ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ ನೀವು ರೈಲಿನಲ್ಲಿ ಪ್ರಯಾಣ ಮಾಡಲು ಬಯಸಿದರೆ, ನೀವು ಮೊದಲು ಈ ಸುದ್ದಿಯನ್ನು ಓದುವುದು ಮುಖ್ಯವಾಗಿದೆ. ದಕ್ಷಿಣ ಮಧ್ಯ ರೈಲ್ವೆಯ ವಿಜಯವಾಡ ವಿಭಾಗದ ಬಾಪಟ್ಲಾ ನಿಲ್ದಾಣದಲ್ಲಿ ಮುಂದಿನ ತಿಂಗಳಿನಲ್ಲಿ ಭಾರತೀಯ ರೈಲ್ವೆ ಕನಿಷ್ಠ 12 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ. ಇಂಟರ್‌ಲಾಕ್ ಕಾರಣದಿಂದಾಗಿ ಈ ರೈಲುಗಳನ್ನು ರದ್ದು ಮಾಡಿದೆ.
ವಿಶಾಖಪಟ್ಟಣಂ- ತಿರುಪತಿ ಡಬಲ್ ಡೆಕ್ಕರ್, ಭುವನೇಶ್ವರ್- ತಿರುಪತಿ ಸ್ಪೆಷಲ್, ವಿಶಾಖಪಟ್ಟಣಂ- ಚೆನ್ನೈ ಸೂಪರ್- ಫಾಸ್ಟ್, ಸಂಬಲ್ಪುರ- ಈರೋಡ್ ಸ್ಪೆಷಲ್ ಮತ್ತು ವಿಶಾಖಪಟ್ಟಣಂ- ಬೆಂಗಳೂರು ಕಂಟೋನ್‌ಮೆಂಟ್ ಸ್ಪೆಷಲ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಇದಲ್ಲದೆ, ಅಕ್ಟೋಬರ್ 2 ಮತ್ತು ಅಕ್ಟೋಬರ್ 10 ರಿಂದ ಧನ್ಬಾದ್‌ನಿಂದ ಹೊರಡುವ ಧನ್ಬಾದ್-ಅಲೆಪ್ಪಿ ಬೊಕಾರೊ ಎಕ್ಸ್‌ಪ್ರೆಸ್ ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ಮೂಲಕ ಡೈವರ್ಟ್ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ತಾಡೆಪಲ್ಲಿಗುಡೆಂ ಮತ್ತು ಏಲೂರುಗಳಲ್ಲಿ ನಿಲ್ದಾಣಗಳನ್ನು ರದ್ದುಗೊಳಿಸಲಾಗಿದೆ.
ಅಕ್ಟೋಬರ್ 1 ರವರೆಗೆ ರದ್ದುಗೊಂಡ ರೈಲುಗಳ ಪಟ್ಟಿ
ದಕ್ಷಿಣ ಮಧ್ಯ ರೈಲ್ವೆಯ ಬಾಪಟ್ಲಾ ನಿಲ್ದಾಣದಲ್ಲಿ 3 ನೇ ಮಾರ್ಗದ ಕಾರ್ಯಾರಂಭದ ಕಾರಣ ಅಕ್ಟೋಬರ್ 1 ರವರೆಗೆ ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
* ತಿರುಪತಿ- ವಿಶಾಖಪಟ್ಟಣಂ ಡಬಲ್ ಡೆಕ್ಕರ್
* ಭುವನೇಶ್ವರ- ತಿರುಪತಿ ಎಸಿ ಸೂಪರ್- ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್
* ವಿಶಾಖಪಟ್ಟಣಂ- ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್- ಫಾಸ್ಟ್ ಎಕ್ಸ್‌ಪ್ರೆಸ್
ಇದಲ್ಲದೆ, ಸಂಬಲ್‌ಪುರ- ಈರೋಡ್ ಸ್ಪೆಷಲ್ ಎಕ್ಸ್‌ಪ್ರೆಸ್ ಮತ್ತು ವಿಶಾಖಪಟ್ಟಣಂ ಬೆಂಗಳೂರು ಕ್ಯಾಂಟ್ ಎಕ್ಸ್‌ಪ್ರೆಸ್ ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ಇದಲ್ಲದೆ, ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಹ ಭಾರತೀಯ ರೈಲ್ವೆ ರದ್ದುಗೊಳಿಸಿದೆ. ಧನ್ಬಾದ್- ಅಲೆಪ್ಪಿ ಬೊಕಾರೊ ಎಕ್ಸ್‌ಪ್ರೆಸ್ ಅನ್ನು ಬೇರೆ ಬೇರೆ ನಿಲ್ದಾಣಗಳ ಮೂಲಕ ಡೈವರ್ಟ್ ಮಾಡಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.
