For Quick Alerts
ALLOW NOTIFICATIONS  
For Daily Alerts

ಐಟಿಆರ್‌: ತೆರಿಗೆದಾರರಿಗೆ ರಿಲೀಫ್‌ ನೀಡಿದ ಆದಾಯ ತೆರಿಗೆ ಇಲಾಖೆ

|

ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಕೊನೆಯ ದಿನಾಂಕ ಡಿಸೆಂಬರ್ 31, 2021 ಆಗಿದೆ. ಈ ಹಿನ್ನೆಲೆಯಿಂದಾಗಿ ಪೋರ್ಟಲ್‌ ಸಮಸ್ಯೆಯ ನಡುವೆಯೂ ತೆರಿಗೆದಾರರು ಐಟಿ ರಿಟರ್ನ್ ಸಲ್ಲಿಕೆ ಮಾಡಲು ಪರದಾಡುತ್ತಿದ್ದಾರೆ. ಈ ನಡುವೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

2019-20ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯನ್ನು ಪಾವತಿಯ ಇ ಪರಿಶೀಲನೆ ನಡೆಸದ ತೆರಿಗೆದಾರರು ಪರಿಶೀಲನಾ ಪ್ರಕ್ರಿಯೆಯನ್ನು 2022ರ ಫೆಬ್ರವರಿ 28ರ ವೇಳೆಗೆ ಪೂರ್ಣಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಮೂಲಕ ತೆರಿಗೆದಾರರಿಗೆ ಕೊಂಚ ರಿಲೀಫ್‌ ಅನ್ನು ನೀಡಿದೆ.

ಐಟಿ ರಿಟರ್ನ್ ಫೈಲಿಂಗ್: ಇಲ್ಲಿದೆ ತೆರಿಗೆದಾರರಿಗೆ ITR 1, ITR 2 ವಿವರಐಟಿ ರಿಟರ್ನ್ ಫೈಲಿಂಗ್: ಇಲ್ಲಿದೆ ತೆರಿಗೆದಾರರಿಗೆ ITR 1, ITR 2 ವಿವರ

ಈ ನಿಟ್ಟಿನಲ್ಲಿ ಸಿಬಿಡಿಟಿ ಹೇಳಿಕೆ ಬಿಡುಗಡೆ ಮಾಡಿದೆ. "ಹಲವಾರು ಮಂದಿಯ ಇ ಪರಿಶೀಲನೆ ನಡೆಸಿಲ್ಲ. ಆದ್ದರಿಂದಾಗಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಫೆಬ್ರವರಿವರೆಗೆ ವಿಸ್ತರಣೆ ಮಾಡಲಾಗುತ್ತದೆ," ಎಂದು ಹೇಳಿದೆ.

 ಐಟಿಆರ್‌: ತೆರಿಗೆದಾರರಿಗೆ ರಿಲೀಫ್‌ ನೀಡಿದ ಆದಾಯ ತೆರಿಗೆ ಇಲಾಖೆ

ನಿಯಮದ ಪ್ರಕಾರ ಒಂದು ಆದಾಯ ತೆರಿಗೆ (ಐಟಿಆರ್) ಅನ್ನು ಡಿಜಿಟಲ್‌ ಸಹಿ ಇಲ್ಲದೆ ಐಟಿಆರ್‌ ಸಲ್ಲಿಕೆ ಮಾಡಿದ್ದರೆ ಅಂದರೆ ಆಧಾರ್‌ ಒಟಿಪಿ ಅಥವಾ ನೆಟ್ ಬ್ಯಾಂಕಿಂಗ್ ಇಲ್ಲವೇ ಡಿಮ್ಮಾಟ್ ಖಾತೆ ಮೂಲಕ ಕಳುಹಿಸಿದ ಬ್ಯಾಂಕ್ ಖಾತೆ ಮತ್ತು ಎಟಿಎಂ ಮುಖಾಂತರ ಮಾಡಿದ್ದರೆ ಇದನ್ನು ಪರಿಶೀಲನೆ ಮಾಡುವ ಕೊನೆಯ ದಿನಾಂಕವು ಫೆಬ್ರವರಿ 2022 ಆಗಿದೆ. ಇನ್ನು ಸಲ್ಲಿಕೆ ಮಾಡಿದ 120 ದಿನಗಳ ಒಳಗಾಗಿ ಇ-ವೆರಿಫಿಕೇಶನ್‌ ಮಾಡಿಕೊಳ್ಳಬೇಕು ಎಂದು ಕೂಡಾ ಸೂಚನೆ ನೀಡಲಾಗಿದೆ.

