For Quick Alerts
ALLOW NOTIFICATIONS  
For Daily Alerts

ಕನವ್, ಅಂಕಿತ್ ಗುಪ್ತಾ; ಫಾರ್ಚೂನ್ಸ್-40 ಪಟ್ಟಿಯಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರು

|

ನವದೆಹಲಿ, ನ. 17: ಭಾರತೀಯ ಸಮುದಾಯದವರ ಯಶೋಗಾಥೆಗಳು ಕಡಿಮೆ ಆಗುತ್ತಿಲ್ಲ. ಜಾಗತಿಕವಾಗಿ ಭಾರತೀಯರು ತಮ್ಮ ತಾಂತ್ರಿಕ ನೈಪುಣ್ಯತೆ ಮತ್ತು ವ್ಯಾವಹಾರಿಕ ಚತುರತೆಯನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇಂದು ವಿಶ್ವದ ಅತ್ಯಂತ ಶ್ರೀಮಂತರ ಟಾಪ್-10 ಪಟ್ಟಿಯಲ್ಲಿ ಇಬ್ಬರನ್ನು ಕಾಣುತ್ತೇವೆ. ಹಾಗೆಯೇ ಉದಯೋನ್ಮುಖ ಉದ್ಯಮಪತಿಗಳಲ್ಲಿ ಹಲವಾರು ಭಾರತೀಯರು ಇದ್ದಾರೆ. ಈಗ ಫಾರ್ಚೂನ್‌ನ ಈ ವರ್ಷದ ಅಂಡರ್-40 ಪಟ್ಟಿಯಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರು ಸೇರಿದ್ದಾರೆ. ಕನವ್ ಕಾರ್ಯ ಮತ್ತು ಅಂಕಿತ್ ಗುಪ್ತಾ ಫಾರ್ಚೂನ್‌ನ ಲಿಸ್ಟ್‌ನಲ್ಲಿದ್ದಾರೆ.

ಫೋರ್ಬ್ಸ್‌ನಂತೆ ಫಾರ್ಚೂನ್ ಎಂಬುದು ಅಮೆರಿಕದ ಒಂದು ನಿಯತಕಾಲಿಕೆ. ಅದರಲ್ಲಿ ಪ್ರತೀ ವರ್ಷವೂ ವಿವಿಧ ಸ್ತರದಲ್ಲಿ ಯಶಸ್ವಿ ಉದ್ಯಮಿಗಳನ್ನು ವರ್ಗೀಕರಿಸಿ ವಿವಿಧ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಒಂದು ವರ್ಷದಲ್ಲಿ ಉದ್ಯಮ ಲೋಕದಲ್ಲಿ ಅತಿ ಹೆಚ್ಚು ಪ್ರಭಾವ ಬೀರಿದ 40 ವರ್ಷದೊಳಗಿನ ಉದ್ಯಮಿಗಳು, ಹೂಡಿಕೆದಾರರು ಮತ್ತು ಆ್ಯಕ್ಟಿವಿಸ್ಟ್‌ಗಳ ಟಾಪ್-40 ಪಟ್ಟಿಯನ್ನು ಪ್ರತೀ ವರ್ಷವೂ ಪ್ರಕಟಿಸುತ್ತಿದೆ. ಅಂತೆಯೇ ಈ ವರ್ಷದ ಪಟ್ಟಿಯಲ್ಲಿ ಇಬ್ಬರು ಭಾರತೀಯ ಅಮೆರಿಕನ್ನರು ಇದ್ದಾರೆ.

ಅಧಿಕ ಅವಧಿ ಕೆಲಸ ಮಾಡಿ ಅಥವಾ ರಾಜೀನಾಮೆ ನೀಡಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ವಾರ್ನಿಂಗ್ಅಧಿಕ ಅವಧಿ ಕೆಲಸ ಮಾಡಿ ಅಥವಾ ರಾಜೀನಾಮೆ ನೀಡಿ: ಟ್ವಿಟ್ಟರ್ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ವಾರ್ನಿಂಗ್

ಕವನ್ ಕಾರಿಯಾ ಅವರು ಜಂಪ್ ಕ್ರಿಪ್ಟೋ ಎಂಬ ಕಂಪನಿಯ ಅಧ್ಯಕ್ಷರಾದರೆ, ಅಂಕಿತ್ ಗುಪ್ತಾ ಬೈಸೈಕಲ್ ಹೆಲ್ತ್ ಎಂಬ ಕಂಪನಿಯ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ.

