ಭಾರತೀಯ ರೈಲ್ವೆಯು ಪ್ರತಿ ವರ್ಷವೂ ರಜೆಯ ಸೀಸನ್ ಮತ್ತು ಹಬ್ಬದ ಸಂದರ್ಭದಲ್ಲಿ ರೈಲಿನಲ್ಲಿ ಉಂಟಾಗುವ ಜನಜಂಗುಳಿಯನ್ನು ಕಡಿಮೆ ಮಾಡಲು ತಯಾರಿಯನ್ನು ನಡೆಸುತ್ತದೆ. ಈ ವರ್ಷವೂ ಹೋಲಿ ಹಾಗೂ ರಜೆಯ ಸೀಸನ್ ಅನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಭಾರತೀಯ ರೈಲ್ವೆಯು ಈಗಲೇ ಸಿದ್ಧತೆ ಮಾಡುತ್ತಿದೆ.
ಪ್ರಮುಖವಾಗಿ ಹಬ್ಬ ಹಾಗೂ ರಜೆಯ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಳವಾಗಿ ರೈಲಿನಲ್ಲಿ ಜನಜಂಗುಳಿ ಅಧಿಕವಾಗುತ್ತದೆ. ಇದನ್ನು ಈ ವರ್ಷ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ವಿಶೇಷ ರೈಲನ್ನು ಆರಂಭ ಮಾಡಿದೆ. ಹೋಲಿ ಸೀಸನ್‌ನಲ್ಲಿ ಪ್ರಯಾಣಿಕರ ನಿಯಂತ್ರಣ ಮಾಡಲು ಹಲವಾರು ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಆರಂಭಿಸಲಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

ಮಾರ್ಚ್ 8ರಂದು ಹೋಲಿ ಹಬ್ಬದ ಆಚರಣೆಯನ್ನು ಮಾಡಲಾಗುತ್ತದೆ. ಈ ದಿನದಂದು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುವ ನಿರೀಕ್ಷೆಯನ್ನು ಭಾರತೀಯ ರೈಲ್ವೆ ಹೊಂದಿದೆ. ಈ ಹೋಲಿ ಸಂದರ್ಭದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಮಧ್ಯಪ್ರದೇಶ, ಕೇರಳದಲ್ಲಿ ಅಧಿಕವಾಗಿ ವಿಶೇಷ ರೈಲುಗಳಿರಲಿದೆ. ಹಾಗೆಯೇ ಯಶವಂತಪುರದಿಂದ ಮತ್ತು ಯಶವಂತಪುರಕ್ಕೆ ವಿಶೇಷ ರೈಲುಗಳು ಇರಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಐಆರ್‌ಸಿಟಿಸಿಯಿಂದ ಹೋಲಿ ವಿಶೇಷ ರೈಲುಗಳು
1. ಪಾಟ್ನಾ-ಆನಂದ್ ವಿವಾರ ಸೂಪರ್‌ಫಾಸ್ಟ್ ಹೋಲಿ ಸ್ಪೆಷಲ್: ರೈಲು ಸಂಖ್ಯೆ 03255 ಪಾಟ್ನಾ-ಆನಂದ್ ವಿವಾರ ಸೂಪರ್‌ಫಾಸ್ಟ್ ಹೋಲಿ ವಿಶೇಷ ರೈಲು ಪ್ರತಿ ಗುರುವಾರ ಹಾಗೂ ಭಾನುವಾರ ಪಾಟ್ನಾದಿಂದ ರಾತ್ರಿ 10:00 ಗಂಟೆಗೆ ಹೊರಟು ಮುಂಜಾನೆ 3:00 ಗಂಟೆಗೆ ಆನಂದ್ ವಿವಾರಕ್ಕೆ ತಲುಪಲಿದೆ. ಮಾರ್ಚ್ 9ರಿಂದ ಮಾರ್ಚ್ 23ರವರೆಗೆ ಈ ರೈಲು ಇರಲಿದೆ.
ರೈಲು ಸಂಖ್ಯೆ 03256 ಆನಂದ ವಿವಾಹರದಿಂದ ಪಾಟ್ನಾಕ್ಕೆ ಪ್ರಯಾಣಿಸುವ ರೈಲಾಗಿದ್ದು ಇದು ಸಂಜೆ 5:20ಗೆ ತಲುಪಲಿದೆ. ಈ ರೈಲು ಮಾರ್ಚ್ 10ರಿಂದ ಮಾರ್ಚ್ 24ರವರೆಗೆ ಇರಲಿದೆ. ಪ್ರತಿ ಶುಕ್ರವಾರ ಮತ್ತು ಸೋಮವಾರ ಇರಲಿದೆ.
