ಈ ತಿಂಗಳಲ್ಲಿ ರೈಲು ಪ್ರಯಾಣ ಮಾಡಲು ನೀವು ಯೋಚನೆ ಮಾಡಿದ್ದರೆ, ಪ್ರಯಾಣಿಕರು ಮೊದಲು ಈ ಸುದ್ದಿಯನ್ನು ಓದಲೇಬೇಕು. ಪಂಜಾಬ್‌ನ ಬರ್ನಾಲಾ ಮತ್ತು ಹಾದಿಯಾ ರೈಲು ನಿಲ್ದಾಣಗಳಲ್ಲಿ ಕಾರ್ಯಾಚರಣೆಯ ಕಾರಣದಿಂದಾಗಿ ಉತ್ತರ ರೈಲ್ವೆಯು ಹಲವಾರು ರೈಲುಗಳನ್ನು ರದ್ದುಗೊಳಿಸಿದೆ, ಬೇರೆಡೆಗೆ ತಿರುಗಿಸಿದೆ ಮತ್ತು ಅಲ್ಪಾವಧಿಗೆ ಸ್ಥಗಿತಗೊಳಿಸಿದೆ.
ರೈಲ್ವೆಯ ಇತ್ತೀಚಿನ ಅಪ್‌ಡೇಟ್ ಪ್ರಕಾರ, ಪ್ಟೆಂಬರ್ 18 ರಿಂದ 28 ರವರೆಗೆ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ 19 ರಿಂದ 29 ರವರೆಗೆ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಲವು ರೈಲುಗಳು ಬರ್ನಾಲಾದಲ್ಲಿ ನಿಲ್ಲವುದಿಲ್ಲ. ಬದಲಾಗಿ ಸೆಖಾ ಮತ್ತು ತಾಪಾ ರೈಲು ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ಉತ್ತರ ರೈಲ್ವೆ ತಿಳಿಸಿದೆ.

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ
* 14525/26 ಅಂಬಾಲಾ ಕ್ಯಾಂಟ್ - ಶ್ರೀ ಗಂಗಾನಗರ - ಅಂಬಾಲಾ ಕ್ಯಾಂಟ್ ಎಕ್ಸ್‌ಪ್ರೆಸ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
* 01626 ಬಟಿಂಡಾ ಜಕ್ಷನ್ - ಧುರಿ ಜಂಕ್ಷನ್ ಸ್ಪೆಷಲ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
* 01625 ಧುರಿ ಜಂಕ್ಷನ್ - ಬಟಿಂಡಾ ಜಕ್ಷನ್ ಸ್ಪೆಷಲ್: ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 29 ರವರೆಗೆ
* 04548 ಬಟಿಂಡಾ ಜಂಕ್ಷನ್ - ಅಂಬಾಲಾ ಕ್ಯಾಂಟ್ ಸ್ಪೆಷಲ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
* 04531 ಅಂಬಾಲಾ ಕ್ಯಾಂಟ್ - ಧುರಿ ಸ್ಪೆಷಲ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
* 14509 ಧುರಿ ಜಂಕ್ಷನ್ - ಬಟಿಂಡಾ ಜಂಕ್ಷನ್ ಎಕ್ಸ್‌ಪ್ರೆಸ್ ಸ್ಪೆಷಲ್: ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 29 ರವರೆಗೆ
* 04547 ಅಂಬಾಲಾ ಕ್ಯಾಂಡ್ - ಬಟಿಂಡಾ ಸ್ಪೆಷಲ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
* 14510 ಬಟಿಂಡಾ - ಅಂಬಾಲಾ ಕ್ಯಾಂಟ್ ಎಕ್ಸ್‌ಪ್ರೆಸ್ ಸ್ಪೆಷಲ್: ಸೆಪ್ಟೆಂಬರ್ 18ರಿಂದ ಸೆಪ್ಟೆಂಬರ್ 28 ರವರೆಗೆ
ಭಾಗಶಃ ರದ್ದಾದ ರೈಲುಗಳು
* 14735 ಶ್ರೀ ಗಂಗಾನಗರ - ಅಂಬಾಲಾ ಕ್ಯಾಂಡ್ ಎಕ್ಸ್‌ಪ್ರೆಸ್: ಬಟಿಂಡಾ ಅಂಬಾಲಾ ಕ್ಯಾಂಟ್ ನಡುವೆ ಭಾಗಶಃ ರದ್ದು, ಸೆಪ್ಟೆಂಬರ್ 28
* 14736 ಅಂಬಾಲಾ ಕ್ಯಾಂಟ್- ಶ್ರೀ ಗಂಗಾನಗರ ಎಕ್ಸ್‌ಪ್ರೆಸ್: ಅಂಬಾಲಾ ಕ್ಯಾಂಟ್ ಬಟಿಂಡಾದ ನಡುವೆ ಭಾಗಶಃ ರದ್ದು, ಸೆಪ್ಟೆಂಬರ್ 29
"ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಅಪ್‌ಡೇಟ್ ಮಾಡಲು ಮತ್ತು ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಲು, ಉತ್ತರ ರೈಲ್ವೆಯು ರಾಜ್ಪುರ-ಭಟಿಂಡಾ ವಿಭಾಗದಲ್ಲಿ ಬರ್ನಾಲಾ ಮತ್ತು ಹದಿಯಾಯಾ ನಿಲ್ದಾಣಗಳಲ್ಲಿ ಪೂರ್ವ-ಇಂಟರ್ಲಾಕಿಂಗ್ ಮತ್ತು ನಾನ್-ಇಂಟರ್ಲಾಕಿಂಗ್ ಕೆಲಸವನ್ನು ಕೈಗೊಳ್ಳುತ್ತದೆ. ಈ ಕೆಲಸವನ್ನು ಕಾರ್ಯಗತಗೊಳಿಸಲು, ರೈಲ್ವೇಯು 28.09.23 ರವರೆಗೆ ಸೂಕ್ತ ಟ್ರಾಫಿಕ್ ಬ್ಲಾಕ್ ಮಾಡುತ್ತದೆ," ಎಂದು ಉತ್ತರ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ಕೇವಲ ಎರಡು ರೈಲುಗಳನ್ನು ಮಾತ್ರ ಅಲ್ಪಾವಧಿಗೆ ನಿಲ್ಲಿಸಲಾಗುವುದು ಮತ್ತು ಐದು ರೈಲುಗಳು ತಮ್ಮ ಮೂಲ ಮಾರ್ಗಗಳಿಂದ ತಿರುವುಗಳನ್ನು ತೆಗೆದುಕೊಳ್ಳುತ್ತವೆ ಮತ್ತು ರೋಹ್ಟಕ್-ಜಿಂದ್-ನರ್ವಾನಾ-ಜಖಲ್ ಮಾರ್ಗವಾಗಿ ಚಲಿಸುತ್ತವೆ ಎಂದು ರೈಲ್ವೆ ಹೇಳಿದೆ. ಸುಮಾರು ಎಂಟು ರೈಲುಗಳು ಬರ್ನಾಲಾ ನಿಲ್ದಾಣದಲ್ಲಿ ತಮ್ಮ ನಿಲುಗಡೆಗಳನ್ನು ಬಿಟ್ಟು ಸೆಖಾದಲ್ಲಿ ನಿಲ್ಲುತ್ತವೆ ಎಂದು ರೈಲ್ವೆ ಹೇಳಿದೆ.


Click it and Unblock the Notifications