For Quick Alerts
ALLOW NOTIFICATIONS  
For Daily Alerts

21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ನವೆಂಬರ್ ಹಣದುಬ್ಬರ, ವಿತ್ತ ಸಚಿವೆ ಹೇಳುವುದೇನು?

|

ಭಾರತದ ರೂಪಾಯಿಯು ಯುಎಸ್ ಡಾಲರ್ ಹಾಗೂ ಬೇರೆ ಕರೆನ್ಸಿಗಳ ಎದುರು ಬಲಗೊಳ್ಳುತ್ತಿದೆ. ಕೇಂದ್ರ ಸರ್ಕಾರವು ಹಣದುಬ್ಬರವನ್ನು ಹತೋಟಿಗೆ ತರುತ್ತಿದೆ. ಇನ್ನೂ ಕೂಡಾ ಹಣದುಬ್ಬರವನ್ನು ಕಡಿಮೆ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಮಾಡುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

ನವೆಂಬರ್‌ ತಿಂಗಳಲ್ಲಿ ಭಾರತದ ಸಗಟು ಹಣದುಬ್ಬರವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಸಗಟು ಹಣದುಬ್ಬರವು ಶೇಕಡ 5.82ಕ್ಕೆ ಕುಸಿದಿದೆ. ಈ ಮೂಲಕ ಸತತ ಎರಡನೇ ತಿಂಗಳು ಹಣದುಬ್ಬರವು ಎರಡಂಕಿಗಿಂತ ಕೆಳಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರವು ಶೇಕಡ 8.39ರಷ್ಟಿತ್ತು.

ಈ ಬೆನ್ನಲ್ಲೇ ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಣದುಬ್ಬರವನ್ನು ಕೇಂದ್ರ ಸರ್ಕಾರವು ಇನ್ನಷ್ಟು ತಗ್ಗಿಸಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

 21 ತಿಂಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ ಇಳಿಕೆ, ಸಚಿವೆ ಹೇಳುವುದೇನು?

ನಿರ್ಮಲಾ ಸೀತಾರಾಮನ್ ಬೇರೇನು ಹೇಳಿದ್ದಾರೆ?

"ಹಣದುಬ್ಬರ ನಿರ್ವಹಣೆ ಹಾಗೂ ನಿಯಂತ್ರಣ... ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸಚಿವರುಗಳ ತಂಡ ಹಾಗೂ ಅಧಿಕಾರಿಗಳು ಹಣದುಬ್ಬರವನ್ನು ಹತೋಟಿಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅದರ ಫಲವು ನಮಗೆ ಲಭಿಸುತ್ತಿದೆ," ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

"ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ಸರ್ಕಾರವು ನಿರಂತರವಾಗಿ ಗಮನಿಸುತ್ತಿದೆ," ಎಂದು ಕೂಡಾ ಸೀತಾರಾಮನ್ ತಿಳಿಸಿದ್ದಾರೆ. ನವೆಂಬರ್ ಹಣದುಬ್ಬರ 11 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುವ ಬೆನ್ನಲ್ಲೇ ಸೀತಾರಾಮನ್‌ರ ಈ ಹೇಳಿಕೆ ಬಂದಿದೆ. "ನಾವು ಶೇಕಡ 6.4ರಷ್ಟು ಜಿಡಿಪಿಯನ್ನು ತಲುಪಬಹುದ ಎಂದು ಕೂಡಾ ನಿರ್ಮಲಾ ಸೀತಾರಾಮನ್ ಅಭಿಪ್ರಾಯಿಸಿದ್ದಾರೆ.

ನವೆಂಬರ್‌ ಸಗಟು ಹಣದುಬ್ಬರ

ನವೆಂಬರ್ ಸಗಟು ಹಣದುಬ್ಬರವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಅಂದರೆ 2021ರಲ್ಲಿ ಸಗಟು ಹಣದುಬ್ಬರವು ಶೇಕಡ 14.87ರಷ್ಟಿತ್ತು. ಆದರೆ ಈ ವರ್ಷ ನವೆಂಬರ್‌ನಲ್ಲಿ ಶೇಕಡ 5.85ಕ್ಕೆ ತಲುಪಿದೆ. ಇನ್ನು ಅಕ್ಟೋಬರ್‌ನಲ್ಲಿ ಕೂಡಾ ಸಗಟು ಹಣದುಬ್ಬರ ಇಳಿದಿದೆ, ಸುಮಾರು 19 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2021ರ ಮಾರ್ಚ್ ತಿಂಗಳ ಬಳಿಕ ಸಗಟು ಹಣದುಬ್ಬರವು ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ 1 ಅಂಕೆಗೆ ಇಳಿದಿತ್ತು. ಅದಕ್ಕೂ ಮೊದಲು ಶೇಕಡ 10ಕ್ಕಿಂತ ಅಧಿಕವಾಗಿತ್ತು. ಸೆಪ್ಟೆಂಬರ್‌ನಲ್ಲಿ ಶೇಕಡ 10.7, ಆಗಸ್ಟ್‌ನಲ್ಲಿ ಶೇಕಡ 12.41ರಷ್ಟು ಸಗಟು ಹಣದುಬ್ಬರವಿತ್ತು. ಆದರೆ ಈಗ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುತ್ತಿದ್ದಂತೆ ಹಣದುಬ್ಬರವು ಕೂಡಾ ಹತೋಟಿಗೆ ಬರುತ್ತಿದೆ.

English summary

Inflation hits 21-month low in November: Centre to further bring down inflation says FM Sitharaman

Centre to further bring down inflation says FM Sitharaman to Lok Sabha, Inflation hits 21-month low in November. details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X