2. ಮುಜಾಫರ್‌ಪುರ-ಯಶವಂತಪುರ ಹೋಲಿ ವಿಶೇಷ ರೈಲು: ರೈಲು ಸಂಖ್ಯೆ 05271 ಮುಜಾಫರ್‌ಪುರ-ಯಶವಂತಪುರ ಹೋಲಿ ವಿಶೇಷ ರೈಲು ಮುಜಾಫರ್‌ಪುರದಿಂದ ಪ್ರಯಾಣ ಆರಂಭ ಮಾಡಲಿದೆ. ಯಶವಂತಪುರಕ್ಕೆ ಭಾನುವಾರ ತಲುಪುವ ಮುನ್ನ ಹಲವಾರು ರೈಲ್ವೆ ಸ್ಟೇಷನ್‌ಗಳನ್ನು ಹಾದು ಬರಲಿದೆ. ಪ್ರತಿ ಭಾನುವಾರ ಸಂಜೆ 4:30ಗೆ ಈ ರೈಲು ಯಶವಂತಪುರಕ್ಕೆ ತಲುಪಲಿದೆ. ಈ ರೈಲು ಮಾರ್ಚ್ 10ರಿಂದ ಮಾರ್ಚ್ 24ರವರೆಗೆ ಇರಲಿದೆ.
3. ಬರೌನಿ-ಪುನೆ ವಾರದ ಹೋಲಿ ವಿಶೇಷ ರೈಲು: ಈ ರೈಲು ಮಾರ್ಚ್ 9ರಿಂದ ಮಾರ್ಚ್ 16ರವರೆಗೆ ಇರಲಿದೆ. ಬರೌನಿಯಿಂದ ಮಧ್ಯಾಹ್ನ 12.10ಕ್ಕೆ ಹೊರಡಲಿದ್ದು, ಒಂದು ದಿನದ ಬಳಿಕ ರಾತ್ರಿ 10.30 ಗಂಟೆಗೆ ಪುಣೆಗೆ ತಲುಪಲಿದೆ. ಈ ರೈಲು ಕೂಡಾ ಪುಣೆ ತಲುಪುವ ಮುನ್ನ ಹಲವಾರು ರೈಲ್ವೆ ಸ್ಟೇಷನ್‌ಗಳನ್ನು ಹಾದು ಬರಲಿದೆ.
ರೈಲು ಸಂಖ್ಯೆ 05280 ಪುಣೆಯಿಂದ ಬರೌನಿಗೆ ಬರುವ ರೈಲಾಗಿದೆ. ಮುಂಜಾನೆ 5:00 ಗಂಟೆಗೆ ಪುಣೆಯಿಂದ ಈ ರೈಲು ಹೊರಟರೆ ಬರೌನಿಗೆ 1:00 ಗಂಟೆಗೆ ಬಂದು ತಲುಪಲಿದೆ. ಈ ರೈಲು ಮಾರ್ಚ್ 11ರಿಂದ ಮಾರ್ಚ್ 18ರವರೆಗೆ ಇರಲಿದೆ.
4. ಯಶವಂತಪುರ-ಮುಜಾಫರ್‌ಪುರ ವಾರದ ಹೋಲಿ ವಿಶೇಷ ರೈಲು: ಈ ರೈಲು ಪ್ರತಿ ಸೋಮವಾರ ಸಂಚಾರ ಮಾಡಲಿದೆ. ಮಾರ್ಚ್ 13ರಿಂದ ಮಾರ್ಚ್ 27ರವರೆಗೆ ಈ ರೈಲು ಇರಲಿದೆ. ಸೋಮವಾರ ಮುಂಜಾನೆ 7:30ಗೆ ಈ ರೈಲು ಸಂಚಾರ ಆರಂಭಿಸಿದರೆ, ಬೇರೆ ಬೇರೆ ಸ್ಟಾಪ್‌ಗಳಲ್ಲಿ ನಿಂತು ಬುಧವಾರ ಮಧ್ಯಾಹ್ನದ ವೇಳೆಗೆ ಮುಜಾಫರ್‌ಪುರಕ್ಕೆ ತಲುಪಲಿದೆ.


Click it and Unblock the Notifications