ಕಾರ್ಯಾಚರಣೆಯ ಕಾರಣಕ್ಕೆ ರೈಲುಗಳು ಡೈವರ್ಟ್
ವಿವಿಧ ರೈಲ್ವೇ ವಿಭಾಗಗಳಲ್ಲಿ ಕಾರ್ಯಾಚರಣೆಯ ಕಾರಣಗಳು ಮತ್ತು ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ದಕ್ಷಿಣ ಮಧ್ಯ ರೈಲ್ವೆಯು ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಿದೆ ಎಂದು ಹೇಳಿದೆ:
* ತಿರುಪತಿ- ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್
* ಎಸ್‌ಎಸ್‌ಎಸ್ ಹುಬ್ಬಳ್ಳಿ -ತಿರುಪತಿ ಡೈಲಿ ಪ್ಯಾಸೆಂಜರ್ ಸ್ಪೆಷಲ್
ದಕ್ಷಿಣ ರೈಲ್ವೆಯು ಚೆನ್ನೈ ಬೀಚ್ ಮತ್ತು ತಾಂಬರಂ ನಡುವಿನ ರೈಲುಗಳನ್ನು ರದ್ದುಗೊಳಿಸಿದೆ. ಇದರಿಂದಾಗಿ ಜನದಟ್ಟಣೆ ಮತ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಇದಲ್ಲದೆ, ಜೈಪುರದಲ್ಲಿ ಭಾರೀ ಮಳೆಯಿಂದಾಗಿ ವಾಯುವ್ಯ ರೈಲ್ವೆ ನಾಲ್ಕು ರೈಲು ಸೇವೆಗಳನ್ನು ರದ್ದುಗೊಳಿಸಿದೆ, ರೈಲು ಸಂಚಾರವನ್ನು ಬದಲಿಸಿದೆ. ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ.
ಈ ಮಧ್ಯೆ, ಸಂಬಲ್‌ಪುರ -ವಾರಣಾಸಿ ಎಕ್ಸ್‌ಪ್ರೆಸ್ ಅನ್ನು ಒಡಿಶಾದ ಹಲವು ಜಿಲ್ಲೆಗಳ ಮೂಲಕ ವಿಶಾಖಪಟ್ಟಣಂವರೆಗೆ ವಿಸ್ತರಿಸಲು ರೈಲ್ವೆ ಅನುಮೋದನೆ ನೀಡಿದೆ. ರಾಜ್ಯದ ಪಶ್ಚಿಮ ಮತ್ತು ದಕ್ಷಿಣ ಪ್ರದೇಶಗಳಲ್ಲಿ ರೈಲು ಸೇವೆಗಳನ್ನು ಹೆಚ್ಚಿಸಲು ಈ ನಿರ್ಧಾರವನ್ನು ಮಾಡಲಾಗಿದೆ. ಬಲಂಗಿರ್, ಬರ್ಗಢ್, ಕಲಹಂಡಿ ಮತ್ತು ರಾಯಗಡದ ಪ್ರಯಾಣಿಕರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ.


Click it and Unblock the Notifications