IRCTC: ಮಾ.22ರಂದು ಹಲವು ರೈಲುಗಳು ರದ್ದು, ವೇಳಾಪಟ್ಟಿ ಬದಲಾವಣೆ, ವಿವರ ಇಲ್ಲಿದೆ

ಭಾರತೀಯ ರೈಲ್ವೆಯು ಬುಧವಾರ ಯುಗಾದಿ ದಿನದಂದು (ಮಾರ್ಚ್ 22, 2023) ಹಲವಾರು ರೈಲುಗಳನ್ನು ರದ್ದು ಮಾಡಿದೆ, ಹಾಗೆಯೇ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡಿದೆ ಅಥವಾ ರೈಲುಗಳನ್ನು ಮರುನಿಗದಿ ಮಾಡಿದೆ. ಪ್ರಮುಖವಾಗಿ ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಲಾಗಿದೆ. ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್‌ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಈ ಸಂದರ್ಭದಲ್ಲಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಲಾಗುತ್ತದೆ.

ಬುಧವಾರ ಮುಖ್ಯವಾಗಿ ನಿರ್ವಹಣಾ ಕಾರ್ಯ, ತಾಂತ್ರಿಕ ಕೆಲಸ ಮತ್ತು ಹವಾಮಾನ ಸಮಸ್ಯೆಯಿಂದಾಗಿ ರೈಲುಗಳನ್ನು ರದ್ದು ಮಾಡಲಾಗಿದೆ. ಸಾಮಾನ್ಯವಾಗಿ ಹೆಚ್ಚು ಮಂಜು ಇದ್ದಾಗ, ಮಳೆ ಅಧಿಕವಾಗಿದ್ದಾಗ, ರೈಲುಗಳನ್ನು ರದ್ದು ಮಾಡಲಾಗುತ್ತದೆ. ಮುಖ್ಯವಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಯುಗಾದಿ ಹಬ್ಬದ ಆಚರಣೆಯಲ್ಲಿ ನಾವಿದ್ದೇವೆ. ಹಬ್ಬದ ನಡುವೆ ನಮ್ಮ ತವರೂರು, ನೆಂಟರ ಊರಿಗೆ ಪ್ರಯಾಣ ಮಾಡಲು ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಿರಬಹುದು. ಆದರೆ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲೂ ಇಂದು ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ ಅಥವಾ ಸಮಯ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಮಾ.22: ಹಲವು ರೈಲುಗಳು ರದ್ದು, ವೇಳಾಪಟ್ಟಿ ಬದಲಾವಣೆ, ವಿವರ ಇಲ್ಲಿದೆ

ರದ್ದಾದ, ಮರುನಿಗದಿಯಾದ ರೈಲುಗಳು

* ರೈಲು ಸಂಖ್ಯೆ 07663 ವಿಜಯಪುರ- ರಾಯಚೂರು ದೈನಂದಿನ ಪ್ರಯಾಣಿಕರ ವಿಶೇಷ ರೈಲು
* ರೈಲು ಸಂಖ್ಯೆ 07664 ರಾಯಚೂರು - ವಿಜಯಪುರ ದೈನಂದಿನ ಪ್ರಯಾಣಿಕರ ವಿಶೇಷ ರೈಲು
* ರೈಲು ಸಂಖ್ಯೆ 15050 ಗೋರಕ್‌ಪುರ- ಕೋಲ್ಕತ್ತಾ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಸುವ ಹಳಿ ಬದಲಾವಣೆ ಮಾಡಲಾಗುತ್ತದೆ. ರೈಲು ಬಾಟ್ನಿ - ಮೌ - ಇಂದಾರಾ- ಬಲ್ಲಿಯಾ - ಛಪ್ರಾ ಮೂಲಕ ಸಾಗಬೇಕಾಗಿತ್ತು. ಆದರೆ ಈಗ ರೈಲು ಬಾಟ್ನಿ - ಸಿವಾನ್ - ಛಪ್ರಾ ಮೂಲಕ ಸಾಗಲಿದೆ.
* ರೈಲು ಸಂಖ್ಯೆ 20691 ತಾಂಬರಂ - ನಗೆರ್ಕಾಇಲ್ ಅಂತ್ಯೋದಯ ಎಕ್ಸ್‌ಪ್ರೆಸ್ ತಾಂಬರಂ ಜಂಕ್ಷನ್‌ನಿಂದ ಹೊರಡಲಿದ್ದು, ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ತಿರುನೆಲ್ವೇಲಿ ಮತ್ತು ನಗೆರ್ಕಾಇಲ್ ಭಾಗಶಃ ರದ್ದು ಮಾಡಲಾಗಿದೆ. ತಿರುನೆಲ್ವೇಲಿ ಕೆಲವೇ ನಿಮಿಷ ರೈಲು ನಿಲ್ಲಿಲಿದೆ.
* ರೈಲು ಸಂಖ್ಯೆ 20692 ನಗೆರ್ಕಾಇಲ್ - ತಾಂಬರಂ ಅಂತ್ಯೋದಯ ಎಕ್ಸ್‌ಪ್ರೆಸ್ ನಗೆರ್ಕಾಇಲ್ ಜಂಕ್ಷನ್‌ನಿಂದ ದಿನಾಂಕ 17, 18, 20, 21, 22 ಮಾರ್ಚ್ 2023ರಂದು 15.50 ಗಂಟೆಗೆ (ಮಧ್ಯಾಹ್ನ 3:50) ಹೊರಡಲಿದ್ದು, ತಿರುನೆಲ್ವೇಲಿ ಮತ್ತು ನಗೆರ್ಕಾಇಲ್ ದಾರಿಯಲ್ಲಿ ಭಾಗಶಃ ರದ್ದು ಮಾಡಲಾಗಿದೆ. ರೈಲು ತನ್ನ ನಿಗದಿತ ನಿರ್ಗಮನ ಸಮಯ 17.05 ಗಂಟೆಗೆ ತಿರುನಲ್ವೇಲಿಯಿಂದ ಸೇವೆಯನ್ನು ಪ್ರಾರಂಭಿಸುತ್ತದೆ.

