ಈ ಬೇಸಿಗೆ ಕಾಲದಲ್ಲಿ ತಂಪಾದ ವಾತಾವರಣವನ್ನು ಹೊಂದಿರುವ ಪ್ರದೇಶಕ್ಕೆ ಜನರು ಟ್ರಿಪ್ ಹೋಗುವುದು ಸಾಮಾನ್ಯವಾಗಿದೆ. ಹಾಗೆಯೇ ಎಲ್ಲರೂ ಒಂದಾಗಿ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಲಾಗುತ್ತದೆ. ಪ್ರಯಾಣವನ್ನು ಅನುಕೂಲಕರ ಮತ್ತು ಆರಾಮದಾಯಕವಾಗಿಸುವ ಪ್ರಯತ್ನವನ್ನು ಭಾರತೀಯ ರೈಲ್ವೆ ಮಾಡಿದೆ.
ಭಾರತೀಯ ರೈಲ್ವೆ ಹಲವಾರು ಜೋಡಿ ಬೇಸಿಗೆ ವಿಶೇಷ ರೈಲುಗಳನ್ನು ಪ್ರಾರಂಭ ಮಾಡುವ ನಿರ್ಧಾರ ಮಾಡಿದೆ. ಉತ್ತರ ರೈಲ್ವೇ ಹೆಚ್ಚಿನ ಮಾಹಿತಿಯನ್ನು ನೀಡಿದೆ. ನವದೆಹಲಿಯಿಂದ ವಾರಣಾಸಿ, ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ಉಧಮ್‌ಪುರ ನಡುವೆ ಕಾರ್ಯನಿರ್ವಹಣೆ ಆರಂಭ ಮಾಡಲಿದೆ ಎಂದು ಹೇಳಿದೆ.

ಈ ನಿಟ್ಟಿನಲ್ಲಿ, ರೈಲ್ವೇ ಐದು ಹೆಚ್ಚುವರಿ ಬೇಸಿಗೆ ವಿಶೇಷ ರೈಲುಗಳನ್ನು ಪರಿಚಯಿಸಿದೆ. ದೆಹಲಿಯಿಂದ ಪ್ರಯಾಣ ಆರಂಭಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ಇರಲಿದೆ ಎಂದು ಉತ್ತರ ರೈಲ್ವೆ ಬಹಿರಂಗಪಡಿಸಿದೆ.
ನವದೆಹಲಿ- ವಾರಾಣಾಸಿ ವಿಶೇಷ ರೈಲು
ರೈಲು ನಂಬರ್: 04052/04051
ದಿನಾಂಕ: ಜೂನ್ 4ರಿಂದ ಜೂನ್ 25ರವರೆಗೆ ಪ್ರತಿ ಭಾನುವಾರ
ಸಮಯ: ನವದೆಹಲಿಯಲ್ಲಿ 7:20ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 5ರಿಂದ ಜೂನ್ 25ರವರೆಗೆ ಪ್ರತಿ ಸೋಮವಾರ
ರಿಟರ್ನ್ ಸಮಯ: 6:35ಕ್ಕೆ ವಾರಾಣಾಸಿಯಿಂದ ರೈಲು ವಾಪಾಸ್ ಹೊರಡಲಿದೆ.
