For Quick Alerts
ALLOW NOTIFICATIONS  
For Daily Alerts

ಕೊರೊನಾವನ್ನು ಉದ್ದೇಶಪೂರ್ವಕವಾಗಿ ಹಬ್ಬಿಸಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದ ಟ್ರಂಪ್

|

ಕೊರೊನಾ ವಿಶ್ವದಾದ್ಯಂತ ಹರಡಲು ಒಂದು ವೇಳೆ ಚೀನಾ ದೇಶವು 'ಗೊತ್ತಿದ್ದೂ ಜವಾಬ್ದಾರಿ' ಆಗಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಕಾಯಿಲೆ ಸನ್ನಿವೇಶವನ್ನು ಚೀನಾ ನಿರ್ವಹಿಸಿದ ಬಗ್ಗೆ ಟ್ರಂಪ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕತೆ ಇಲ್ಲ, ಆರಂಭದಲ್ಲಿ ಚೀನಾವು ಅಮೆರಿಕಗೆ ಸಹಕಾರ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. "ಗೊತ್ತಿದ್ದೂ ಅವರು ಜವಾಬ್ದಾರರಾಗಿದ್ದರೆ ಅದರ ಪರಿಣಾಮಗಳು ಇರುತ್ತವೆ" ಎಂದು ಟ್ರಂಪ್ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ. "ನೀವು ಮಾತನಾಡುತ್ತಿರುವಾ ವಿಚಾರದ ಬಗ್ಗೆ ಹೇಳುವುದಾದರೆ, 1917ರಿಂದ ಈಚೆಗೆ ಇಂಥ ಬದುಕನ್ನು ಯಾರೂ ಕಂಡಿಲ್ಲ" ಎಂದಿದ್ದಾರೆ.

ಕೊರೊನಾ ತನಕ ಎಲ್ಲವೂ ಸರಿಯಿತ್ತು

ಕೊರೊನಾ ತನಕ ಎಲ್ಲವೂ ಸರಿಯಿತ್ತು

ಇಡೀ ಜಗತ್ತನ್ನು COVID- 19 ಗುಡಿಸಿ ಹಾಕುವ ತನಕ ಚೀನಾದ ಜತೆಗೆ ಸಂಬಂಧ ಚೆನ್ನಾಗಿತ್ತು. ದಿಢೀರನೇ ಈ ಬಗ್ಗೆ ಕೇಳಿಬಂತು. ಎಲ್ಲವೂ ಬದಲಾಯಿತು. ನಾವು ಕೇಳುವ ಪ್ರಶ್ನೆಗೆ ಚೀನಾ ಕೋಪ ಮಾಡಿಕೊಳ್ಳಬಹುದು. ಆದರೆ ಉತ್ತರ ಹೇಗೆ ಬರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು ಬೇರೆ

ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು ಬೇರೆ

ನಮ್ಮ ಕೈ ಮೀರಿ ಆಗುವ ತಪ್ಪುಗಳು ಬೇರೆ, ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು ಬೇರೆ. ಎರಡಕ್ಕೂ ವ್ಯತ್ಯಾಸ ಇದೆ. ಈ ಎರಡೂ ಸನ್ನಿವೇಶದಲ್ಲಿ ಯಾವುದೇ ಆದರೂ ನಮಗೆ ಸಮಸ್ಯೆ ಅರಿಯಲು ಅವಕಾಶ ಮಾಡಿಕೊಡಬೇಕಾಗಿತ್ತು. ಆರಂಭದ ಹಂತದಲ್ಲೇ ಕೇಳಿದ್ದೆವು. ಆದರೆ ನಾವು ಅದರಲ್ಲಿ ಒಳಗೊಳ್ಳುವುದು ಅವರಿಗೆ ಬೇಕಿರಲಿಲ್ಲ. ಅದೆಂಥದ್ದೋ ಕೆಟ್ಟದ್ದು ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ಮುಜುಗರಕ್ಕೆ ಒಳಗಾದರು ಎಂದಿದ್ದಾರೆ.

ಜೋ ಬಿಡೆನ್ ಪರ ನಿಂತಿದೆ ಚೀನಾ

ಜೋ ಬಿಡೆನ್ ಪರ ನಿಂತಿದೆ ಚೀನಾ

ಇನ್ನು ಚೀನಾವು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಪರವಾಗಿ ಕೆಲಸ ಮಾಡುತ್ತಿದೆ. ಅವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಚುನಾವಣೆಗೆ ಸದ್ಯಕ್ಕೆ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಎಚ್ಚರಿಕೆಯಿರದ ಜೊ ಬಿಡೆನ್ ಅಧ್ಯಕ್ಷರಾಗಿ ಗೆದ್ದರೆ ಯುನೈಟೆಡ್ ಸ್ಟೇಟ್ಸ್ ಅನ್ನು ಚೀನಾ ತನ್ನದಾಗಿಸಿಕೊಳ್ಳುತ್ತದೆ. ನಾನು ತೆಗೆದುಕೊಂಡ ಕೆಲವು ತೀರ್ಮಾನದ ಕಾರಣಕ್ಕೆ ಬಿಲಿಯನ್ ಗಟ್ಟಲೆ ಡಾಲರ್ ಚೀನಾದ ಬದಲಿಗೆ ಯು.ಎಸ್.ಗೆ ಲಾಭವಾಗಿದೆ ಎಂದಿದ್ದಾರೆ ಟ್ರಂಪ್.

ಇರಾನ್ ಗೆ ತಾನು ಉಳಿದುಕೊಂಡರೆ ಸಾಕಾಗಿದೆ

ಇರಾನ್ ಗೆ ತಾನು ಉಳಿದುಕೊಂಡರೆ ಸಾಕಾಗಿದೆ

ಇಡೀ ಜಗತ್ತಿನಲ್ಲೇ ಅತ್ಯದ್ಭುತವಾದ ಆರ್ಥಿಕತೆ ನಮ್ಮದಾಗಿತ್ತು. ಆ ವಿಚಾರಕ್ಕೆ ಬಂದರೆ ಚೀನಾ ನಮ್ಮ ಹತ್ತಿರದ ಸ್ಥಾನದಲ್ಲಿ ಕೂಡ ಇರಲಿಲ್ಲ. ಎರಡು ತಿಂಗಳ ಹಿಂದಕ್ಕೆ ಹೋಗಿ. ನಾವು ಆ ಹಾದಿಯಲ್ಲೇ ಸಾಗಲಿದ್ದೇವೆ. ಅಂದಹಾಗೆ ಈ ಹಿಂದೆ ಇದ್ದ ಇರಾನ್ ಗೂ ಈಗಿನ ಸನ್ನಿವೇಶಕ್ಕೂ ಬಹಳ ಬದಲಾಗಿದೆ. ನಾನು ಬಂದಾಗ, ಇಡೀ ಮಧ್ಯಪ್ರಾಚ್ಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಇರಾನ್ ಹವಣಿಸುತ್ತಿತ್ತು. ಈಗ ತಾನು ಉಳಿದುಕೊಳ್ಳುವುದನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ ಡೊನಾಲ್ಡ್ ಟ್ರಂಪ್.

English summary

If Corona Spread By China Deliberately, Will Face Consequences: Trump Warning

In case China deliberately spread Corona, it will face consequences, warned by American president Donald Trump.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X