* ರೈಲು ಸಂಖ್ಯೆ 22627 ತಿರುಚ್ಚಿರಾಪಳ್ಳಿ - ತಿರುವನಂತಪುರಂ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ತಿರುಚ್ಚಿರಾಪಳ್ಳಿ ಜಂಕ್ಷನ್‌ನಿಂದ ದಿನಾಂಕ 17, 18, 20, 21, 22 ಮಾರ್ಚ್ 2023ರಂದು ಬೆಳಿಗ್ಗೆ 07.20ಕ್ಕೆ ಹೊರಡಲಿದೆ. ಈ ರೈಲು ತಿರುನಲ್ವೇಲಿ ಮತ್ತು ತಿರುವನಂತಪುರಂ ಸೆಂಟ್ರಲ್‌ನಲ್ಲಿ ಭಾಗಶಃ ರದ್ದು ಮಾಡಲಾಗಿದೆ. ತಿರುನಲ್ವೇಲಿಯಲ್ಲಿ ಕೆಲವೇ ನಿಮಿಷ ರೈಲು ನಿಲ್ಲಿಲಿದೆ.
* ರೈಲು ಸಂಖ್ಯೆ 22628 ತಿರುವನಂತಪುರಂ ಸೆಂಟ್ರಲ್ - ತಿರುಚ್ಚಿರಾಪಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡಲಿದೆ. ತಿರುನಲ್ವೇಲಿ ಮತ್ತು ತಿರುವನಂತಪುರಂ ಸೆಂಟ್ರಲ್‌ನಲ್ಲಿ ಭಾಗಶಃ ರದ್ದು ಮಾಡಲಾಗಿದೆ. ರೈಲು ತಿರುನಲ್ವೇಲಿಯಿಂದ ಮಧ್ಯಾಹ್ನ 2.30 ಕ್ಕೆ ನಿಗದಿತ ಸಮಯದಲ್ಲಿ ಸೇವೆ ಪ್ರಾರಂಭಿಸಲಿದೆ.
* ರೈಲು ಸಂಖ್ಯೆ 12455/12456 ದೆಲ್ಲಿ ಸಾರೈ ರೋಹಿಲ್ಲಾ - ಬಿಕಾನೆರ್- ದೆಲ್ಲಿ ಸಾರೈ ರೋಹಿಲ್ಲಾ ಎಕ್ಸ್‌ಪ್ರೆಸ್ ಜೆಸಿಒನ 14.03.2023ರಿಂದ 23.023.2023ರವರೆಗೆ ಹಳಿ ಬದಲಾವಣೆ ಮಾಡಲಾಗಿದೆ. ರೈಲು ಸಂಗ್ರೂರ್- ಧುರಿ- ಬರ್ನಾಲಾ- ರಾಮಪುರ ಫುಲ್ ದಾರಿಯಲ್ಲಿ ಸಾಗಲಿದೆ.

