For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಬ್ಯಾಂಕ್‌ ಸಿಇಓ ಇವರು

|

ಬ್ಯಾಂಕಿಂಗ್ ಎಂದರೆ ಹಣಕಾಸಿನ ಶಿಸ್ತು ಇರುವ ಒಂದು ಸಾಂಸ್ಥಿಕ ರಚನೆ. ಅಲ್ಲಿ ದುಡಿಯವವರಿಗೆ ನೀಡುವ ಸಂಬಳವನ್ನು ಹ್ಯಾಂಡ್ಸಮ್ ಸಾಲರಿ ಎಂದೇ ರೂಡಿಗತವಾಗಿ ಮಾತನಾಡುತ್ತಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಸಂಬಳ ಸೌಲಭ್ಯಗಳನ್ನು ನೀಡಲು ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳು ಮುಂಚೂಣಿಯಲ್ಲಿವೆ. ಹೀಗಾಗಿಯೇ ಎಚ್‌ಡಿಎಫ್‌ಸಿ, ಐಸಿಐಸಿಐ, ಕೊಟ್ಯಾಕ್ ಮಹಿಂದ್ರ, ಆಕ್ಸಿಸ್ ಬ್ಯಾಂಕುಗಳು ತ್ವರಿತವಾಗಿ ಬೆಳೆದು ಗ್ರಾಹಕರ ವಿಶ್ವಾಸ ವೃದ್ಧಿಸಿಕೊಳ್ಳುತ್ತಿವೆ.

ಬ್ಯಾಂಕಿಂಗ್ ಬಿಕ್ಕಟ್ಟು; ಸುಧಾರಣೆ ಹಾದಿಯ ಬಗ್ಗೆ ಎಚ್‌ಡಿಎಫ್‌ಸಿ ಹೇಳಿದ್ದಿಷ್ಟುಬ್ಯಾಂಕಿಂಗ್ ಬಿಕ್ಕಟ್ಟು; ಸುಧಾರಣೆ ಹಾದಿಯ ಬಗ್ಗೆ ಎಚ್‌ಡಿಎಫ್‌ಸಿ ಹೇಳಿದ್ದಿಷ್ಟು

ಅದರಲ್ಲೂ ಈ ಖಾಸಗಿ ಬ್ಯಾಂಕುಗಳ ಸಿಇಓಗಳ ಸಂಬಳ ಕೋಟಿಗಟ್ಟಲೇ ಇರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಬ್ಯಾಂಕ್ ಸಿಇಓಗಳ ಬಗ್ಗೆ ಮಾಹಿತಿ ಇಲ್ಲಿದೆ...

ಆದಿತ್ಯ ಪುರಿ

ಆದಿತ್ಯ ಪುರಿ

ಆದಿತ್ಯ ಪುರಿ, ಬ್ಯಾಂಕ್: ಎಚ್‌ಡಿಎಫ್‌ಸಿ, ಸಿಇಒ ಆದಿತ್ಯ ಪುರಿ ಮತ್ತೊಮ್ಮೆ ೨೦20ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಅವರ ವೇತನ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 38 ಏರಿಕೆಯಾಗಿದೆ. ಅವರು ವಾರ್ಷಿಕವಾಗಿ 18.92 ಕೋಟಿ ರೂ. ವೇತನ ಪಡೆಯುತ್ತಾರೆ.

ಸಂದೀಪ್ ಬಕ್ಷಿ

ಸಂದೀಪ್ ಬಕ್ಷಿ

ಸಂದೀಪ್ ಬಕ್ಷಿ, ಬ್ಯಾಂಕ್: ಐಸಿಐಸಿಐ, ಭಾರತದ ಎರಡನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂದೀಪ್ ಬಕ್ಷಿ ಅವರ ವಾರ್ಷಿಕವಾಗಿ ಒಟ್ಟು ಗಳಿಕೆ 6.31 ಕೋಟಿ ರೂ. ಬ್ಯಾಂಕ್ ವಾರ್ಷಿಕ ವರದಿಯ ಪ್ರಕಾರ, ಅಕ್ಟೋಬರ್ 2018 ರಲ್ಲಿ ಅಧಿಕಾರ ವಹಿಸಿಕೊಂಡ ಬಕ್ಷಿ ಅವರು 4.90 ಕೋಟಿ ರೂ. ಗಳಿಸಿದ್ದಾರೆ.

ಅಮಿತಾಬ್ ಚೌಧರಿ
 

ಅಮಿತಾಬ್ ಚೌಧರಿ

ಅಮಿತಾಬ್ ಚೌಧರಿ, ಬ್ಯಾಂಕ್: ಅಕ್ಸಿಸ್ ಬ್ಯಾಂಕ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಮಿತಾಭ್ ಚೌಧರಿ ಅವರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ೨೦20 ಕ್ಕೆ 6.01 ಕೋಟಿ ರೂ ವಾರ್ಷಿಕ ವೇತನ ಪಡೆಯುತ್ತಾರೆ.

ಉದಯ್ ಕೊಟಕ್

ಉದಯ್ ಕೊಟಕ್

ಉದಯ್ ಕೊಟಕ್, ಬ್ಯಾಂಕ್: ಕೋಟಕ್ ಮಹೀಂದ್ರಾ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೊಟಕ್ ಕಳೆದ ಹಣಕಾಸು ವರ್ಷದಲ್ಲಿ ಅವರ ವೇತನದಲ್ಲಿ ಇಳಿಕೆ ಕಂಡಿದ್ದಾರೆ. ಅವರು ವಾರ್ಷಿಕ ಒಟ್ಟು ಸಂಬಳ 2.97 ಕೋಟಿ ರೂ.ಗಳನ್ನು ಗಳಿಸಿದ್ದಾರೆ, ಇದು ಅದರ ಹಿಂದಿನ ವಾರ್ಷಿಕ ವರದಿಯ ಪ್ರಕಾರ ವರ್ಷದ ಹಿಂದಿನ ಅವಧಿಯ 3.52 ಕೋಟಿ ರೂ.ಗಳಿಂದ 18 ಪ್ರತಿಶತದಷ್ಟು ಕಡಿಮೆಯಾಗಿದೆ.

English summary

Here The Top 4 Highest Paid Bank CEOs in India

Here The Top 4 Highest Paid Bank CEOs in India
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X