಗೃಹ ಸಾಲ

ಎಚ್‌ಡಿಎಫ್‌ಸಿ ಬ್ಯಾಂಕ್ ಗೃಹ ಸಾಲಕ್ಕೆ ಅರ್ಜಿ ಸಲ್ಲಿಕೆ ಹೇಗೆ?

ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿಕೆಯಲ್ಲಿ ಗೃಹ ಸಾಲದ ಬಡ್ಡಿ ದರದಲ್ಲಿ ರಿಯಾಯಿತಿ ಅಕ್ಟೋಬರ್ 31 ರವರೆಗೆ ಅನ್ವಯವಾಗುತ್ತದೆ ಮತ್ತು ಗ್ರಾಹಕರು www.hdfc.com ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಗೃಹ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.

ಮುಂಬರುವ ಹಬ್ಬದ ದಿನಗಳಲ್ಲಿ ಹೊಸ ಮನೆ ಖರೀದಿದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೊರತುಪಡಿಸಿ, ಹಲವಾರು ಇತರ ಬ್ಯಾಂಕ್‌ಗಳು ಒಂದೆರಡು ತಿಂಗಳಲ್ಲಿ ಗೃಹಸಾಲಗಳ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಮೊದಲು ಗೃಹ ಸಾಲದ ಬಡ್ಡಿದರಗಳನ್ನು ಯಾವುದೇ ಸಾಲದ ಮೊತ್ತಕ್ಕೆ ಶೇಕಡಾ 6.7 ಕ್ಕೆ ಇಳಿಸಿತು. ಏಕರೂಪ ದರದಲ್ಲಿ ಬ್ಯಾಂಕ್‌ಗಳು ಗೃಹ ಸಾಲ ನೀಡುತ್ತಿರುವುದು ಇದೇ ಮೊದಲು.

ಇದಕ್ಕೂ ಮುನ್ನ, ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗೃಹ ಸಾಲದ ಬಡ್ಡಿಯನ್ನು 6.50 ಕ್ಕೆ ಇಳಿಸಿದ್ದು, ಇತರ ಬ್ಯಾಂಕುಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಒಳಗೊಂಡಿವೆ, ಇದು ಸೆಪ್ಟೆಂಬರ್ 17 ರಂದು ಯಾವುದೇ ಮಿತಿಯನ್ನು ಲೆಕ್ಕಿಸದೆ 6.60 ಪ್ರತಿಶತದಷ್ಟು ಗೃಹ ಸಾಲಗಳಿಗೆ ಹಬ್ಬದ ಕೊಡುಗೆಗಳನ್ನು ಘೋಷಿಸಿತು.

English summary

HDFC Announces Home Loan at lowest interest of 6.7% , Here’s How to Apply in kannada

The Housing Development Finance Corp (HDFC) Bank on Tuesday announced to offer home loan interest rates from 6.7 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X