ಬೆಂಗಳೂರು, ಜನವರಿ 07: ಪ್ರಯಾಣಿಕರ ಪ್ರಶ್ನೆಗಳು ಮತ್ತು ದೂರುಗಳನ್ನು ಆಲಿಸಿ ಪರಿಹಾರ ಸೂಚಿಸಲು ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರು ಶೀಘ್ರದಲ್ಲೇ ಸಹಾಯ ಕೇಂದ್ರಗಳನ್ನು ತೆರೆಯಲಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ಬೆಂಗಳೂರಿನ ಯಶವಂತಪುರ, ಮೆಜೆಸ್ಟಿಕ್ ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಲ್ಲಿ ಸೋಮವಾರದಿಂದ ಪ್ರಾಯೋಗಿಕವಾಗಿ ಸ್ವಾಗತ ಡೆಸ್ಕ್‌ಗಳು ಕಾರ್ಯನಿರ್ವಹಿಸಲಿವೆ. ಪ್ರಯಾಣಿಕರು ತಮ್ಮ ಪ್ರಶ್ನೆಗಳು ಮತ್ತು ದೂರುಗಳೊಂದಿಗೆ ಸಹಾಯವಾಣಿಯಲ್ಲಿರುವ ಕುಳಿತಿರುವ ವ್ಯಕ್ತಿಗಳನ್ನು ಸಂಪರ್ಕಿಸಬಹುದು.

ಈ ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪೊಲೀಸ್ ಪಡೆಗಳನ್ನು ಹೆಚ್ಚಾಗಿ ನಿಯೋಜಿಸುವುದು. ಕಳ್ಳರು ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಸಂದೇಹಗಳನ್ನು ಪರಿಹರಿಸಲು ಪ್ರಯಾಣಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಕ್ರಮವು ಹೊಂದಿದೆ ಎಂದು ರೈಲ್ವೆಯ ಉಪ ಪೊಲೀಸ್ ಮಹಾನಿರೀಕ್ಷಕರಾದ ಡಾ ಎಸ್ ಡಿ ಶರಣಪ್ಪ ಅವರು ತಿಳಿಸಿದ್ದಾರೆ.
ಯೋಜನೆಯು ಪ್ರಗತಿಯಲ್ಲಿದ್ದು, ಪ್ರಾಯೋಗಿಕತೆಯಿಂದ ಸಿಗುವ ಯಶಸ್ಸಿನ ಆಧಾರದ ಈ ಕ್ರಮವನ್ನು ರಾಜ್ಯದ ಇತರ ಪ್ರಮುಖ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎಂದು ಡಾ ಸೌಮ್ಯಲತಾ ಎಸ್‌ಕೆ ತಿಳಿಸಿದರು. ಈ ಕ್ರಮಗಳ ಹೊರತಾಗಿಯೂ ಸಮಸ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ ಮತ್ತು ರೈಲ್ವೆ ಪೊಲೀಸರಿಗೆ ಹೆಚ್ಚು ಹೊರೆಯಾಗಬಹುದು. ಏಕೆಂದರೆ ರಾಜ್ಯಕ್ಕೆ ಮಂಜೂರಾದ ಸಿಬ್ಬಂದಿ ಸಂಖ್ಯೆಯೇ ಪ್ರಮುಖ ಸಮಸ್ಯೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಇಲಾಖೆಗೆ ಮಂಜೂರಾದ ಸಿಬ್ಬಂದಿ ಸಂಖ್ಯೆ 900, ಅದರಲ್ಲಿ 840 ಭರ್ತಿಯಾಗಿದೆ. ರಾಜ್ಯವು ಸುಮಾರು 380 ರೈಲ್ವೆ ನಿಲ್ದಾಣಗಳನ್ನು ಹೊಂದಿದೆ ಮತ್ತು 18 ಪೊಲೀಸ್ ಠಾಣೆಗಳು ಎಲ್ಲವನ್ನೂ ಒಳಗೊಂಡಿವೆ. ಪ್ರತಿ ಪ್ಲಾಟ್‌ಫಾರ್ಮ್‌ಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿದರೂ ರಾಜ್ಯದ ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಕವರ್ ಮಾಡುವುದು ಅಸಾಧ್ಯ ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಕೆಲಸಗಳ ಹೊರತಾಗಿ ಸ್ಟೇಷನ್ ಪೆಟ್ರೋಲಿಂಗ್ ಮತ್ತು ಪೊಲೀಸ್ ಸ್ಟೇಷನ್ ಪೇಪರ್ ಕೆಲಸಗಳಿಗೆ ರೈಲ್ವೆ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಜೂರಾದ ಹುದ್ದೆಗಳಉ ತುಂಬಾ ಕಷ್ಟಕರವಾದ ನಿರ್ವಹಣೆಯನ್ನು ಮಾಡಬೇಕಿದೆ.


Click it and Unblock the Notifications