For Quick Alerts
ALLOW NOTIFICATIONS  
For Daily Alerts

ಆರ್ಥಿಕ ಕುಸಿತದಿಂದ ಹೊರಬಂದ ಜಪಾನ್; 5.0 ಪರ್ಸೆಂಟ್ ಬೆಳವಣಿಗೆ

By ಅನಿಲ್ ಆಚಾರ್
|

ಈ ವರ್ಷ ಮೂರನೇ ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆಯು ಕುಸಿತದಿಂದ ಹೊರಬಂದಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಬೆಳವಣಿಗೆ 5.0 ಪರ್ಸೆಂಟ್ ದಾಖಲಿಸಿದೆ ಎಂದು ಸೋಮವಾರ ಸರ್ಕಾರದ ದತ್ತಾಂಶದಿಂದ ತಿಳಿದುಬಂದಿದೆ. ಇದಕ್ಕೂ ಮುನ್ನ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು.

ದೇಶೀಯ ಬೇಡಿಕೆಯಲ್ಲಿನ ಹೆಚ್ಚಳ ಹಾಗೂ ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕಕ್ಕೆ ರಫ್ತು ಬೆಳವಣಿಗೆ ಆಗಿದೆ. ಕೊರೊನಾ ಬಿಕ್ಕಟ್ಟು ಮತ್ತು ಕನ್ಸಮ್ಷನ್ ತೆರಿಗೆ ಹೆಚ್ಚಳದ ಕಾರಣಕ್ಕೆ ಈ ವರ್ಷದ ಆರಂಭದಲ್ಲಿ ಆರ್ಥಿಕತೆಗೆ ಪೆಟ್ಟು ಬಿದ್ದಿತ್ತು.

ಜಪಾನ್ ನನ್ನು ಜಗ್ಗಿ ಜಾಲಾಡಿದ 'ಕೊರೊನಾ'; ಆರ್ಥಿಕತೆಯಲ್ಲಿ ಭಾರೀ ಇಳಿಕೆಜಪಾನ್ ನನ್ನು ಜಗ್ಗಿ ಜಾಲಾಡಿದ 'ಕೊರೊನಾ'; ಆರ್ಥಿಕತೆಯಲ್ಲಿ ಭಾರೀ ಇಳಿಕೆ

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ ಮೂರು ತ್ರೈಮಾಸಿಕಗಳ ಕಾಲ ಕುಸಿತ ದಾಖಲಿಸಿತ್ತು. ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕತೆ ಪರಿಷ್ಕೃತ ಲೆಕ್ಕದ ಪ್ರಕಾರ, 8.2 ಪರ್ಸೆಂಟ್ ಕುಗ್ಗಿತು. ಅದಕ್ಕೂ ಮುಂಚೆ ನಿರೀಕ್ಷೆ ಮಾಡಿದ್ದ 7.9%ಕ್ಕಿಂತ ಹೆಚ್ಚು ಇಳಿಕೆ ಕಂಡಿತು.

ಆರ್ಥಿಕ ಕುಸಿತದಿಂದ ಹೊರಬಂದ ಜಪಾನ್;  5.0 ಪರ್ಸೆಂಟ್ ಬೆಳವಣಿಗೆ

1980ರಿಂದ ಈಚೆಗೆ ಜಪಾನ್ ಕಂಡ ಅತ್ಯಂತ ಕೆಟ್ಟ ದತ್ತಾಂಶ ಇದು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ತುಂಬ ಕೆಟ್ಟ ಸ್ಥಿತಿ ಕಂಡಿತು. Q3 ಬೆಳವಣಿಗೆಯು ಜಪಾನ್ ಸರ್ಕಾರಕ್ಕೆ ಉತ್ತಮ ಸುದ್ದಿ. ಇತರ ದೇಶಗಳಲ್ಲಿ ಹೇರುತ್ತಿರುವಾಗ ಲಾಕ್ ಡೌನ್ ಕಠಿಣ ನಿರ್ಬಂಧಗಳು ಜಪಾನ್ ನಲ್ಲಿ ಇರಲಿಲ್ಲ.

ಆರ್ಥಿಕ ತಜ್ಞರು 4.4 ಪರ್ಸೆಂಟ್ ಬೆಳವಣಿಗೆ ನಿರೀಕ್ಷೆ ಮಾಡಿದ್ದರು. ಈ ವರ್ಷದ ಅಂತಿಮ ತ್ರೈಮಾಸಿಕದಲ್ಲಿ ಚೇತರಿಕೆ ನಿರೀಕ್ಷೆ ಮುಂದುವರಿದಿದೆ. ಜಪಾನ್ ನಲ್ಲಿ ಏಪ್ರಿಲ್ ತಿಂಗಳಲ್ಲಿ ಕೊರೊನಾ ನಿರ್ಬಂಧ ಹಾಕಲಾಗಿತ್ತು. ಜೂನ್ ನಲ್ಲಿ ನಿರ್ಬಂಧಗಳನ್ನು ತೆರವು ಮಾಡಲಾಯಿತು. ಈಗ ಮತ್ತೆ ನಿರ್ಬಂಧ ಹೇರುವ ಸಾಧ್ಯತೆ ಇಲ್ಲ.

ಕಳೆದ ಅಕ್ಟೋಬರ್ ನಲ್ಲಿ ಬ್ಯಾಂಕ್ ಆಫ್ ಜಪಾನ್ ನಿಂದ ಪ್ರಸಕ್ತ ಹಣಕಾಸು ವರ್ಷಕ್ಕೆ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಅಂದಾಜನ್ನು ಕಡಿಮೆ ಮಾಡಲಾಯಿತು. ಆದರೆ ಬ್ಯಾಕ್ ಗವರ್ನರ್ ಮಾತನಾಡಿ, ಅಗತ್ಯ ಕಂಡುಬಂದಲ್ಲಿ ಹೊಸದಾಗಿ ಉತ್ತೇಜನ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದರು.

ಮಾರ್ಚ್ 2021ಕ್ಕೆ ಆರ್ಥಿಕತೆಯು 5.5 ಪರ್ಸೆಂಟ್ ನಷ್ಟು ಆರ್ಥಿಕತೆ ಕುಗ್ಗಬಹುದು ಎಂಬ ನಿರೀಕ್ಷೆ ಇದ್ದು, ಜುಲೈನಲ್ಲಿ ಈ ಅಂದಾಜು 4.7 ಪರ್ಸೆಂಟ್ ಇತ್ತು ಎಂದು ಬ್ಯಾಂಕ್ ಆಫ್ ಜಪಾನ್ ಹೇಳಿದೆ.

English summary

Japan Come Out Of Recession; Record Growth Of 5 Percent In Q3 Current Year

World's 3rd largest economy come out of recession in Q3 with 5.0 percent growth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X