IRFC ಐಪಿಒ ಜ. 18ರಿಂದ 20; ಪ್ರತಿ ಷೇರಿಗೆ 25ರಿಂದ 26 ರು.
ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (IRFC) 4600 ಕೋಟಿ ರುಪಾಯಿಯ ಇನ್ಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಮುಂದಿನ ವಾರ ಆರಂಭವಾಗಲಿದೆ. ಸಾರ್ವಜನಿಕ ಸ್ವಾಮ್ಯದ ಮೊದಲ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ (NBFC) ಐಪಿಒ ಇದು. ಜನವರಿ 18ರಂದು ಆರಂಭವಾಗುವ ಐಪಿಒ ಜನವರಿ 20ರಂದು ಮುಕ್ತಾಯ ಆಗಲಿದೆ.
ಐಆರ್ ಎಫ್ ಸಿ ರು. 4600 ಕೋಟಿಗೂ ಹೆಚ್ಚು ಮೊತ್ತದ, ಪ್ರತಿ ಷೇರಿಗೆ 25ರಿಂದ 26 ರುಪಾಯಿ ದರದ ಬ್ಯಾಂಡ್ ನಿಗದಿ ಮಾಡಲಾಗಿದೆ. ಆಂಕರ್ ಬುಕ್ ಜನವರಿ 15ರಂದು ಹಾಗೂ ಮುಖ್ಯ ಬುಕ್ ಜನವರಿ 18ರಿಂದ 20 ಇರಲಿದೆ ಎಂದು ಇನ್ವೆಸ್ಟ್ ಮೆಂಟ್ ಮತ್ತು ಪಬ್ಲಿಕ್ ಅಸೆಟ್ ಮ್ಯಾನೇಜ್ ಮೆಂಟ್ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.
ಪ್ರಾಥಮಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಷೇರುಗಳು 1.77 ಲಕ್ಷ ಕೋಟಿ ರು. ಏರಿಕೆ
ಐಆರ್ ಎಫ್ ಸಿ ಆರಂಭವಾದದ್ದು 1986ರಲ್ಲಿ. ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗಳಿಂದ ಹಣ ಸಂಗ್ರಹ ಮಾಡುವುದಕ್ಕೆ ಅಂತ ಇರುವ ಭಾರತೀಯ ರೈಲ್ವೆಯ ಹಣಕಾಸು ಅಂಗಸಂಸ್ಥೆ. Extra Btdgetary Resources (EBR) ಅಗತ್ಯವನ್ನು ಭಾರತೀಯ ರೈಲ್ವೆಗೆ ಸ್ಪರ್ಧಾತ್ಮಕ ದರ ಮತ್ತು ನಿಯಮಗಳೊಂದಿಗೆ ಮಾರುಕಟ್ಟೆ ಮೂಲಕ ಸಂಗ್ರಹಿಸಿಕೊಡುವುದೇ ಐಆರ್ ಎಫ್ ಸಿ ಮುಖ್ಯ ಉದ್ದೇಶ.
ವೆಬ್ ಸೈಟ್ ಮಾಹಿತಿಯಂತೆ, ಐಆರ್ ಎಫ್ ಸಿ ಎಂಬುದು ಷೆಡ್ಯೂಲ್ 'A' ಸಾರ್ವಜನಿಕ ಸ್ವಾಮ್ಯದ ಸಂಸ್ಥೆ. ರೈಲ್ವೆ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹತೋಟಿಯಲ್ಲಿ ಬರುತ್ತದೆ.