For Quick Alerts
ALLOW NOTIFICATIONS  
For Daily Alerts

IL&FS ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಯಿಂದ 452 ಕೋಟಿ ರು. ಆಸ್ತಿ ಮುಟ್ಟುಗೋಲು

By ಅನಿಲ್ ಆಚಾರ್
|

ಐಎಲ್ ಅಂಡ್ ಎಫ್ ಎಸ್ ಹಣ ಪಾವತಿ ಬಾಕಿ ಉಳಿಸಿಕೊಂಡ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಂಗಾಪೂರ ಮೂಲದ "ಶೆಲ್" ಅಥವಾ ನಕಲಿ ಕಂಪೆನಿಗೆ ಸೇರಿದ 452 ಕೋಟಿ ರುಪಾಯಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ ಎಂದು ಮಂಗಳವಾರ ತಿಳಿಸಲಾಗಿದೆ.

ಬ್ರಿಟಿಷ್ ನಾಗರಿಕ ಜೈಮಿನ್ ವ್ಯಾಸ್ ಗೆ ಸೇರಿದ ಶೆಲ್ ಕಂಪೆನಿಯಾದ ಎ.ಎಸ್. ಕೋಲ್ ಪಿಟಿಇ ಸಿಂಗಾಪೂರ್ ಗೆ ಸೇರಿದ ಷೇರುಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಐಎಲ್ ಮತ್ತು ಎಫ್ಎಸ್ ರೂ. 13,000 ಕೋಟಿ ಅಕ್ರಮ ವ್ಯವಹಾರಐಎಲ್ ಮತ್ತು ಎಫ್ಎಸ್ ರೂ. 13,000 ಕೋಟಿ ಅಕ್ರಮ ವ್ಯವಹಾರ

ಇದು 2019ನೇ ಸಾಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ. ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗ ದಳವು ಐಎಲ್ ಅಂಡ್ ಎಫ್ ಎಸ್ ಸಮೂಹ ಕಂಪೆನಿಗೆ ಸೇರಿದ ಐಆರ್ ಎಲ್ ಮತ್ತು ಐಟಿಎನ್ ಎಲ್ ಹಾಗೂ ಅದರ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿತ್ತು.

IL&FS ಪ್ರಕರಣದಲ್ಲಿ ಇ.ಡಿ.ಯಿಂದ 452 ಕೋಟಿ ರು. ಆಸ್ತಿ ಮುಟ್ಟುಗೋಲು

ವಿಚಾರಣೆ ಮೂಲಕ ಗೊತ್ತಾಗಿರುವುದು ಏನೆಂದರೆ, ಐಎಲ್ ಅಂಡ್ ಎಫ್ ಎಸ್ ವಂಚನೆಗೆ ಯೋಜನೆ ಹಾಕಿಕೊಂಡು ವಂಚಿಸಲಾಗಿದೆ. ಜತೆಗೆ ಭಾರತದ ಬ್ಯಾಂಕ್ ಗಳಿಗೂ ಜೈಮಿನ್ ವ್ಯಾಸ್ ಎಂಬಾತ ವಂಚಿಸಿದ್ದಾನೆ ಎಂದು ಇ.ಡಿ. ಹೇಳಿದೆ.

ಈ ಹಿಂದೆ ಐಎಫ್ ಐಎನ್ ಸಮಿತಿ ನಿರ್ದೇಶಕರ 126 ಕೋಟಿ ರುಪಾಯಿಯ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ವಶಪಡಿಸಿಕೊಂಡೀದೆ. ಐಎಫ್ ಐಎನ್ ಗೆ ಸಾಲ ಬಾಕಿ ಉಳಿಸಿಕೊಂಡ SIVA ಗ್ರೂಪ್ ಮತ್ತು ABG ಗ್ರೂಪ್ ಗೆ ಸೇರಿದ 1400 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು.

ಇ.ಡಿ.ಯಿಂದ ಐಎಫ್ ಐಎನ್ ನಿರ್ದೇಶಕ ಅರುಣ್ ಕುಮಾರ್ ಸಹಾ ಮತ್ತು ಐಟಿಎನ್ ಎಲ್ ಮಾಜಿ ಎಂ.ಡಿ. ಕರುಣಾಕರನ್ ರಾಮ್ ಚಂದ್ ಅವರನ್ನು ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಮುಂಬೈ ಪಿಎಂಎಲ್ ವಿಶೇಷ ಕೋರ್ಟ್ ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಐಎಲ್ ಎಫ್ ಎಸ್ ತಮಿಳುನಾಡು ಪವರ್ ಕಂಪೆನಿ ಲಿಮಿಟೆಡ್ (ಐಟಿಪಿಸಿಎಲ್) ನಲ್ಲಿನ 8.86% ಷೇರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸದ್ಯಕ್ಕೆ ಅದರ ಮೌಲ್ಯ 452 ಕೋಟಿ ರುಪಾಯಿ ಇದೆ ಎನ್ನಲಾಗಿದೆ.

English summary

IL&FS PMLA case: ED attaches Rs 452-cr worth assets of Singapore shell company

IL&FS PMLA case: ED attaches Rs 452 crore worth assets of Singapore shell company.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X