For Quick Alerts
ALLOW NOTIFICATIONS  
For Daily Alerts

ಗೃಹಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವಂತೆ ಪ್ರಧಾನಿಗೆ ಗೃಹ ಬಳಕೆದಾರರ ಪತ್ರ

|

ನವದೆಹಲಿ, ಜೂನ್ 9: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ರಿಯಲ್ ಎಸ್ಟೇಟ್ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಗೃಹ ಸಾಲ ಪಡೆದವರು ಸಾಲ ಕಟ್ಟಲು ಪರದಾಡುತ್ತಿದ್ದರೆ, ಅತ್ತ ಪೂರ್ಣಗೊಂಡ ಯೋಜನೆಗಳನ್ನು ಮಾರಾಟ ಮಾಡಲು ರಿಯಲ್ ಎಸ್ಟೇಟ್ ಕಂಪೆನಿಗಳು ಹೈರಾಣಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಗೃಹಬಳಕೆದಾರರ ರಾಷ್ಟ್ರಮಟ್ಟದ ವೇದಿಕೆಯಾದ The Forum for People's Collective Efforts (FPCE) ಗೃಹ ಸಾಲಗಳ ಮೇಲಿನ ಬಡ್ಡಿಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ. ಜೂನ್ 1 ರಂದು ಪ್ರಧಾನ ಮಂತ್ರಿಗೆ ವೇದಿಕೆ ಪತ್ರ ಬರೆದು, ರಿಯಲ್ ಎಸ್ಟೇಟ್ ವಲಯದ ಪುನರುಜ್ಜೀವನದ ಬದಲು ಸರ್ಕಾರದ ನೀತಿಗಳನ್ನು ಗೃಹಬಳಕೆದಾರರ ಮೇಲೆ ಕೇಂದ್ರೀಕರಿಸಬೇಕು ಎಂದು ​​ಹೇಳಿದೆ.

ಮನೆ ಖರೀದಿದಾರರು ಉದ್ಯೋಗ ನಷ್ಟ ಮತ್ತು ವೇತನ ಕಡಿತವನ್ನು ಎದುರಿಸುತ್ತಿರುವ ಕಾರಣ ಸರ್ಕಾರದ ಬೆಂಬಲದ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಡ್ಡಿಯನ್ನು ಸಂಪೂಣ ಮನ್ನಾ ಮಾಡಬೇಕು

ಬಡ್ಡಿಯನ್ನು ಸಂಪೂಣ ಮನ್ನಾ ಮಾಡಬೇಕು

ಈಗಾಗಲೇ ದೇಶದಾದ್ಯಂತದ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಂಬಂಧಿಸಿದಂತೆ ಗೃಹ ಬಳಕೆದಾರರಿಗೆ ಇಎಂಐಗಳನ್ನು ಕನಿಷ್ಠ ಆರು ತಿಂಗಳವರೆಗೆ ವಿಸ್ತರಿಸಲು The Forum for People's Collective Efforts (FPCE) ಮನವಿ ಮಾಡಿದೆ. ಬಡ್ಡಿಯನ್ನು ಸಂಪೂಣ ಮನ್ನಾ ಮಾಡಬೇಕು. ಲಾಕ್‌ಡೌನ್ ಪೂರ್ಣ ರದ್ದು ಮಾಡಿದ ನಂತರದ ಆರು ತಿಂಗಳವರೆಗೆ ಇದು ಸಂಬಂಧಿಸಿರಬೇಕು ಎಂದು ಅದು ಮೋದಿ ಅವರಿಗೆ ಮನವಿ ಮಾಡಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (ಬಿ)

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (ಬಿ)

ಆರು ತಿಂಗಳ ಕಾಲ ಇಎಂಐ ಪಾವತಿಗಳಿಗೆ ಸರ್ಕಾರವು ನಿಷೇಧವನ್ನು ನೀಡಿದೆ, ಆದರೆ ಇದು ಭವಿಷ್ಯದ ಬಡ್ಡಿ ಹೊಣೆಗಾರಿಕೆಗಳನ್ನು ಹೆಚ್ಚಿಸುತ್ತದೆ ಎಂದು FPCE ಸಂಸ್ಥೆ ಹೇಳಿದೆ. ಮನೆ ಖರೀದಿದಾರರು ಪಾವತಿಸಬೇಕಾದ ಇಎಂಐಗಳ ಮೇಲಿನ ನಿಷೇಧದ ಅವಧಿಯಲ್ಲಿ ಬಡ್ಡಿ ಮೊತ್ತವನ್ನು ಮನ್ನಾ ಮಾಡಲು ಎಫ್‌ಪಿಸಿಇ ಬೇಡಿಕೆ ಇಟ್ಟಿದೆ. ಇದು 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (ಬಿ) ನಲ್ಲಿ ತಿದ್ದುಪಡಿ ಕೋರಿ, ಗೃಹ ಸಾಲಗಳ ಮೇಲಿನ ಬಡ್ಡಿಯ ಮೇಲಿನ ಕಡಿತವನ್ನು ಹೇಳಿಕೊಳ್ಳುವ 5 ವರ್ಷಗಳ ಮಿತಿಯನ್ನು ತೆಗೆದುಹಾಕಿದೆ.

ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿವೆ

ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿವೆ

ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಬಿಸಿ ತಟ್ಟುತ್ತಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಅನೇಕ ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿವೆ. ಇದಕ್ಕೆ ಕಾರಣ, ಲಾಕ್‌ಡೌನ್ ಪರಿಣಾಮವಾಗಿ ಲಕ್ಷಾಂತರ ಜನ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇನ್ನೂ ಕೆಲವರು ಸಂಬಳ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಬೇಡಿಕೆ ಕುಸಿದಿದ್ದು, ಉತ್ಪಾದನಾ ಚಟುವಟಿಕೆ ಮೇಲೆ ಕರಿನೆರಳು ಬಿದ್ದಿದೆ. ಸಾಲ ಮರುಪಾವತಿ ವಿಷವಾಗಿ ಅನೇಕ ಬ್ಯಾಂಕುಗಳು ಇಂತಹ ಕಠಿಣ ಸಮಯದಲ್ಲಿ ಸಾಲ ನೀಡಲು ಮುಂದೆ ಬರುತ್ತಿಲ್ಲ.

ಸಾಲರಿ ಸ್ಲಿಪ್‌ಗಳನ್ನು ಕೇಳುತ್ತಿದ್ದಾರೆ

ಸಾಲರಿ ಸ್ಲಿಪ್‌ಗಳನ್ನು ಕೇಳುತ್ತಿದ್ದಾರೆ

ಲಾಕ್‌ಡೌನ್ ಮೊದಲು ಮಂಜೂರಾದ ಗೃಹ ಸಾಲಗಳನ್ನು ಈಗ ವಿತರಿಸಲು ಕೆಲ ಹಣಕಾಸು ಸಂಸ್ಥೆಗಳು ಮೀನಾಮೇಷ ಎಣಿಸುತ್ತಿವೆ ಎಂದು ಸೋಮವಾರ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಸಾಲಗಾರರಿಂದ ಹೊಸದಾಗಿ ಸಾಲರಿ ಸ್ಲಿಪ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳುತ್ತಿವೆ ಎಂದು ತಿಳಿದು ಬಂದಿದೆ.

English summary

Home Loan Interest Waive Request To PM Narendra Modi From FPCE

Home Loan Interest Waive Request To PM Narendra Modi From The Forum For Peoples Collective Efforts. at lockdown time job and salary cutting.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X