ಅಂಕಿತ್ ಗುಪ್ತಾ ಯಾರು?

ಅಂಕಿತ್ ಗುಪ್ತಾ ಯಾರು?

"ಫಾರ್ಚೂನ್‌ನ ಈ ವರ್ಷದ ಅಂಡರ್-40 ಪಟ್ಟಿಯಲ್ಲಿ ಒಳಗೊಂಡಿರುವುದು ನನಗೆ ಸಿಕ್ಕಿರುವ ಗೌರವ. ಅದರಲ್ಲೂ ಆರೋಗ್ಯ ಉದ್ಯಮವನ್ನು ರೂಪಿಸುತ್ತಿರುವ ಉದಯೋನ್ಮುಖರ ಬಳಗದಲ್ಲಿ ನನ್ನನ್ನೂ ಸೇರಿಸಿದ್ದಾರೆ. ಬೈಸೈಕಲ್ ಹೆಲ್ತ್‌ನಲ್ಲಿರುವ ನಮ್ಮ ಅದ್ಭುತ ತಂಡಕ್ಕೆ ಮತ್ತು ಒಯುಡಿ ರೋಗಿಗಳ ಆರೋಗ್ಯ ಪಾಲನೆಗೆ ನಮಗಿರುವ ಬದ್ಧತೆಗೆ ಸಿಕ್ಕ ಮನ್ನಣೆ ಇದು ಎಂದು ಭಾವಿಸುತ್ತೇನೆ" ಎಂದು ಅಂಕಿತ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಅಂಕಿತ್ ಗುಪ್ತಾ ಅಮೆರಿಕದ ನಿವಾಸಿಯಾದರೂ ಭಾರತ ಮೂಲದವರು. ಮುಂಬೈನ ಐಐಟಿಯಲ್ಲಿ ಪದವಿ ಪಡೆದ ಅವರು ಅಮೆರಿಕದ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯಲ್ಲಿ ಎಂಎಸ್ ಮಾಡಿದ್ದಾರೆ. ನಂತರ ಪಲ್ಸ್ ನ್ಯೂಸ್ ಸಂಸ್ಥೆಯ ಸಿಟಿಒ ಆಗಿದ್ದ ಅವರು ಬಳಿಕ ಬೈಸಿಕಲ್ ಹೆಲ್ತ್ ಕಂಪನಿ ಸ್ಥಾಪಿಸಿದರು.

ಬೈಸೈಕಲ್ ಹೆಲ್ತ್

ಬೈಸೈಕಲ್ ಹೆಲ್ತ್

ಬೈಸೈಕಲ್ ಹೆಲ್ತ್‌ನಲ್ಲಿ ಒಯುಡಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಒಯುಡಿ ಎಂದರೆ ಓಪಿಯಾಯ್ಡ್ ಯೂಸ್ ಡಿಸಾರ್ಡರ್. ಓಪಿಯಂ ಮಾದಕ ವಸ್ತು ವ್ಯಸನ ಮತ್ತು ಓಪಿಯಾಯ್ಡ್ ಔಷಧಗಳ ದುರ್ಬಳಕೆಯಿಂದ ಆಗುವ ತೊಂದರೆಗೆ ಓಪಿಯಾಯ್ಡ್ ಯೂಸ್ ಡಿಸಾರ್ಡರ್ ಎನ್ನುತ್ತಾರೆ. 25 ವರ್ಷದ ಅಂಕಿತ್ ಗುಪ್ತಾ 2017ರಲ್ಲಿ ಅಮೆರಿಕದ ಕ್ಯಾಲಿಫರ್ನಿಯಾದಲ್ಲಿ ಇಂಥ ರೋಗಿಗಳ ಚಿಕಿತ್ಸೆಗೆ ಒಂದು ಕ್ಲಿನಿಕ್ ತೆರೆದಿದ್ದರು. 2020ರಲ್ಲಿ ಆನ್‌ಲೈನ್‌ನಲ್ಲಿ ಇದರ ಸೇವೆ ವಿಸ್ತರಿಸಿದರು. ಓಪಿಯಾಯ್ಡ್ ಯೂಸ್ ಡಿಸಾರ್ಡರ್ ಇರುವ ರೋಗಿಗಳಿಗೆ ಸೂಕ್ತ ವೈದ್ಯಕೀಯ ಶುಶ್ರೂಷೆ ಮತ್ತು ಮಾನಸಿಕ ಚಿಕಿತ್ಸೆಯ ವ್ಯವಸ್ಥೆ ರೂಪಿಸಿದ್ದರು.

