For Quick Alerts
ALLOW NOTIFICATIONS  
For Daily Alerts

ಕೊರೊನಾ ಹಾಗೂ ಎಚ್‌1 ಬಿ ವೀಸಾ ಬಗ್ಗೆ ನಂದನ್ ನಿಲೇಕಣಿ ಮಾತುಗಳು

|

ಈ ವರ್ಷದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿದ ನಂತರ ಎಚ್ 1 ಬಿ ವೀಸಾಗಳನ್ನು ಅಮಾನತುಗೊಳಿಸುವ ಆದೇಶವನ್ನು ಅಮೆರಿಕ ಸರ್ಕಾರ ಹಿಂತೆಗೆದುಕೊಳ್ಳುತ್ತದೆ ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದ್ದಾರೆ.

 

ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ನಂದನ್ ನಿಲೇಕಣಿ, ಪ್ರತಿಭೆಯ ಮುಕ್ತ ಹರಿವು ಇರಬೇಕೆಂಬುದು ನನ್ನ ಅಭಿಪ್ರಾಯ. ಯುಎಸ್‌ನಲ್ಲಿ ಎಚ್ 1 ಬಿ ವೀಸಾಗಳ ಅಮಾನತು ರದ್ದುಪಡಿಸಲಾಗುವುದು ಎಂದು ನಾನು ಖಚಿತವಾಗಿ ಭಾವಿಸುತ್ತೇನೆ ಎಂದಿದ್ದಾರೆ

ಪ್ರಸ್ತುತ, ಇನ್ಫೋಸಿಸ್‌ನಂತಹ ಭಾರತೀಯ ಸಂಸ್ಥೆಗಳು ಟ್ರಂಪ್ ಆಡಳಿತವು ಇತ್ತೀಚೆಗೆ ಎಚ್ 1 ಬಿ ವೀಸಾಗಳನ್ನು ಅಮಾನತುಗೊಳಿಸುವ ನಿರ್ಧಾರದಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಿದೆ ಮತ್ತು ಅಪಾಯಕಾರಿ ಆಗಬಹುದಾದ ಸಂಗತಿಯನ್ನು ತಗ್ಗಿಸಿದೆ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.

ಆತಂಕಗೊಳ್ಳುವ ಸಂಗತಿ ಇಲ್ಲ

ಆತಂಕಗೊಳ್ಳುವ ಸಂಗತಿ ಇಲ್ಲ

ಟ್ರಂಪ್ ಆಡಳಿತದ ವೀಸಾ ರದ್ದಾದ ಕ್ರಮದ ಬಗ್ಗೆ ಭಾರತೀಯ ಐಟಿ ಕಂಪನಿಗಳ ಮೇಲೆ ಬೀರಿದ ಪರಿಣಾಮದ ಬಗ್ಗೆ ಮಾತನಾಡಿದ ನಂದನ್ ನಿಲೇಕಣಿ ಅಮೆರಿಕದಲ್ಲಿ, ಸುಮಾರು 10,000 ಇನ್ಫೋಸಿಸ್ ಉದ್ಯೋಗಿಗಳು ಅಲ್ಲಿನ ಸ್ಥಳೀಯರು. ಇದು ಯುಎಸ್ನಲ್ಲಿನ ನಮ್ಮ ಉದ್ಯೋಗಿಗಳ ಮಹತ್ವದ ಭಾಗವಾಗಿದೆ, ಆದ್ದರಿಂದ ಇತ್ತೀಚಿನ ನಿರ್ಧಾರದಿಂದ ನಮಗೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಇನ್ಫೋಸಿಸ್ ನಂತಹ ಭಾರತೀಯ ಸಂಸ್ಥೆಗಳು ಅಪಾಯವನ್ನು ಕಡಿಮೆ ಮಾಡಿಕೊಂಡಿವೆ. ಆತಂಕಗೊಳ್ಳುವ ಸಂಗತಿ ಇಲ್ಲ ಎಂದಿದ್ದಾರೆ.

