ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲಿದೆ. ಮುಂದಿನ ಬಾರಿ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ-ಟೀ ಅಥವಾ ಊಟಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ಪ್ರವಾಸೋದ್ಯಮ ನಿರ್ದೇಶಕರು ಮತ್ತು ರೈಲ್ವೆ ಮಂಡಳಿಯ ಅಡುಗೆ ವಿಭಾಗ ಗುರುವಾರ ಹೊರಡಿಸಿರುವ ಸುತ್ತೋಲೆಯ ಪ್ರಕಾರ ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಹಣ ಪಡೆದು ಪಾವತಿಸಲಾಗುವ ಆಹಾರದ ಬೆಲೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದೆ.
ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ದರ ಪರಿಷ್ಕರಣೆಯ ಬಳಿಕ ಒಂದು ಕಪ್ ಟೀ ಬೆಲೆ 10 ರುಪಾಯಿಯಿಂದ 20ಕ್ಕೆ ಏರಿಕೆಯಾಗಲಿದೆ. ಡೊರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟ 80 ರುಪಾಯಿಯಿಂದ 120 ರುಪಾಯಿಗೆ ಏರಿಕೆಯಾಗಲಿದೆ. ಸಂಜೆ ನೀಡಲಾಗುವ ಟೀ ಬೆಲೆಯು ಮತ್ತಷ್ಟು ದುಬಾರಿಯಾಗಲಿದ್ದು, 20 ರಿಂದ 50 ರುಪಾಯಿಗೆ ಪರಿಷ್ಕರಣೆಯಾಗಲಿದೆ.
14 ವರ್ಷಗಳ ಬಳಿಕ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಆಹಾರದ ದರ ಹೆಚ್ಚಿನ ಮಟ್ಟದಲ್ಲಿ ಪರಿಷ್ಕೃತವಾಗುತ್ತಿದೆ. ಈ ಪರಿಷ್ಕೃತ ದರಗಳನ್ನು ಟಿಕೆಟಿಂಗ್ ವ್ಯವಸ್ಥೆಯಲ್ಲಿ 15 ದಿನಗಳಲ್ಲಿ ನವೀಕರಿಸಲಾಗುವುದು ಮತ್ತು 120 ದಿನಗಳ ನಂತರ ಅನ್ವಯವಾಗಲಿದೆ.
ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ತಿಂಡಿ-ಊಟ ಪರಿಷ್ಕೃತ ದರ ಹೇಗಿದೆ ಎಂಬುದರ ವಿವರಣೆ ಈ ಕೆಳಗಿದೆ.
ರಾಜಧಾನಿ, ಶತಾಬ್ದಿ, ಡುರೊಂಟೊ ಎಕ್ಸ್‌ಪ್ರೆಸ್
| ಫಸ್ಟ್ ಕ್ಲಾಸ್ ಎಸಿ (First class AC/EC) | ||
| ಸದ್ಯದ ದರ | ಬದಲಾವಣೆ ದರ | |
| ಬೆಳಗ್ಗಿನ ಟೀ | 15 | 35 |
| ತಿಂಡಿ | 90 | 140 |
| ಊಟ | 145 | 245 |
| ಸಂಜೆ ಟೀ | 75 | 140 |
90 ರುಪಾಯಿ ಆಗಲಿದೆ ಸಂಜೆ ಟೀ
| ಸೆಕೆಂಡ್ ಎಸಿ (2AC/3AC/CC) | ||
| ಸದ್ಯದ ದರ | ಬದಲಾವಣೆ ದರ | |
| ಬೆಳಗ್ಗಿನ ಟೀ | 10 | 25 |
| ತಿಂಡಿ | 75 | 105 |
| ಊಟ | 125 | 185 |
| ಸಂಜೆ ಟೀ | 45 | 90 |
ಸ್ಪೀಪರ್ ಕ್ಲಾಸ್‌ನಲ್ಲಿ ಸ್ವಲ್ಪ ನೆಮ್ಮದಿ ದರ
| ಸ್ಪೀಪರ್ ಕ್ಲಾಸ್ ಡುರೊಂಟೊ ಎಕ್ಸ್‌ಪ್ರೆಸ್ | ||
| ಸದ್ಯದ ದರ | ಬದಲಾವಣೆ ದರ | |
| ಬೆಳಗ್ಗಿನ ಟೀ | 10 | 15 |
| ತಿಂಡಿ | 40 | 65 |
| ಊಟ | 80 | 120 |
| ಸಂಜೆ ಟೀ | 20 | 50 |
ಸ್ವಲ್ಪ ಮಟ್ಟಿನ ಏರಿಕೆ ಕಾಣಲಿರುವ ಎಕ್ಸ್‌ಪ್ರೆಸ್
| ಇತರೆ ಎಕ್ಸ್‌ಪ್ರೆಸ್ ರೈಲುಗಳಲ್ಲಿ | ||
| ಸದ್ಯದ ದರ | ಬದಲಾವಣೆ ದರ | |
| ಬೆಳಗ್ಗಿನ ಟೀ | 30 | 40 |
| ತಿಂಡಿ | 35 | 50 |
| ಊಟ | 50 | 80 |
| ಸಂಜೆ ಟೀ | 55 | 90 |
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications