ದೇಶದ ಬೃಹತ್ ಮೋಟಾರು ಬೈಕ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2020 ಜನವರಿಯಿಂದ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.
ಕಾರುಗಳ ತಯಾರಕ ಕಂಪನಿಗಳಂತೆ ಹೀರೋ ಮೋಟೊಕಾರ್ಪ್ ಕೂಡ ಬಿಎಸ್-VI ನಿಯಮಾವಳಿಗೆ ಅನುಗುಣವಾಗಿ ಎಂಜಿನ್‌ಗಳನ್ನು ಮೇಲ್ದರ್ಜೆಗೇರಿಸುವ ಹಿನ್ನಲೆಯಲ್ಲಿ ಬೈಕ್ ಮತ್ತು ಸ್ಕೂಟರ್ ದರ ಹೆಚ್ಚಿಸಲು ಮುಂದಾಗಿದೆ. ಜನವರಿ 1ರಿಂದ ಹೀರೋ ಬೈಕ್, ಸ್ಕೂಟರ್ ಬೆಲೆ 2,000 ರುಪಾಯಿಗಳವರೆಗೂ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಸದ್ಯ ಹೀರೋ ಕಂಪನಿಯಲ್ಲಿರುವ ಏಕೈಕ ಬಿಎಸ್-VI ದ್ವಿಚಕ್ರ ವಾಹನ ಎಂದರೆ ಸ್ಲೆಂಡರ್ ಐ ಸ್ಮಾರ್ಟ್ ಆಗಿದೆ. ಬಿಎಸ್-IV ಸ್ಪೆಂಡರ್ ಐ ಸ್ಮಾರ್ಟ್ ಹಾಗೂ ಬಿಎಸ್- VI ಸ್ಲೆಂಡರ್ ಐ ಸ್ಪಾರ್ಟ್ ನಡುವಿನ ಬೆಲೆಯ ವ್ಯತ್ಯಾಸ 7,560 ರುಪಾಯಿ. ಹಳೆಯ ಆವೃತ್ತಿಯ ಬೈಕ್ 57,430 (ಎಕ್ಸ್ ಶೋರೂಮ್, ದೆಹಲಿ)ರುಪಾಯಿ ಮತ್ತು ಹೊಸ ಬಿಎಸ್-VI ಬೆಲೆ 64,900 (ಎಕ್ಸ್ ಶೋರೂಮ್) ರುಪಾಯಿ ಇದೆ.
ಹೀರೋ ಮೋಟೊಕಾರ್ಪ್ ಅಷ್ಟೇ ಅಲ್ಲದೆ ಇತರೆ ಎಲ್ಲಾ ಮೋಟಾರು ಬೈಕುಗಳು ಮತ್ತು ಸ್ಕೂಟರ್‌ಗಳ ಬೆಲೆಯು ಸುಮಾರು 2,000 ರುಪಾಯಿಗಳವರೆಗೆ ಹೆಚ್ಚಿಸುವುದಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿವೆ. ಇತ್ತೀಚೆಗಷ್ಟೇ ಮಾರುತಿ ಕಂಪನಿಯು ತನ್ನ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿತ್ತು. ಟಾಟಾ ಕಂಪನಿಯು ಕೂಡ ಬೆಲೆ ಏರಿಕೆಯ ಯೋಚನೆಯಲ್ಲಿದೆ.
ದೇಶದಲ್ಲಿನ ಹಲವಾರು ವಾಹನ ತಯಾರಿಕಾ ಕಂಪನಿಗಳು ಡಿಸೆಂಬರ್ ತಿಂಗಳಿನಲ್ಲಿ ವರ್ಷಾಂತ್ಯದ ಮಾರಾಟವನ್ನು ಉತ್ತೇಜಿಸಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಜನವರಿಯಿಂದ ವಾಹನ ಬೆಲೆ ಹೆಚ್ಚಳವಾಗಲಿದೆ ಎಂಬ ಪ್ರಕಟಣೆಯನ್ನು ಕಳೆದ ಒಂದು ವಾರದಿಂದ ಹೇಳುತ್ತಾ ಬಂದಿವೆ. ಕಾರುಗಳು ತಯಾರಿಕಾ ಕಂಪನಿಗಳ ಸಾಲಿಗೆ ಇದೀಗ ಮೋಟೊಕಾರ್ಪ್ ಕೂಡ ಸೇರಿದ್ದು ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications