For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್

By ಮಂಜುಳಾ
|

ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕಾಗಿರುವ ಸಾಲದ ಮೊತ್ತ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಈ ಸಾಲವನ್ನು ಮರುಪಾವತಿಸಲು ವಿಫಲರಾದಲ್ಲಿ ಕಾರ್ಡ್ ಬಳಕೆದಾರರು ಕ್ರಿಮಿನಲ್ ಆರೋಪ ಎದುರಿಸಬೇಕಾಗುತ್ತದೆ ಮತ್ತು ಬ್ಯಾಂಕ್ ಖಾತೆಯಲ್ಲಿ ಅಗತ್ಯ್ ಪ್ರಮಾಣದಲ್ಲಿ ಹಣವಿಲ್ಲದೆ ಚೆಕ್ ವಾಪಸಾದರೆ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

 

ಇತ್ತೀಚೆಗೆ ಬಿಡುಗಡೆಯಾದ ಎಸ್ ಬಿಐ ಕಾರ್ಡ್ ಗಳ ಐಪಿಒ ವಿವರಣೆ ಪತ್ರದ ಮಾಹಿತಿಯ ಪ್ರಕಾರ: ಕಂಪೆನಿಯು ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆ 138ರ ಅಡಿಯಲ್ಲಿ 19,201 ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ 14,174 ಪ್ರಕರಣಗಳನ್ನು ಪಾವತಿ ಮತ್ತು ಸೆಟ್ಲ್ ಮೆಂಟ್ ಕಾಯ್ದೆ 2007ರ ಅಡಿಯಲ್ಲಿ ದಾಖಲಿಸಿಕೊಂಡಿದೆ.

 

CIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದುCIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದು

ಕಾಯ್ದೆ 138ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಸಾಮಾನ್ಯವಾಗಿ, ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಇರುವುದರಿಂದ (insufficient fund) ಇಂತಹ ಪ್ರಕರಣಗಳನ್ನು ಚೆಕ್ ಬೌನ್ಸ್ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ದರೆ ಕ್ರಿಮಿನಲ್ ಕೇಸ್

ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಎಲೆಕ್ಟ್ರಾನಿಕ್ ಪಾವತಿಗಳು ವಾಪಸ್ ಆದ ಸಂದರ್ಭಗಳಲ್ಲಿ ಹಣ ಪಾವತಿ ಮಾಡಲು ಸಾಧ್ಯವಿಲ್ಲವೆಂದು (ಬಿಲ್ ಪಾವತಿಸಲು ಆಟೋ ಡೆಬಿಟ್ / ಇಸಿಎಸ್) ಪರಿಗಣಿಸಿ ಇಂತಹ ಪ್ರಕರಣಗಳನ್ನು ಪಾವತಿ ಮತ್ತು ಸೆಟ್ಲ್ ಮೆಂಟ್ ಕಾಯ್ದೆಯಡಿಯಲ್ಲಿ ದಾಖಲಿಸಲಾಗುತ್ತದೆ. ವಿಶೇಷವೇನೆಂದರೆ ಇಂಥ ಪ್ರಕರಣಗಳ ಒಟ್ಟು ಮೊತ್ತ ಕ್ರಮವಾಗಿ 25.52 ಮತ್ತು 72.6 ಕೋಟಿಗಳಾಗಿವೆ.

ಕ್ರೆಡಿಟ್ ಕಾರ್ಡ್ ಗೆ ಯಾವುದೂ ಸಣ್ಣ ಮೊತ್ತವಲ್ಲ
ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಕೇವಲ 13,290ರಿಂದ 51,220 ರುಪಾಯಿ ತನಕ ಕೂಡ ಬಾಕಿ ಪಾವತಿಸಲು ತಪ್ಪಿದಲ್ಲಿ ಈ ಮೇಲೆ ಹೇಳಿದ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಪಡೆದವರಿಗೆ ಯಾವುದೇ ಮೊತ್ತವು ಸಣ್ಣದಾಗಿರಲು ಸಾಧ್ಯವಿಲ್ಲ. ಈ ಮೊತ್ತವನ್ನು ಮರು ಪಾವತಿ ಮಾಡದೇ ಇರುವ ಪಕ್ಷದಲ್ಲಿ ಅಂತಹ ಗ್ರಾಹಕರು ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ.

ಗ್ರಾಹಕರಿಗೆ ಸಿಗಲಿದೆ ಬಂಪರ್ ರಿಯಾಯಿತಿ :ನೂತನ SBI ವಿಸ್ತಾರಾ ಕ್ರೆಡಿಟ್ ಕಾರ್ಡ್‌ಗ್ರಾಹಕರಿಗೆ ಸಿಗಲಿದೆ ಬಂಪರ್ ರಿಯಾಯಿತಿ :ನೂತನ SBI ವಿಸ್ತಾರಾ ಕ್ರೆಡಿಟ್ ಕಾರ್ಡ್‌

ಐಪಿಒ ವಿವರಣೆ ಪತ್ರದಲ್ಲಿರುವ ಟಿಪ್ಪಣಿಯಲ್ಲಿ ಎಸ್ ಬಿಐ ಅನುಸರಿಸುವ ಒಂದು ವಿಧಾನವನ್ನು ಹೀಗೆ ವಿವರಿಸಲಾಗುತ್ತದೆ. ಎಸ್ ಬಿಐ ಕಾರ್ಡ್ ಗಳು ಎಸ್ಸೆಮ್ಮೆಸ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡಿಯೂ ನಿಗದಿತ ದಿನಗಳ ಒಳಗಾಗಿ ಪಾವತಿ ಮಾಡದೇ ಇದ್ದಲ್ಲಿ, ಗ್ರಾಹಕರ ಖಾತೆಗಳನ್ನು ನಿರ್ಬಂಧಿಸಬಹುದು (ಬ್ಲಾಕ್ ಮಾಡಬಹುದು ).

ಹೀಗೆ ಖಾತೆಯನ್ನು ಬ್ಲಾಕ್ ಮಾಡುವುದು ಬಾಕಿ ಪಾವತಿ ಮಾಡುವ ಸಂಭಾವ್ಯತೆಯನ್ನು ಅವಲಂಬಿಸಿರುತ್ತದೆ. ಇದು ತಾತ್ಕಾಲಿಕವಾಗಿ ಆಗಬಹುದು ಅಥವಾ ಶಾಶ್ವತವಾಗಿಯಾದರೂ ಆಗಬಹುದಾಗಿದೆ.

6 ತಿಂಗಳಲ್ಲಿ ಬಾಕಿ ಪಾವತಿಸಬೇಕು
ಸುಮಾರು 6 ತಿಂಗಳಲ್ಲಿ ಬಾಕಿ ಪಾವತಿಸದೇ ಇರುವ ಕ್ರೆಡಿಟ್ ಕಾರ್ಡ್ ನ ಖಾತೆಯು ರಿಕವರಿ ಶಾಖೆಗೆ ಹೋಗುತ್ತದೆ. ಪಾವತಿ ದಿನಾಂಕದಿಂದ 191 ದಿನಗಳ ನಂತರ ಚಾರ್ಜ್ ಮಾಡಿದ ಖಾತೆಗಳನ್ನು ರಿಕವರಿ ಪೂಲ್ / ಪೋಸ್ಟ್ ಚಾರ್ಜ್ -ಆಫ್ ಬಕೆಟ್ ಎಂಬ ವರ್ಗ ಮಾಡಲಾಗುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

ಅಂತಹ ಸಂದರ್ಭದಲ್ಲಿ ಕಂಪೆನಿಯ ಮಧ್ಯಸ್ಥಿಕೆ ಸಂಧಾನ, ದ್ವಿಭಾಷಾ ಕಾನೂನು ಸೂಚನೆ , ಪ್ರಿವಿಲೇಜ್ ಪೊಲೀಸ್ ಲೋಕ್ ಅದಾಲತ್ ಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ದೂರನ್ನು ದಾಖಲಿಸಲಾಗುತ್ತದೆ. ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ಕಾನೂನು ಕ್ರಮವನ್ನು ಸಹ ಬಳಸಬಹುದಾಗಿದೆ. ಮೇಲೆ ಉಲ್ಲೇಖಿಸಿದ ಎರಡೂ ವಿಭಾಗಗಳು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಬಾಕಿ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚಿನ ದಂಡವನ್ನು ವಿಧಿಸುತ್ತವೆ.

ಕ್ರೆಡಿಟ್ ಕಾರ್ಡ್ ಶುಲ್ಕ ಮತ್ತು ದಂಡಗಳ ಬಗ್ಗೆ ನಿಮಗೆಷ್ಟು ಗೊತ್ತು?ಕ್ರೆಡಿಟ್ ಕಾರ್ಡ್ ಶುಲ್ಕ ಮತ್ತು ದಂಡಗಳ ಬಗ್ಗೆ ನಿಮಗೆಷ್ಟು ಗೊತ್ತು?

ಖಾತೆಯಲ್ಲಿ ಹಣದ ಕೊರತೆಯಿಂದಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದೆ ಅಥವಾ ಸಾಕಷ್ಟು ಹಣದ ಕೊರತೆಯ ಕಾರಣದಿಂದಾಗಿ ಎಲೆಕ್ಟ್ರಾನಿಕ್ ವರ್ಗಾವಣೆಯಿಂದ (ಇಸಿಎಸ್ ) ಚೆಕ್ ಬೌನ್ಸ್ ಆಗಿರುವ ಖಾತೆಗಳಾಗಲೀ ಕಾಯ್ದೆ ಅಥವಾ ಪಾವತಿ ಮತ್ತು ಸೆಟ್ಲ್ ಮೆಂಟ್ ಈ ಎರಡೂ ಕಾಯ್ದೆ ಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಕಂಪೆನಿಯು ಕಾರ್ಡ್ ಬಳಕೆದಾರರಿಗೆ (ಚೆಕ್ ಬೌನ್ಸ್ ಅಥವಾ ಆಟೋ ಡೆಬಿಟ್ ಆಗಿರುವ ಬಳಕೆದಾರರಿಗೆ) 30 ದಿನಗಳ ಒಳಗಾಗಿ ಮರು ಪಾವತಿ ಮಾಡುವಂತೆ ಸುತ್ತೋಲೆಯನ್ನು ಕಳುಹಿಸಲೇಬೇಕು.

ಸುತ್ತೋಲೆ ಕಳುಹಿಸಿದ 15 ದಿನಗಳ ಒಳಗಾಗಿ ಮರು ಪಾವತಿ
ಈ ಸುತ್ತೋಲೆ ಕಳುಹಿಸಿದ 15 ದಿನಗಳ ಒಳಗಾಗಿ ಮರು ಪಾವತಿ ಮಾಡದೇ ಇದ್ದಲ್ಲಿ ಮೇಲೆ ಹೇಳಿದ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು. ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರು ಅಥವಾ ತಪ್ಪಿತಸ್ಥರು ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಸುತ್ತೋಲೆಯ ನಂತರವೂ ಮರುಪಾವತಿ ಮಾಡದೇ ಇರುವ ಪಕ್ಷದಲ್ಲಿ 'ಸಿಬಿಲ್' ನಂತಹ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಕಪ್ಪು ಪಟ್ಟಿಗೆ ಸೇರಿಸಬಹುದು.

ಒಂದು ವೇಳೆ ಈ ಪಟ್ಟಿಗೆ ಸೇರಿಸಿದಲ್ಲಿ ನಂತರ ಸಾಲದ ಹಣ ತೀರಿಸಿದರೂ ಭವಿಷ್ಯದಲ್ಲಿ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಪಡೆಯುವುದು ಕಷ್ಟವಾಗಬಹುದು. ಭಾರತದಲ್ಲಿ ಸುಮಾರು 3.6 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಚಾಲ್ತಿಯಲ್ಲಿವೆ ಮತ್ತು 83 ಲಕ್ಷ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿರುವ ಎಸ್‌ಬಿಐ ಸುಮಾರು 23% ಮಾರುಕಟ್ಟೆ ಪಾಲನ್ನು ಹೊಂದಿದೆ.

English summary

If Credit Card Bill Cannot Pay You Could Face Criminal Charges

In case credit card dues cannot pay you could face criminal charges. Here is the complete details.
Story first published: Wednesday, December 4, 2019, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X