ಶೀಘ್ರ ಪಾವತಿ ಮಾಡಿ

ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಕೊನೆಯ ದಿನಾಂಕ ಡಿಸೆಂಬರ್ 31, 2021 ಆಗಿದೆ. ನೀವು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ, ತೆರಿಗೆದಾರರು ದಾಖಲೆಗಳನ್ನು ಒದಗಿಸುವ ಮೊದಲು ಕೆಲವು ವಿವರಗಳನ್ನು ತಿಳಿದಿರುವುದು ಮುಖ್ಯವಾಗಿದೆ. ಈ ಬಗ್ಗೆ ಆದಾಯ ತೆರಿಗೆ ಇಂಡಿಯಾ ಟ್ವೀಟ್ ಮಾಡಿದೆ. "ಆತ್ಮೀಯ ತೆರಿಗೆದಾರರೇ! ಈ ವಾರಾಂತ್ಯದಲ್ಲಿ ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡುವ ಮೊದಲು ನೀವು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. 2021-22 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಡಿಸೆಂಬರ್ 31, 2021 ಆಗಿದೆ," ಎಂದು ತೆರಿಗೆದಾರರಿಗೆ ಮತ್ತೆ ಎಚ್ಚರಿಕೆ ನೀಡಿದೆ. ತೆರಿಗೆದಾರರು ಆದಾಯ ತೆರಿಗೆ ಸಹಾಯವಾಣಿ 1800 103 0025 ಮತ್ತು 1800 419 0025 ಅನ್ನು ಸಂಪರ್ಕಿಸಬಹುದು. ಇನ್ನು ಈ ವೇಳೆಯೇ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ಶೀಘ್ರವೇ ಐಟಿಆರ್‌ ಸಲ್ಲಿಕೆ ಮಾಡುವಂತೆ ತಿಳಿಸಿದೆ. "ಆತ್ಮೀಯ ತೆರಿಗೆದಾರರೇ, ನಿಮ್ಮ ITR ಅನ್ನು ನೀವು ಎಷ್ಟು ಬೇಗ ಸಲ್ಲಿಸುತ್ತೀರೋ ಅಷ್ಟು ನಿಮಗೆ ವಿರಾಳ. 2021-2022 ಗಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕ ಡಿಸೆಂಬರ್ 31, 2021 ಆಗಿದೆ. ಈಗಲೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್‌ ಮಾಡಿಬಿಡಿ." ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ಗಮನಿಸಿ: ಡಿ. 31 ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿಬಿಡಿಗಮನಿಸಿ: ಡಿ. 31 ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿಬಿಡಿ

ಐಟಿಆರ್‌ ಸಲ್ಲಿಕೆ ಮಾಡದಿದ್ರೆ ಏನಾಗುತ್ತದೆ?

ನೀವು ಡಿ.31ರೊಳಗೆ ನೀವು ಐಟಿಆರ್ ಸಲ್ಲಿಕೆ ಮಾಡದಿದ್ರೆ ಕೆಲವು ಸಮಸ್ಯೆಗಳು ಉಂಟಾಗಲಿದೆ. ನೀವು ಈ ವರ್ಷ ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ನೀವು ಗಳಿಸುವ ಲಾಭಕ್ಕೆ ಸರಿಹೊಂದಿಸುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ನೀವು ಡಿ.31ರೊಳಗೆ ಐಟಿಆರ್ ಫೈಲ್ ಮಾಡದಿದ್ದರೆ ನಿಮಗೆ ತೆರಿಗೆ ಮರುಪಾವತಿ ಆಗುವುದಿಲ್ಲ. ಅಷ್ಟೇ ಅಲ್ಲದೇ ಒಂದು ವೇಳೆ ನೀವು ಕೊನೆಯ ತನಕ ಪಾವತಿ ಮಾಡಿದ ತೆರಿಗೆ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ತೆರಿಗೆಗಿಂತ ಕಡಿಮೆ ಇದ್ದರೆ ಬಾಕಿ ತೆರಿಗೆ ಪಾವತಿ ಮಾಡುವುದರ ಜೊತೆಗೆ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ.

English summary

Income Tax Return: One-Time Relaxation By Income Tax Department

Income Tax Return: Major Relief By Income Tax Department, Provides One-Time Relaxation.
Story first published: Wednesday, December 29, 2021, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X