ಆನ್‌ಲೈನ್ ವೇದಿಕೆಗೆ ತೆರೆದುಕೊಂಡ ಬಳಿಕ ಬೈಸಿಕಲ್ ಹೆಲ್ತ್ ಸಂಸ್ಥೆ ಅಮೆರಿಕದ 29 ರಾಜ್ಯಗಳಿಗೆ ವಿಸ್ತರಣೆ ಆಯಿತು. ನಾಲ್ಕೈದು ವರ್ಷದಲ್ಲಿ 20 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ. 83 ಮಿಲಿಯನ್ ಡಾಲರ್ (677 ಕೋಟಿ ರೂ) ವೆಂಚರ್ ಫಂಡಿಂಗ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ.

26 ವರ್ಷದ ಕನವ್

26 ವರ್ಷದ ಕನವ್

ಇನ್ನು, ಬೂಮ್‌ನಲ್ಲಿದ್ದ ಕ್ರಿಪ್ಟೋ ಕ್ಷೇತ್ರದಲ್ಲಿ ಬಹಳಷ್ಟು ಎಳೆಯ ಪ್ರತಿಭೆಗಳು ಮಿಂಚಿಬಿಟ್ಟಿದ್ದಾರೆ. ಅಂಥವರಲ್ಲಿ 26 ವರ್ಷದ ಕನವ್ ಕಾರಿಯಾ ಪ್ರಮುಖರು. ಕ್ರಿಪ್ಟೋ ಕಂಪನಿಗಳ ಇನ್‌ಕುಬೇಟರ್ (ಸಪೋರ್ಟಿಂಗ್ ಸಿಸ್ಟಂ) ಸ್ಟಾರ್ಟಪ್ ಅದ ಜಂಪ್ ಟ್ರೇಡಿಂಗ್ ಗ್ರೂಪ್‌ನಲ್ಲಿ ಇಂಟರ್ನ್ ಆಗಿ ಕೆಲಸ ಆರಂಭಿಸಿದ ಅವರು 2021ರಲ್ಲಿ ಕಂಪನಿಯ ಡಿಜಿಟಲ್ ಅಸೆಟ್ಸ್ ವಿಭಾಗವಾದ ಜಂಪ್ ಕ್ರಿಪ್ಟೋದ ಮುಖ್ಯಸ್ಥನಾಗುವ ಹಂತಕ್ಕೆ ಬೆಳೆದರು.

ವೆಬ್3 ಜಾಲದಲ್ಲಿ ಜಂಪ್ ಕ್ರಿಪ್ಟೋ ತನ್ನದೇ ಛಾಪು ಮೂಡಿಸುವ ಮಟ್ಟಕ್ಕೆ ಬೆಳೆಸಿದ್ದಾರೆ. ಕ್ರಿಪ್ಟೋ ಕ್ಷೇತ್ರದಲ್ಲಿ ಜಂಪ್ ಕ್ರಿಪ್ಟೋ ಕೋಟ್ಯಂತರ ಹಣದ ಹೂಡಿಕೆಗಳನ್ನು ಮಾಡಿದೆ. ಈ ಮೂಲಕ ಕ್ರಿಪ್ಟೋ ಕ್ಷೇತ್ರಕ್ಕೆ ಅಗತ್ಯವಾದ ಸೌಕರ್ಯ ನಿರ್ಮಾಣವಾಗಲು ಜಂಪ್ ಕ್ರಿಪ್ಟೋ ಸಹಕಾರಿಯಾಗಿದೆ.

English summary

Indian Americans Kanav Karia and Ankit Gupta Among Top 40 Fortune's Under 40 List

Fortune has released its annual 40 Under-40 list for 2022. This is the list of influencers in the business this year. 2 Indian Americans Kanav Karia and Ankit Gupta are given place in the list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X