For Quick Alerts
ALLOW NOTIFICATIONS  
For Daily Alerts

Breaking: ಎಚ್‌ಡಿಎಫ್‌ಸಿ ಎಎಂಸಿ ಸಿಇಒ ಪ್ರಶಾಂತ್ ಜೈನ್ ರಾಜೀನಾಮೆ

|

ಭಾರತದ ಅತಿದೊಡ್ಡ ಇಕ್ವಿಟಿ ಫಂಡ್ ಮ್ಯಾನೇಜರ್ ಪ್ರಶಾಂತ್ ಜೈನ್ ಎಚ್‌ಡಿಎಫ್‌ಸಿ ಎಎಂಸಿಯ ಸಿಐಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮ್ಯೂಚುವಲ್ ಫಂಡ್ ಕಂಪನಿ ಶುಕ್ರವಾರ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.

19 ವರ್ಷಗಳ ಕಾಲ ಮ್ಯೂಚುವಲ್ ಫಂಡ್ ಕಂಪನಿಯ ಸಿಇಒ ಆಗಿ ಸೇವೆ ಸಲ್ಲಿಸಿದ ಪ್ರಶಾಂತ್ ಜೈನ್ ಈಗ ರಾಜೀನಾಮೆ ನೀಡಿದ್ದಾರೆ ಎಂದು ಎಚ್‌ಡಿಎಫ್‌ಸಿ ಎಎಂಸಿ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತುತ, ಎಚ್‌ಡಿಎಫ್‌ಸಿ ಎಂಎಫ್‌ನಲ್ಲಿ ಜೈನ್ ಫ್ಲೆಕ್ಸಿ ಕ್ಯಾಪ್ ಮತ್ತು ಟಾಪ್ 100 ಫಂಡ್‌ಅನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ: ಎಷ್ಟು ಗೊತ್ತಾ!ಭಾರತದ ಐಟಿ ಕ್ಷೇತ್ರದಲ್ಲೇ ವಿಪ್ರೊ ಸಿಇಒಗೆ ಅಧಿಕ ಸಂಬಳ: ಎಷ್ಟು ಗೊತ್ತಾ!

ಜೈನ್ ಐಐಟಿ ಕಾನ್ಪುರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಐಐಎಂ ಬೆಂಗಳೂರಿನಲ್ಲಿಇ ಎಂಬಿಎ ಪದವಿ ಪಡೆದಿದ್ದಾರೆ. ಆ ಬಳಿಕ ಎಸ್‌ಬಿಐ ಕ್ಯಾಪ್ಸ್‌ನಲ್ಲಿ ತನ್ನ ವೃತ್ತಿ ಜೀವನ ಆರಂಭ ಮಾಡಿದ್ದಾರೆ. ವ್ಯಾಲ್ಯೂ ರಿಸರ್ಟ್ ಮಾಹಿತಿಯ ಪ್ರಕಾರ, ಮೂರು ಫಂಡ್‌ಗಳ AUM 89,500 ಕೋಟಿ ರೂಪಾಯಿ ಆಗಿದೆ. ಅಡ್ವಂಟೇಜ್ ಫಂಡ್ ಒಂದರ ಮೌಲ್ಯವೇ ರೂಪಾಯಿ 43,000 ಕೋಟಿ ಆಗಿದೆ.

