2021-22ರಲ್ಲಿ ಭಾರತದ ಜಿಡಿಪಿ 7.4% ಹೆಚ್ಚಳದ ಅಂದಾಜು: ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು

ಕೊರೊನಾದಿಂದಾಗಿ ಆಗಿರುವ ಆರ್ಥಿಕ ಹಾನಿಯಿಂದಾಗಿ ವಿಶ್ವವೇ ತತ್ತರಿಸಿದ್ದು, ಭಾರತವೂ ಕೂಡ ಇದರ ಪರಿಣಾಮ ಎದುರಿಸಲಿದೆ. ಆದರೆ ಇದರ ನಡುವೆ ದೇಶವು 1.9 ಪರ್ಸೆಂಟ್ ಸಕಾರಾತ್ಮಕ ಬೆಳವಣಿಗೆ ಕಾಣಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ವಿಶ್ವದ ಆರ್ಥಿಕತೆ ಕೊರೊನಾಯಿಂದ ಜರ್ಜರಿತವಾಗಿದ್ದು ಸುಮಾರು 6 ಟ್ರಿಲಿಯನ್ ಡಾಲರ್‌ನಷ್ಟು ನಷ್ಟಗೊಂಡಿದೆ. ಭಾರತದಲ್ಲೂ ಬೇಡಿಕೆಯು 25 ರಿಂದ 30 ಪರ್ಸೆಂಟ್ ಕುಸಿದಿದ್ದು, ಕಳೆದ ನಾಲ್ಕು ತಿಂಗಳಿನಲ್ಲಿ ಉತ್ಪಾದನಾ ವಲಯ ಇಳಿಕೆಯಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಭಾರತವು ಸೆಟೆದು ನಿಲ್ಲಲಿದೆ ಎಂದು ಆರ್‌ಬಿಐ ಹೇಳಿದೆ.

2021-22ರಲ್ಲಿ ಭಾರತದ ಜಿಡಿಪಿ 7.4% ಹೆಚ್ಚಳದ ಅಂದಾಜು: ಆರ್‌ಬಿಐ

ಭಾರತವು 2020ರಲ್ಲಿ 1.9 ಪರ್ಸೆಂಟ್ ಬೆಳವಣಿಗೆ ಸಾಧಿಸಲಿದ್ದು, ಇದು ಜಿ20 ರಾಷ್ಟ್ರಗಳ ಆರ್ಥಿಕತೆ ಪೈಕಿ ಅತಿ ಹೆಚ್ಚು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಂದಾಜಿಸಿದೆ. 2021-22ರಲ್ಲಿ ದೇಶದ ಆರ್ಥಿಕತೆಯು ಅತಿ ಹೆಚ್ಚು ಬೆಳವಣಿಗೆ ಸಾಧಿಸಲಿದ್ದು, 7.4 ಪರ್ಸೆಂಟ್ ಜಿಡಿಪಿ ದರವನ್ನು ಆರ್‌ಬಿಐ ಅಂದಾಜಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯಲಿದೆ. ಕಚ್ಚಾ ತೈಲ ದರದಲ್ಲಿಯೂ ವ್ಯತ್ಯಾಸವಾಗಲಿದೆ. ಸಕಾರಾತ್ಮಕ ಜಿಡಿಪಿ ಕಂಡು ಬರಲಿರುವ ಜಗತ್ತಿನ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಸಹ ಸೇರಿದೆ. ಬ್ಯಾಂಕಿಂಗ್ ವಲಯದಲ್ಲಿ ಹಣಕಾಸಿನ ಹರಿವು ಹೆಚ್ಚಾಗಿದೆ ಎಂದು ಆರ್‌ಬಿಐ ಸುದ್ದಿಗೋಷ್ಟಿಯಲ್ಲಿ ತಿಳಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+