ಡಾ. ಭೀಮಾ ರಾವ್ ಅಂಬೇಡ್ಕರ್ ಹಲವಾರು ಮಂದಿಗೆ ಸ್ಪೂರ್ತಿಯಾಗಿದ್ದಾರೆ. ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನವನ್ನು ರಚನೆಯಲ್ಲಿ ಡಾ. ಭೀಮಾ ರಾವ್ ಅಂಬೇಡ್ಕರ್ ಅತೀ ಪ್ರಮುಖ ವ್ಯಕ್ತಿಯಾಗಿದ್ದಾರೆ. ಅಂಬೇಡ್ಕರ್ ಎಂದಿಗೂ ದಲಿತದ ಬಲವಾಗಿದ್ದರು. ದೇಶದಲ್ಲಿ ಅಸೃಶ್ಯತೆಯನ್ನು ತೊಳಗಿಸಲು ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಈಗ ಭಾರತೀಯ ರೈಲ್ವೆಯು ಅಂಬೇಡ್ಕರ್ ಹೆಸರಿನಲ್ಲಿ ಒಂದು ಯಾತ್ರೆಯನ್ನು ಆರಂಭಿಸಿದೆ. ಅದು ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರೆಯಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರೆಯು ಏಪ್ರಿಲ್ 2023ರಂದು ನವದೆಹಲಿಯಲ್ಲಿ ಆರಂಭವಾಗಲಿದೆ. "ದೇಕೋ ಅಪ್ನಾ ದೇಶ್" ಎಂಬ ಯೋಜನೆ ಅಡಿಯಲ್ಲಿ ಕೇಂದ್ರ ರೈಲ್ವೆ ಇಲಾಖೆಯು, ಭಾರತೀಯ ರೈಲ್ವೆ ಕ್ಯಾಟೆರಿಂಗ್ ಮತ್ತು ಟೂರಿಸಂ ಕಾಪೋರೇಷನ್ (ಐಆರ್‌ಸಿಟಿಸಿ) ಸಂಯೋಗದಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಭಾರತ್ ಗೌರವ್ ಟೂರಿಸ್ ರೈಲಿನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರೆ
7 ರಾತ್ರಿಗಳ ಮತ್ತು 8 ದಿನಗಳ ಭಾರತ್ ಗೌರವ್ ಟೂರಿಸಂ ರೈಲು ಪ್ರವಾಸ ದೆಹಲಿಯಿಂದ ಆರಂಭವಾಗಲಿದೆ. ಮೊದಲು ಬಾಬಾ ಸಾಹೇಬ್‌ರ ಜನನ ಪ್ರದೇಶ ಮಧ್ಯಪ್ರದೇಶದ ಡಾ. ಅಂಬೇಡ್ಕರ್ ನಗರದಲ್ಲಿ (ಮೌ) ಒಂದು ರೈಲನ್ನು ನಿಲ್ಲಿಸಲಾಗುತ್ತದೆ. ಅದಾದ ಬಳಿಕ ರೈಲು ನಾಗ್ಪುರ ರೈಲ್ವೆ ನಿಲ್ಧಾಣಕ್ಕೆ ತಲುಪಲಿದೆ, ಅಲ್ಲಿ ಪ್ರವಾಸಿಗರು ದೀಕ್ಷಾಭೂಮಿಗೆ ಭೇಟಿ ನೀಡಬಹುದಾಗಿದೆ. ನಾಗ್ಪುರದಿಂದ ಹೊರಟ ರೈಲು ಸಾಂಚಿಗೆ ತಲುಪಲಿದೆ. ಸಾಂಚಿಯಲ್ಲಿ ಬುದ್ಧ ಮಂದಿರಗಳಿಗೆ ಭೇಟಿ ನೀಡಬಹುದು.
ಸಾಂಚಿಯಿಂದ ವಾರಾಣಾಸಿಗೆ ನಂತರ ತಲುಪಲಿದೆ. ಇಲ್ಲಿ ಸಾರ್‌ನಾಥ್ & ಕಾಶಿ ವಿಶ್ವನಾಥ್ ದೇವಾಲಯಕ್ಕೆ ಭೇಟಿ ನೀಡಬಹುದು. ಗಯಾ ಕೊನೆಯ ನಿಲ್ಧಾಣವಾಗಿದೆ. ಇಲ್ಲಿ ಬುಧಗಯಾ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಬಹುದು. ದಾರಿ ಮಧ್ಯದಲ್ಲಿ ರಾಜ್‌ಗಿರಿ ಮತ್ತು ನಳಂದ ಸೇರಿದಂತೆ ಹಲವಾರು ಬೌಧ ಮಂದಿರಗಳಿಗೆ ಭೇಟಿ ನೀಡಬಹುದಾಗಿದೆ. ಕೊನೆಯದಾಗಿ ನವೆದೆಹಲಿಗೆ ಬಂದು ರೈಲು ತಲುಪಲಿದೆ. ದೆಹಲಿ, ಮಥುರಾ ಮತ್ತು ಆಗ್ರಾಕ್ಕೆ ಭೇಟಿ ನೀಡಬಹುದಾಗಿದೆ.
ರಜೆಯ ಸೀಸನ್‌ನಲ್ಲಿ ಹಲವು ರಾಜ್ಯಗಳಿಗೆ ವಿಶೇಷ ರೈಲು
ಹೋಲಿ ಸೀಸನ್‌ನಲ್ಲಿ ಪ್ರಯಾಣಿಕರ ನಿಯಂತ್ರಣ ಮಾಡಲು ಹಲವಾರು ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಆರಂಭಿಸಲಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಮಾರ್ಚ್ 8ರಂದು ಹೋಲಿ ಹಬ್ಬದ ಆಚರಣೆಯನ್ನು ಮಾಡಲಾಗುತ್ತದೆ. ಈ ದಿನದಂದು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುವ ನಿರೀಕ್ಷೆಯನ್ನು ಭಾರತೀಯ ರೈಲ್ವೆ ಹೊಂದಿದೆ. ಈ ಹೋಲಿ ಸಂದರ್ಭದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಮಧ್ಯಪ್ರದೇಶ, ಕೇರಳದಲ್ಲಿ ಅಧಿಕವಾಗಿ ವಿಶೇಷ ರೈಲುಗಳಿರಲಿದೆ.


Click it and Unblock the Notifications