ನವದೆಹಲಿಯಿಂದ ಶ್ರೀ ಮಾತ ವೈಷ್ಣೋ
ರೈಲು ನಂಬರ್: 04071/04072
ದಿನಾಂಕ: ಜೂನ್ 2ರಿಂದ ಜೂನ್ 30ರವರೆಗೆ ಪ್ರತಿ ಶುಕ್ರವಾರ
ಸಮಯ: ನವದೆಹಲಿಯಲ್ಲಿ 11.15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 3ರಿಂದ ಜುಲೈ 01ರವರೆಗೆ ಪ್ರತಿ ಶನಿವಾರ
ರಿಟರ್ನ್ ಸಮಯ: 6:30ಕ್ಕೆ ಶ್ರೀ ಮಾತ ವೈಷ್ಣೋ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ - ಉಧಮ್‌ಪುರ
ರೈಲು ನಂಬರ್: 04075/04076
ದಿನಾಂಕ: ಜೂನ್ 1ರಿಂದ ಜೂನ್ 29ರವರೆಗೆ ಪ್ರತಿ ಗುರುವಾರ
ಸಮಯ: ನವದೆಹಲಿಯಿಂದ 11.15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 2ರಿಂದ ಜೂನ್ 30ರವರೆಗೆ ಪ್ರತಿ ಶುಕ್ರವಾರ
ರಿಟರ್ನ್ ಸಮಯ: 7:00ಕ್ಕೆ ಉಧಮ್‌ಪುರಕ್ಕೆ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ- ವಾರಾಣಾಸಿ
ರೈಲು ನಂಬರ್: 04080/04079
ದಿನಾಂಕ: ಜೂನ್ 3ರಿಂದ ಜೂನ್ 30ರವರೆಗೆ ಪ್ರತಿ ಸೋಮವಾರ, ಶುಕ್ರವಾರ, ಶನಿವಾರ
ಸಮಯ: ನವದೆಹಲಿಯಿಂದ 07.20ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 4ರಿಂದ ಜುಲೈ 1ರವರೆಗೆ ಪ್ರತಿ ಮಂಗಳವಾರ, ಶನಿವಾರ ಮತ್ತು ಭಾನುವಾರ
ರಿಟರ್ನ್ ಸಮಯ: 6.35ಕ್ಕೆ ವಾರಾಣಾಸಿಯಿಂದ ರೈಲು ವಾಪಾಸ್ ಹೊರಡಲಿದೆ.
ನವದೆಹಲಿ - ಶ್ರೀ ಮಾತ ವೈಷ್ಣೋ ದೇವಿ ಕತ್ರಾ
ರೈಲು ನಂಬರ್: 04081/04082
ದಿನಾಂಕ: ಜೂನ್ 3ರಿಂದ ಜೂನ್ 24ರವರೆಗೆ ಪ್ರತಿ ಶನಿವಾರ
ಸಮಯ: ನವದೆಹಲಿಯಿಂದ 11:15ಕ್ಕೆ ರೈಲು ಆರಂಭವಾಗಲಿದೆ.
ರಿಟರ್ನ್ ಸಮಯ: ಜೂನ್ 4ರಿಂದ ಜೂನ್ 25ರವರೆಗೆ ಪ್ರತಿ ಭಾನುವಾರ
ರಿಟರ್ನ್ ಸಮಯ: 6:30ಕ್ಕೆ ಶ್ರೀ ಮಾತ ವೈಷ್ಣೋ ದೇವಿ ಕತ್ರಾದಿಂದ ರೈಲು ವಾಪಾಸ್ ಹೊರಡಲಿದೆ.
ಸಂಪೂರ್ಣ ರೈಲು, ಕೋಚ್ ಬುಕ್ ಮಾಡುವುದು ಹೇಗೆ?
ಹಂತ 1: ಐಆರ್‌ಸಿಟಿಸಿ ಅಧಿಕೃತ ಎಫ್‌ಟಿಆರ್ ವೆಬ್‌ಸೈಟ್ www.ftr.irctc.co.in ಗೆ ಭೇಟಿ ನೀಡಿ
ಹಂತ 2: ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ. ಈ ಕ್ರೆಡೆನ್ಶಿಯಲ್ ಇಲ್ಲವಾದರೆ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 3: ಸಂಪೂರ್ಣ ಕೋಚ್ ಬುಕ್ ಮಾಡಬೇಕಾದರೆ ಎಫ್‌ಟಿಆರ್ ಸೇವಾ ಆಯ್ಕೆಯನ್ನು ಮಾಡಿಕೊಳ್ಳಿ,
ಹಂತ 4: ಪಾವತಿ ಮಾಡಬೇಕಾದರೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ.
ಹಂತ 5: ಅದಾದ ಬಳಿಕ ಪಾವತಿ ಆಯ್ಕೆ ಮಾಡಿ


Click it and Unblock the Notifications