ಭಾರತೀಯ ರೈಲ್ವೆಯು ಬುಧವಾರ ಹಲವಾರು ರೈಲುಗಳನ್ನು ರದ್ದು ಮಾಡಿದೆ. ಕೆಲವು ರೈಲುಗಳನ್ನು ಭಾಗಶಃವಾಗಿ ರದ್ದು ಮಾಡಿದರೆ, ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಹಳಿ ಬದಲಾರದೆ ಇನ್ನು ಕೆಲವು ರೈಲುಗಳು ಕೆಲವು ನಿಲ್ದಾಣಗಳಿಗೆ ಬರುವುದೇ ಇಲ್ಲ. ಇನ್ನು ಕೆಲವು ರೈಲುಗಳು ಹಲವಾರು ದಿನಗಳ ಕಾಲ ಇರುವುದಿಲ್ಲ. ಪ್ರಮುಖವಾಗಿ ಭಾರತೀಯ ರೈಲ್ವೆಯು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ.
ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಇಂದು ಕೂಡಾ ಈ ಕಾರಣದಿಂದಾಗಿ ಹಲವಾರು ರೈಲುಗಳನ್ನು ರದ್ದು ಅಥವಾ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮುಖ್ಯವಾಗಿ ಸುರಕ್ಷತಾ ದೃಷ್ಟಿಯಿಂದಾಗಿ ಈ ರೈಲುಗಳನ್ನು ರದ್ದು ಮಾಡಲಾಗುತ್ತದೆ.

ಇನ್ನು ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲಿನ ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗಿ ನಿಮಗೆ ರಿಫಂಡ್ ಆಗುತ್ತದೆ. ಆದರೆ ನೀವು ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ ಮಾಡಿದ್ದರೆ, ನೀವು ಆ ಕೌಂಟರ್‌ಗೆ ಭೇಟಿ ನೀಡಿ ರದ್ದಾದ ರೈಲಿನ ಟಿಕೆಟ್‌ನ ರಿಫಂಡ್ ಪಡೆಯಬೇಕಾಗುತ್ತದೆ. ಹಾಗಾದರೆ ಇಂದು ಯಾವೆಲ್ಲ ರೈಲುಗಳು ರದ್ದಾಗಿದೆ ಎಂದು ತಿಳಿಯೋಣ ಮುಂದೆ ಓದಿ..
ಆಗಸ್ಟ್ 9ರಂದು ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ
ರೈಲು ಸಂಖ್ಯೆ 17237: ಬಿತ್ರಾಗುಂಟ- ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ (ಆಗಸ್ಟ್ 7ರಿಂದ 11ರವರೆಗೆ)
ರೈಲು ಸಂಖ್ಯೆ 17238: ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಬಿತ್ರಾಗುಂಟ ಎಕ್ಸ್‌ಪ್ರೆಸ್ (ಆಗಸ್ಟ್ 7ರಿಂದ 11ರವರೆಗೆ)
ರೈಲು ಸಂಖ್ಯೆ 15130: ವಾರಾಣಾಸಿ ಸಿಟಿ- ಗೋರಕ್‌ಪುರ ಎಕ್ಸ್‌ಪ್ರೆಸ್ (ಆಗಸ್ಟ್ 7ರಿಂದ 30ರವರೆಗೆ)
ರೈಲು ಸಂಖ್ಯೆ 15104/ 15103: ಬನಾರಸ್ - ಗೋರಕ್‌ಪುರ - ಬನಾರಸ್ ಇಂಟರ್‌ಸಿಟಿ (ಆಗಸ್ಟ್ 7ರಿಂದ 30ರವರೆಗೆ)
ರೈಲು ಸಂಖ್ಯೆ 15129: ಗೋರಕ್‌ಪುರ- ವಾರಾಣಾಸಿ ಸಿಟಿ ಎಕ್ಸ್‌ಪ್ರೆಸ್ (ಆಗಸ್ಟ್ 8ರಿಂದ 31ರವರೆಗೆ)
