For Quick Alerts
ALLOW NOTIFICATIONS  
For Daily Alerts

ಮಾರ್ಚ್‌ನಲ್ಲಿ ಭಾರತದ ಚಿನ್ನದ ಆಮದು ಶೇ. 471ರಷ್ಟು ಏರಿಕೆ!

|

ವಿಶ್ವದ ಅತಿದೊಡ್ಡ ಚಿನ್ನ ಆಮದು ರಾಷ್ಟ್ರಗಳಲ್ಲಿ ಒಂದಾದ ಭಾರತವು ಮಾರ್ಚ್‌ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಂಡಿದ್ದು 160 ಟನ್‌ಗಳಿಗೆ ಏರಿಕೆಯಾಗಿದೆ ಎಂದು ಮೂಲವೊಂದು ರಾಯಿಟರ್ಸ್‌ಗೆ ತಿಳಿಸಿದೆ.

ಮಾರ್ಚ್‌ನಲ್ಲಿ ಭಾರತದ ಚಿನ್ನದ ಆಮದು ಪ್ರಮಾಣ ಶೇ. 471ರಷ್ಟು ಏರಿಕೆಯಾಗಿದ್ದು, ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕ ಕಡಿತಗೊಳಿಸಿದ ಬಳಿಕ ಚಿಲ್ಲರೆ ಖರೀದಿದಾರರು ಮತ್ತು ಆಭರಣ ವ್ಯಾಪಾರಿಗಳು ಹೆಚ್ಚಿನ ಮಟ್ಟದಲ್ಲಿ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ.

ಮಾರ್ಚ್‌ನಲ್ಲಿ ಭಾರತದ ಚಿನ್ನದ ಆಮದು ಶೇ. 471ರಷ್ಟು ಏರಿಕೆ!

ಚಿನ್ನದ ಆಮದು ಹೆಚ್ಚಳವು ಭಾರತದ ವ್ಯಾಪಾರ ಕೊರತೆಯನ್ನು ಹೆಚ್ಚಿಸಬಹುದು ಮತ್ತು ರೂಪಾಯಿ ಮೇಲೆ ಒತ್ತಡ ಹೇರಬಹುದು ಎಂದು ಅಂದಾಜಿಸಲಾಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಭಾರತವು ಬರೋಬ್ಬರಿ 321 ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ಒಂದು ವರ್ಷದ ಹಿಂದೆ ಸರಿಯಾಗಿ 124 ಟನ್‌ಗಳಷ್ಟಿತ್ತು ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಚಿನ್ನದ ಆಮದು ಪ್ರಮಾಣವು ಮೌಲ್ಯದ ಪ್ರಕಾರ 8.4 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಈ ಆಮದು ಪ್ರಮಾಣವು ಒಂದು ವರ್ಷದ ಹಿಂದೆ 1.23 ಬಿಲಿಯನ್‌ನಷ್ಟಿತ್ತು.

ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಚಿಲ್ಲರೆ ಬೇಡಿಕೆಯನ್ನು ಹೆಚ್ಚಿಸಲು ಮತ್ತು ದಕ್ಷಿಣ ಏಷ್ಯಾದ ದೇಶಕ್ಕೆ ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಲು ಚಿನ್ನದ ಮೇಲಿನ ಆಮದು ಸುಂಕವನ್ನು 12.5% ರಿಂದ 10.75% ಕ್ಕೆ ಇಳಿಸಿತು.

English summary

India's Gold Imports Up 471% To Record 160 Tonnes

India's gold imports in March surged 471% from a year earlier to a record 160 tonnes, a government source told Reuters
Story first published: Saturday, April 3, 2021, 15:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X