 Breaking: ಎಚ್‌ಡಿಎಫ್‌ಸಿ ಎಎಂಸಿ ಸಿಇಒ ಪ್ರಶಾಂತ್ ಜೈನ್ ರಾಜೀನಾಮೆ

ಇದಲ್ಲದೆ, ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಚಿರಾಗ್ ಸೆಟಲ್ವಾಡ್‌ರನ್ನು ಈಕ್ವಿಟೀಸ್ ಮುಖ್ಯಸ್ಥರನ್ನಾಗಿ ಮತ್ತು ಶೋಭಿತ್ ಮೆಹ್ರೋತ್ರಾ ಅವರನ್ನು ಹೆಡ್-ಫಿಕ್ಸೆಡ್ ಇನ್‌ಕಮ್ ಆಗಿ ನೇಮಕ ಮಾಡಿದ್ದಾರೆ. ಸೆಟಲ್ವಾಡ್ ಮತ್ತು ಮೆಹ್ರೋತ್ರಾ ಇಬ್ಬರೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ನವನೀತ್ ಮುನೋಟ್‌ಗೆ ರಿಪೋರ್ಟ್ ಮಾಡಲಿದ್ದಾರೆ.

ಈಕ್ವಿಟೀಸ್ ಮುಖ್ಯಸ್ಥ ಚಿರಾಗ್ ಸೆಟಲ್ವಾಡ್

ಇನ್ನು ಚಿರಾಗ್ ಸೆಟಲ್ವಾಡ್ ಕಂಪನಿಯ ಪ್ರಾರಂಭದಿಂದಲೂ ಹೂಡಿಕೆ ತಂಡಗಳ ಭಾಗವಾಗಿದ್ದಾರೆ. ಅಕ್ಟೋಬರ್ 2004 ರಿಂದ ಸುಮಾರು 2.5 ವರ್ಷಗಳ ಕಾಲ ಸಂಸ್ಥೆಯಿಂದ ಹೊರಗೆ ಉಳಿದಿದ್ದು ಬಳಿಕ ಮಾರ್ಚ್ 2007 ರಲ್ಲಿ ಮತ್ತೊಮ್ಮೆ ಕಂಪನಿಯನ್ನು ಸೇರ್ಪಡೆಯಾಗಿದ್ದಾರೆ. ದೀರ್ಘಕಾಲದವರೆಗೆ ಕೆಲವು ಇಕ್ವಿಟಿ ಯೋಜನೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಮೆಹ್ರೋತ್ರಾ 18 ವರ್ಷಗಳಿಂದ ಕಂಪನಿಯಲ್ಲಿದ್ದಾರೆ. ಪ್ರಸ್ತುತ ಕೆಲವು ಫಿಕ್ಸಿಡ್ ಇನ್‌ಕಮ್ ಯೋಜನೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. "ಇಬ್ಬರೂ ಉನ್ನತ ಕಾರ್ಯನಿರ್ವಾಹಕರು, ಸಮರ್ಥ ಹೂಡಿಕೆ ವೃತ್ತಿಪರರು, ಇಕ್ವಿಟಿಗಳು ಮತ್ತು ಫಿಕ್ಸಿಡ್ ಇನ್‌ಕಮ್ ಅನ್ನು ನಿರ್ವಹಣೆ ಮಾಡಲು ಸಿದ್ಧರಾಗಿದ್ದಾರೆ. ಹೆಚ್ಚು ಅನುಭವಿ ಮತ್ತು ಬದ್ಧತೆಯ ಹೂಡಿಕೆ ವೃತ್ತಿಪರರ ತಂಡದಿಂದ ಬೆಂಬಲವನ್ನು ಹೊಂದಿದ್ದಾರೆ," ಎಂದು ಕಂಪನಿಯು ಹೇಳಿದೆ. ಇನ್ನು ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಎಚ್‌ಡಿಎಫ್‌ಸಿ ಎಎಂಸಿ ಷೇರುಗಳು 1.30 ಪ್ರತಿಶತದಷ್ಟು ಕುಸಿತವಾಗಿ ರೂಪಾಯಿ 1,900ಕ್ಕೆ ತಲುಪಿದೆ.

English summary

India's Largest Equity Fund Manager, Prashant Jain, Resigns from HDFC AMC

India's largest equity fund manager, Prashant Jain, has resigned from the post of chief investment officer (CIO) of HDFC AMC.
Story first published: Friday, July 22, 2022, 14:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X