ರೈಲು ಸಂಖ್ಯೆ 12537: ಮುಝಾಫರ್‌ಪುರ್- ಬನಾರಸ್ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 22531: ಛಪ್ರಾ- ಮಥುರಾ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 12538: ಬನಾರಸ್- ಮುಝಾಫರ್‌ಪುರ್ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 22532: ಮಥುರಾ - ಛಪ್ರಾ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 15105/ 15106: ಛಪ್ರಾ - ನೌಟನ್ವಾ - ಛಪ್ರಾ ಎಕ್ಸ್‌ಪ್ರೆಸ್ (ಆಗಸ್ಟ್ 7ರಿಂದ 30ರವರೆಗೆ)
ರೈಲು ಸಂಖ್ಯೆ 15529: ಸಹಸ್ರ - ಆನಂದ್ ವಿಹಾರ ಟರ್ಮಿನಲ್ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 04654: ಅಮೃತಸರ - ನ್ಯೂ ಜಲಪೈಗುರಿ ಸ್ಪೆಷಲ್ ಎಕ್ಸ್‌ಪ್ರೆಸ್ (ಆಗಸ್ಟ್ 9)
ರೈಲು ಸಂಖ್ಯೆ 05040/ 05039: ಗೋರಕ್‌ಪುರ- ನಾರ್ಕತಿಗಂಜ್ - ಗೋರಕ್‌ಪುರ (ಆಗಸ್ಟ್ 7ರಿಂದ 30ರವರೆಗೆ)
ಆಗಸ್ಟ್ 9ರಂದು ಭಾಗಶಃ ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ
ರೈಲು ಸಂಖ್ಯೆ 07590: ಕಾದಿರಿದೇವರಪಳ್ಳಿ- ತಿರುಪತಿ, ಪಾಕಲ - ತಿರುಪತಿಯಲ್ಲಿ ಭಾಗಶಃ ವಿಳಂಬ
ರೈಲು ಸಂಖ್ಯೆ 07656: ತಿರುಪತಿ - ಗುಂಟಕಲ್, ತಿರುಪತಿ- ಪಾಕಲ ನಡುವೆ ವ್ಯತ್ಯಯ
ರೈಲು ಸಂಖ್ಯೆ 16219: ಚಾಮರಾಜನಗರ - ತಿರುಪತಿ ಎಕ್ಸ್‌ಪ್ರೆಸ್, ಪಾಕಲ ಮತ್ತು ತಿರುಪತಿಯಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16780: ರಾಮೇಶ್ವರ - ತಿರುಪತಿ ಎಕ್ಸ್‌ಪ್ರೆಸ್, ಪಾಕಲ ಮತ್ತು ತಿರುಪತಿಯಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16854: ವಿಲ್ಲಾಪುರಂ - ತಿರುಪತಿ ಎಕ್ಸ್‌ಪ್ರೆಸ್, ಕಟ್ಪಾಡಿ ಮತ್ತು ತಿರುಪತಿಯಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16111: ತಿರುಪತಿ - ಪುದುಚೇರಿ ಎಕ್ಸ್‌ಪ್ರೆಸ್, ತಿರುಪತಿ ಮತ್ತು ರೇಣಿಗುಂಟದಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16112: ಪುದುಚೇರಿ - ತಿರುಪತಿ ಎಕ್ಸ್‌ಪ್ರೆಸ್, ರೇಣಿಗುಂಟ ಮತ್ತು ತಿರುಪತಿಯಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16057: ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ತಿರುಪತಿ ಎಕ್ಸ್‌ಪ್ರೆಸ್, ರೇಣಿಗುಂಟ ಮತ್ತು ತಿರುಪತಿಯಲ್ಲಿ ಭಾಗಶಃ ರದ್ದು.
ರೈಲು ಸಂಖ್ಯೆ 16054: ತಿರುಪತಿ - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ತಿರುಪತಿ ಮತ್ತು ರೇಣಿಗುಂಟದಲ್ಲಿ ಭಾಗಶಃ ರದ್ದು.


Click it and Unblock the Notifications