ಹಣ್ಣುಗಾಯಿ ನೀರುಗಾಯಿ ಮಾಡಿದೆ

ಹಣ್ಣುಗಾಯಿ ನೀರುಗಾಯಿ ಮಾಡಿದೆ

ಕಳೆದ ಮೂರು ತಿಂಗಳಲ್ಲಿ ಕೊರೊನಾವೈರಸ್ ಪ್ರಭಾವ ರೆಸ್ಟೋರೆಂಟ್, ಬಾರ್, ಸಲೂನ್, ಏರ್ಲೈನ್ಸ್, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಆದರೆ, ಮತ್ತೊಂದೆಡೆ, ತಂತ್ರಜ್ಞಾನ-ಅವಲಂಬಿತ ಮತ್ತು ಮನೆಯಿಂದ ಕೆಲಸ ಮಾಡುವಂತಹ ವ್ಯವಹಾರಗಳು ಉತ್ತಮವಾಗಿವೆ. ಏಕೆಂದರೆ ಅವುಗಳು ಒಂದೇ ರೀತಿಯ ಅಡೆತಡೆಯನ್ನು ಎದುರಿಸಲಿಲ್ಲ. ಇನ್ಫೋಸಿಸ್ನಲ್ಲಿ, 46 ದೇಶಗಳಲ್ಲಿ 2,40,000 ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

ಪುನರ್ ವಿಮರ್ಶೆ ನಡೆಯಬೇಕಿದೆ
 

ಪುನರ್ ವಿಮರ್ಶೆ ನಡೆಯಬೇಕಿದೆ

ಕೊರೊನಾವೈರಸ್ ಇಡೀ ಜಗತ್ತನ್ನು ಕೆಲಸ ಮಾಡುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ ಎಂದು ನಂದನ್ ನೆಲಕಣಿ ಹೇಳಿದರು. ಸುಪ್ರೀಂ ಕೋರ್ಟ್ ಸಹ ಈಗ ಆನ್‌ಲೈನ್‌ನಲ್ಲಿ ಪ್ರಕರಣಗಳನ್ನು ಆಲಿಸುತ್ತಿದೆ. ಎಲ್ಲಾ ವ್ಯವಹಾರಗಳು ಹೆಚ್ಚು ಡಿಜಿಟಲ್ ಆಗಲು ಮತ್ತು ಉತ್ಪನ್ನ ಮತ್ತು ಸೇವೆಗಳನ್ನು ಸುರಕ್ಷಿತ ರೀತಿಯಲ್ಲಿ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿವೆ ಎಂದರು ಸಾಂಕ್ರಾಮಿಕವು ದುರಂತವಾಗಿ ಬಂದಿದ್ದರೂ, ಸಂಸ್ಥೆಗಳಿಗೆ ತಮ್ಮನ್ನು ತಾವು ಪರಿವರ್ತಿಸಿಕೊಳ್ಳುವ ಅವಕಾಶವೂ ಇದಾಗಿದೆ ಎಂದು ನಿಲೇಕಣಿ ಅವರು ಹೇಳಿದರು.

ಜನ ಇನ್ಮುಂದೆ ಡಿಜಿಟಲ್ ಮತ್ತು ಹೆಚ್ಚು ಹೈಬ್ರಿಡ್ ಆಗುವ ಸಾಧ್ಯತೆಯಿದೆ

ಜನ ಇನ್ಮುಂದೆ ಡಿಜಿಟಲ್ ಮತ್ತು ಹೆಚ್ಚು ಹೈಬ್ರಿಡ್ ಆಗುವ ಸಾಧ್ಯತೆಯಿದೆ

ಜನ ಇನ್ಮುಂದೆ ಡಿಜಿಟಲ್ ಮತ್ತು ಹೆಚ್ಚು ಹೈಬ್ರಿಡ್ ಆಗುವ ಸಾಧ್ಯತೆಯಿದೆ. ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಲ್ಲ. ನಾವು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಮುಂದಿನ ಕಾಲವು ಹೈಬ್ರಿಡ್ ಆಗಿರುತ್ತದೆ. ಇದು ನಾವು ಎದುರಿಸುತ್ತಿರುವ ಭೀಕರ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಿವಾರ್ಯವಾದದ್ದು ಎಂದು ಎಂದು ನಿಲೇಕಣಿ ಹೇಳಿದರು.

Read more about: h1 b visa visa infosys ವೀಸಾ
English summary

Infosys Co Founder Nandan Nilekani Talks About Coronavirus And H1 B Visa

Infosys Co Founder Nandan Nilekani Talks About Coronavirus And H1 B Visa
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X