For Quick Alerts
ALLOW NOTIFICATIONS  
For Daily Alerts

ಆಕ್ಸಿಸ್ ಬ್ಯಾಂಕ್ Aura ಕ್ರೆಡಿಟ್ ಕಾರ್ಡ್ ಆರಂಭ; ಏನೇನು ಅನುಕೂಲ?

By ಅನಿಲ್ ಆಚಾರ್
|

ದೇಶದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ನಿಂದ Aura ಕ್ರೆಡಿಟ್ ಕಾರ್ಡ್ ಆರಂಭಿಸಲಾಗಿದೆ. ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಅನುಕೂಲಗಳನ್ನು ನೀಡಲಾಗುತ್ತಿದೆ.

"ಗ್ರಾಹಕರು ಆರೋಗ್ಯ ಕಾಳಜಿ ಉತ್ಪನ್ನಗಳಿಗಾಗಿ ಬಹಳ ಖರ್ಚು ಮಾಡುತ್ತಾರೆ ಎಂಬ ಅಂಶವನ್ನು ನಮ್ಮ ವಿಶ್ಲೇಷಕರು ತಿಳಿಸಿದರು. ಆರೋಗ್ಯ ಹಾಗೂ ಸ್ವಾಸ್ಥ್ಯದ ಖರ್ಚಿನಲ್ಲಿ ಮಹತ್ತರವಾದ ಏರಿಕೆ ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ," ಎಂದು ಕಾರ್ಡ್ಸ್ ಮತ್ತು ಪೇಮೆಂಟ್ಸ್ ಇವಿಪಿ ಮತ್ತು ಮುಖ್ಯಸ್ಥ ಸಂಜೀವ್ ಮೊಘೆ ಹೇಳಿದ್ದಾರೆ.

ಡಿಟ್ ಕಾರ್ಡ್ ಯಾವಾಗ ಬಳಸಬೇಕು? ಇಲ್ಲಿವೆ ಟಿಪ್ಸ್ಡಿಟ್ ಕಾರ್ಡ್ ಯಾವಾಗ ಬಳಸಬೇಕು? ಇಲ್ಲಿವೆ ಟಿಪ್ಸ್

ಆಕ್ಸಿಸ್ ಬ್ಯಾಂಕ್ ಈಗ Poshvine ಸಹಯೋಗದೊಂದಿಗೆ ಈ ಅನುಕೂಲ ಒದಗಿಸುತ್ತಿದೆ. ಈ ಕಾರ್ಡ್ ನಿಂದ ಇಂಡಸ್ ಹೆಲ್ತ್ ಪ್ಲಸ್ ಎಂಬ ಅನುಕೂಲ ಕೂಡ ನೀಡಲಾಗುತ್ತಿದೆ. ಇದು ಆರೋಗ್ಯ ಪರೀಕ್ಷಿಸುವ ಕಂಪೆನಿ. ಅದೇ ರೀತಿ ಆನ್ ಲೈನ್ ವೈದ್ಯಕೀಯ ಕನ್ಸಲ್ಟೇಷನ್ ಪ್ಲಾಟ್ ಫಾರ್ಮ್ ಪ್ರಾಕ್ಟೋದ ಅನುಕೂಲ ಕೂಡ ನೀಡಲಾಗುತ್ತದೆ.

ಆಕ್ಸಿಸ್ ಬ್ಯಾಂಕ್ Aura ಕ್ರೆಡಿಟ್ ಕಾರ್ಡ್ ಆರಂಭ; ಏನೇನು ಅನುಕೂಲ?

ಇಂಡಿಯಾ ಹೆಲ್ತ್ ಪ್ಲಸ್ ಮೂಲಕ ವಾರ್ಷಿಕ್ ಆರೋಗ್ಯ ತಪಾಸಣೆಯಲ್ಲಿ ಕಾರ್ಡ್ ದಾರರಿಗೆ 500 ರುಪಾಯಿ ತನಕ ರಿಯಾಯಿತಿ ಸಿಗುತ್ತದೆ. ಇನ್ನು ಪ್ರಾಕ್ಟೋದೊಂದಿಗೆ ಒಂದು ತಿಂಗಳಿಗೆ ನಾಲ್ಕರ ತನಕ ಉಚಿತ ಆನ್ ಲೈನ್ ವಿಡಿಯೋ ಕನ್ಸಲ್ಟೇಷನ್ ದೊರೆಯುತ್ತದೆ. ಈ ಪ್ಲಾಟ್ ಫಾರ್ಮ್ ನಲ್ಲಿ 24X7 ವೈದ್ಯರು ಲಭ್ಯವಿದ್ದು, ಎಲ್ಲ 21 ಸ್ಪೆಷಾಲಿಟಿಯೂ ಸಿಗುತ್ತದೆ.

ಇನ್ನು ಆರೋಗ್ಯ ಹಾಗೂ ಫಿಟ್ ನೆಸ್ ಪ್ಲಾಟ್ ಫಾರ್ಮ್ ಫಿಟರ್ ನೆಟಿಯಿಂದ ತಿಂಗಳಿಗೆ ನಾಲ್ಕರ ತನಕ ಉಚಿತ ಫಿಟ್ ನೆಸ್ ಆನ್ ಲೈನ್ ಇಂಟರ್ ಆಕ್ಟಿವ್ ಸೆಷನ್ ದೊರೆಯುತ್ತದೆ. ಇದರ ಜತೆಗೆ ಕಾರ್ಡ್ ದಾರರಿಗೆ ಒಂದು ತಿಂಗಳಿಗೆ ಹದಿನಾರು ರೆಕಾರ್ಡೆಡ್ ತರಬೇತಿ ಸೆಷನ್ ಸಿಗುತ್ತದೆ. ಯೋಗ ಮತ್ತಿತರ ತರಬೇತಿ ಕಾರ್ಯಕ್ರಮ ಆಯ್ಕೆ ಮಾಡಿಕೊಳ್ಳಬಹುದು.

ಬ್ಯಾಂಕ್ ನಿಂದ ಡೆಕಾಥ್ಲಾನ್ ಜತೆಗೆ ಕೂಡ ಸಹಯೋಗ ಇದ್ದು, ಸ್ವಾಗತದ ಕೊಡುಗೆ ಎಂದು 750 ರುಪಾಯಿ ಮೌಲ್ಯದ ಡೆಕಥ್ಲಾನ್ ವೋಚರ್ ನೀಡಲಾಗುತ್ತಿದೆ. ಬ್ಯಾಂಕ್ ವೆಬ್ ಸೈಟ್ ನಲ್ಲಿನ ಮಾಹಿತಿ ಪ್ರಕಾರ, ಈ ಕಾರ್ಡ್ ಗೆ ವಾರ್ಷಿಕ ಸೇರ್ಪಡೆ ಶುಲ್ಕ ಎಂದು ರು. 749 ಪಾವತಿಸಬೇಕು. ಹಣಕಾಸು ದರ ತಿಂಗಳಿಗೆ 3.4% ಅಥವಾ ವಾರ್ಷಿಕ 49.36% ಇರಲಿದೆ.

English summary

India's Third Largest Private Bank Axis Bank Launches Aura Credit Card With Health Benefits

Axis bank launches Aura credit card with health and wellness benefits. Here is the complete details of credit card benefits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X