* ದಮ್ ದಮ್ ಜಂಕ್ಷನ್ - ಡಂಕುಣಿ ಮೂಲಕ ರೈಲು ಹಳಿ ಬದಲಾವಣೆ ಮಾಡಲಿದೆ. ದಕ್ಷಿಣೇಶ್ವರ ಮತ್ತು ದಂಕುಣಿಯಲ್ಲಿ ರೈಲು ನಿಲ್ಲಲಿದೆ. ಅಪ್‌ ಟ್ರೈನ್: 13105 (ಸೀಲ್ದಾ-ಬಲ್ಲಿಯಾ), 15047 (ಪುರಬಂಚಲ್ ಎಕ್ಸ್‌ಪ್ರೆಸ್), 13185 (ಗಂಗಾ ಸಾಗರ್), 13157 (ಕೋಲ್ಕತ್ತಾ - ಮುಜಫರ್‌ಪುರ್), 13153 (ಗೌರ್ ಎಕ್ಸ್‌ಪ್ರೆಸ್), 03111 (ಸೀಲ್ದಾ - ಗೊಡ್ಡಾ). ಡೌನ್ ಟ್ರೈನ್: 13106 (ಸೀಲ್ದಾ-ಬಲ್ಲಿಯಾ), 15048 (ಪುರಬಂಚಲ್ ಎಕ್ಸ್‌ಪ್ರೆಸ್), 13186 (ಗಂಗಾ ಸಾಗರ್), 13156 (ಸೀತಾಮಾರ್ಹಿ - ಕೋಲ್ಕತ್ತಾ), 13154 (ಗೌರ್ ಎಕ್ಸ್‌ಪ್ರೆಸ್), 03112 (ಗೊಡ್ಡಾ - ಸೀಲ್ದಾ).
* ರೈಲು ಸಂಖ್ಯೆ 22849 ಶಾಲಿಮಾರ್‌ನಿಂದ ಹೊರಡುವ ಶಾಲಿಮಾರ್- ಸಿಕಂದರಾಬಾದ್ ಎಕ್ಸ್‌ಪ್ರೆಸ್ ವಿಶಾಖಪಟ್ಟಣಂ- ವಿಜಯವಾಡ- ಗುಂಟೂರು- ಪಗಿಡಿಪಲ್ಲಿ- ಸಿಕಂದರಾಬಾದ್ ಮೂಲಕ ಹಳಿ ಬದಲಾವಣೆ ಮಾಡಿ ಚಲಿಸುತ್ತದೆ.
* ರೈಲು ಸಂಖ್ಯೆ 15050 ಗೋರಖ್‌ಪುರ - ಕೋಲ್ಕತ್ತಾ ಎಕ್ಸ್‌ಪ್ರೆಸ್ (ಮಾರ್ಚ್ 25 ಮತ್ತು ಮಾರ್ಚ್ 29 ರಂದು ಪ್ರಾರಂಭವಾಗುತ್ತದೆ) ಅದರ ವೇಳಾಪಟ್ಟಿ ಮಾರ್ಗದ ಬದಲಾಗಿ ಭಟ್ನಿ - ಸಿವಾನ್ - ಛಾಪ್ರಾ ಮೂಲಕ ಸಾಗಲಿದೆ.
* ರೈಲು ಸಂಖ್ಯೆ 12485/12486 ನಾಂದೇಡ್ - ಶ್ರೀ ಗಂಗಾನಗರ ಎಕ್ಸ್‌ಪ್ರೆಸ್ ಅನ್ನು ಸೋನಾರ್‌ಪುರ್ ನಿಲ್ದಾಣ ಬಿಟ್ಟು, ಸಂಗ್ರೂರ್- ಧುರಿ- ಬರ್ನಾಲಾ- ರಾಮಪುರ ಫುಲ್ ಸಾಗಲಿದೆ. 14736 ಅಂಬಾಲಾ ಕ್ಯಾಂಟ್ -ಶ್ರೀ ಗಂಗಾನಗರ್ ಎಕ್ಸ್‌ಪ್ರೆಸ್ ಜೆಸಿಒ 16.03.2023 ರಿಂದ 25.03.2023ರಂದು ಅಂಬಾಲಾ ಕ್ಯಾಂಟ್- ಬಟಿಂಡಾ ನಡುವೆ ಕೆಲವು ಸಮಯ ರದ್ದಾಗಲಿದೆ.
* ರೈಲು ಸಂಖ್ಯೆ 15050 ಗೋರಖ್‌ಪುರ - ಕೋಲ್ಕತ್ತಾ ಎಕ್ಸ್‌ಪ್ರೆಸ್ (ಮಾರ್ಚ್ 22, 25 ಮತ್ತು 29 ರಂದು ಪ್ರಾರಂಭವಾಗುತ್ತದೆ) ಗೋರಖ್‌ಪುರದಿಂದ 120 ನಿಮಿಷಗಳವರೆಗೆ ಮರು-ನಿಗದಿಪಡಿಸಲಾಗುತ್ತದೆ.
* ರೈಲು ಸಂಖ್ಯೆ 15030 ಪುಣೆ - ಗೋರಕ್‌ಪುರ ಎಕ್ಸ್‌ಪ್ರೆಸ್ ಜೆಸಿಒ
* ರೈಲು ಸಂಖ್ಯೆ 12333 ಹೌರಾ - ಪ್ರಯಾಗ್‌ರಾಜ್ ವಿಭೂತಿ ಎಕ್ಸ್‌ಪ್ರೆಸ್ (ಮಾರ್ಚ್ 27 ರಂದು ಪ್ರಾರಂಭವಾಗುವ ಪ್ರಯಾಣ) ಬನಾರಸ್‌ನಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ. 12334 ಪ್ರಯಾಗ್‌ರಾಜ್ - ಹೌರಾ ವಿಭೂತಿ ಎಕ್ಸ್‌ಪ್ರೆಸ್ (ಮಾರ್ಚ್ 28 ರಂದು ಪ್ರಾರಂಭವಾಗುತ್ತದೆ) ಪ್ರಯಾಗ್‌ರಾಜ್ ಬದಲಿಗೆ ಬನಾರಸ್‌ನಿಂದ ಪ್ರಾರಂಭವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+