For Quick Alerts
ALLOW NOTIFICATIONS  
For Daily Alerts

Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ

|

ಬೆಂಗಳೂರು, ಜನವರಿ 27: ಜಿಯೋ ಹಾಗೂ ಏರ್‌ಟೇಲ್‌ ಕಂಪನಿಗಳು ಕಳೆದ ಅಕ್ಟೋಬರ್‌ನಲ್ಲಿ 5 ಜಿ ಸೇವೆಯನ್ನು ದೇಶದಲ್ಲಿ ಆರಂಭಿಸಿವೆ. ಈ ನಾಲ್ಕು ತಿಂಗಳಲ್ಲಿ ಕೋಟ್ಯಾಂತರ ಗ್ರಾಹಕರನ್ನು ಆಕರ್ಷಿಸುವಲ್ಲಿ ಟೆಲಿಕಾಂ ಕಂಪನಿಗಳು ಯಶಸ್ವಿ ಆಗಿವೆ. ಎಷ್ಟು ಗ್ರಾಹಕರು 5G ಸೇವೆಯನ್ನು ಬಳಸುತ್ತಿದ್ದಾರೆ ಎಂಬುದರ ವರದಿ ಇಲ್ಲಿದೆ.

ಹಲವು ವರ್ಷಗಳ ಕಾಯುವಿಕೆಯ ನಂತರ ಕಳೆದ ವರ್ಷ ಅಕ್ಟೋಬರ್ 1 ರಂದು ಭಾರತದಲ್ಲಿ ಅಧಿಕೃತವಾಗಿ 5G ಮೊಬೈಲ್ ಬ್ರಾಡ್‌ಬ್ಯಾಂಡ್ ಅನ್ನು ಪ್ರಾರಂಭಿಸಲಾಯಿತು. 5G ಮೊಬೈಲ್ ಬ್ರಾಡ್‌ಬ್ಯಾಂಡ್ ಪ್ರಾರಂಭವಾಗಿ ಸುಮಾರು ನಾಲ್ಕು ತಿಂಗಳಾಗಿದೆ. ನಿಧಾನವಾಗಿ 5G ಸಂಪರ್ಕವನ್ನು ಏರ್‌ಟೆಲ್ ಮತ್ತು ಜಿಯೋ ಭಾರತದ ಅನೇಕ ನಗರಗಳಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಪ್ರಸ್ತುತ, ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಎರಡು ಮಾತ್ರ ಭಾರತದಲ್ಲಿ 5G ಸೇವೆಗಳನ್ನು ಒದಗಿಸುತ್ತಿವೆ. ಅವುಗಳೆಂದರೆ ಏರ್‌ಟೆಲ್ 5G ಮತ್ತು ಜಿಯೋ 5G. ವೊಡಾಫೋನ್ ಐಡಿಯಾ ಇನ್ನೂ ದೇಶದಲ್ಲಿ 5G ಸೇವೆಗಳನ್ನು ಒದಗಿಸಿಲ್ಲ. ಏರ್‌ಟೆಲ್‌ನ 5G ಪ್ಲಸ್ ಸೇವೆಯು ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್‌ನ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುವ ಸ್ವತಂತ್ರವಲ್ಲದ ಸೇವೆ (NSA) ಆಗಿದ್ದರೆ, Jio ನ ಟ್ರೂ 5G ನೆಟ್‌ವರ್ಕ್ ಸ್ವತಂತ್ರ (SA) ನೆಟ್‌ವರ್ಕ್ ಆಗಿದೆ.

Launched Jio 5G Network: ಭಾರತದಲ್ಲಿ ಜ.24 ರಿಂದಲೇ ಜಿಯೊ 5ಜಿ ನೆಟ್‌ವರ್ಕ್‌ ಸೇವೆ ಆರಂಭLaunched Jio 5G Network: ಭಾರತದಲ್ಲಿ ಜ.24 ರಿಂದಲೇ ಜಿಯೊ 5ಜಿ ನೆಟ್‌ವರ್ಕ್‌ ಸೇವೆ ಆರಂಭ

ಇದೀಗ ಭಾರತದ ಮಾರುಕಟ್ಟೆಗಳಲ್ಲಿ ಸಾಕಷ್ಟು 5G ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಅವುಗಳು ಮುಂದಿನ-ಜನರೇಶನ್‌ ನೆಟ್‌ವರ್ಕ್ ಅನ್ನು ಚಲಾಯಿಸಲು ಸಮರ್ಥವಾಗಿವೆ. ಭಾರತದಲ್ಲಿ 5G ಬ್ಯಾಂಡ್‌ಗಳಿಗೆ ಬೆಂಬಲವನ್ನು ಇನ್ನೂ ಹಲವು ಸಾಧನಗಳಿಗೆ ಅಳವಡಿಸಬೇಕಿದೆ.

 Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರು? ಮಾಹಿತಿ

ಭಾರತದಲ್ಲಿ Realme Xiaomi ಮತ್ತು ನಥಿಂಗ್‌ನಂತಹ ಬ್ರ್ಯಾಂಡ್‌ಗಳು ಈಗಾಗಲೇ ಏರ್‌ಟೆಲ್ 5G ಮತ್ತು Jio 5G ಸೇವೆಗಳನ್ನು ಬೆಂಬಲಿಸುವ ಮೊಬೈಲ್‌ಗಳನ್ನು ಪ್ರಾರಂಭಿಸಿವೆ. Google ನಂತಹ ಬ್ರ್ಯಾಂಡ್‌ಗಳು ಇನ್ನೂ ಸಾಫ್ಟ್‌ವೇರ್ ಅನ್ನು ಹೊರತಂದಿಲ್ಲ. Oppo ನಂತಹ ಕೆಲವು ಬ್ರ್ಯಾಂಡ್‌ಗಳು ಈಗಾಗಲೇ ತಮ್ಮ 5G ಸಾಧನ ಶ್ರೇಣಿಗೆ ಅಗತ್ಯವಿರುವ ಮೊಬೈಲ್‌ಗಳನ್ನು ಹೊರತಂದಿವೆ. ಆದರೆ Apple iOS ಬೀಟಾ ಬಳಕೆದಾರರಿಗೆ ಮಾತ್ರ ನವೀಕರಣವನ್ನು ಪ್ರಾರಂಭಿಸಿದೆ. ಸ್ಥಿರ ಬಳಕೆದಾರರು ಮುಂದಿನ ತಿಂಗಳೊಳಗೆ ನವೀಕರಣವನ್ನು ಪಡೆಯುವ ನಿರೀಕ್ಷೆಯಿದೆ. ಸ್ಯಾಮ್‌ಸಂಗ್ ಈ ತಿಂಗಳು ಎಲ್ಲಾ ಬೆಂಬಲಿತ 5G ಸಾಧನಗಳಿಗೆ 5G ನವೀಕರಣಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟೆಲಿಕಾಂ ಉದ್ಯಮದ ಅಂದಾಜಿನ ಪ್ರಕಾರ, ಕಳೆದ ಅಕ್ಟೋಬರ್‌ನಲ್ಲಿ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ ನಾಲ್ಕು ತಿಂಗಳೊಳಗೆ ಭಾರತೀಯ ಟೆಲಿಕಾಂ ಕಂಪನಿಗಳು 20 ಮಿಲಿಯನ್ 5G ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

ಸೋಮವಾರ 50 ನಗರಗಳಿಗೆ ಜಿಯೊ 5G ಸೇವೆ. ಇಲ್ಲಿದೆ ಪಟ್ಟಿ

ಅಮೃತಸರ (ಪಂಜಾಬ್)
ಬಿಕಾನೇರ್, ಕೋಟಾ (ರಾಜಸ್ಥಾನ)
ಧರ್ಮಪುರಿ, ಈರೋಡ್ (ತಮಿಳುನಾಡು).
ಪಣಜಿ (ಗೋವಾ)
ಅಂಬಾಲಾ, ಬಹದ್ದೂರ್‌ಗಢ, ಹಿಸಾರ್, ಕರ್ನಾಲ್, ಪಾಣಿಪತ್, ರೋಹ್ಟಕ್, ಸಿರ್ಸಾ, ಸೋನಿಪತ್ (ಹರಿಯಾಣ)
ಧನ್ಬಾದ್ (ಜಾರ್ಖಂಡ್)
ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು (ಕರ್ನಾಟಕ)
ಆಲಪ್ಪುಳ (ಕೇರಳ)
ಚಿತ್ತೂರು, ಕಡಪ, ನರಸರಾವ್ ಪೇಟೆ, ಒಂಗೋಲ್, ರಾಜಮಹೇಂದ್ರವರಂ, ಶ್ರೀಕಾಕುಳಂ, ಮತ್ತು ವಿಜಯನಗರಂ (ಆಂಧ್ರಪ್ರದೇಶ).
ನಾಗಾನ್ (ಅಸ್ಸಾಂ).
ಬಿಲಾಸ್ಪುರ್, ರಾಜನಂದಗಾಂವ್, ಕೊರ್ಬಾ (ಛತ್ತೀಸ್ಗಢ)
ಕೊಲ್ಲಾಪುರ, ನಾಂದೇಡ್-ವಘಾಲಾ, ಸಾಂಗ್ಲಿ (ಮಹಾರಾಷ್ಟ್ರ)
ಬಾಲಸೋರ್, ಬರಿಪದ, ಭದ್ರಕ್, ಜರ್ಸುಗುಡ, ಪುರಿ, ಸಂಬಲ್ಪುರ್ (ಒಡಿಶಾ)
ಪುದುಚೇರಿ (ಪುದುಚೇರಿ)

 Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರು? ಮಾಹಿತಿ

ಪುಣೆ, ಉಜ್ಜಯಿನಿ ದೇವಸ್ಥಾನಗಳು, ಕೊಚ್ಚಿ, ಗುರುವಾಯೂರ್ ದೇವಸ್ಥಾನ, ತಿರುಮಲದೆಹಲಿ, ಮುಂಬೈ, ವಾರಣಾಸಿ, ಕೋಲ್ಕತ್ತಾ, ನಾಥದ್ವಾರ, ಚೆನ್ನೈ, ಬೆಂಗಳೂರು, ಹೈದರಾಬಾದ್, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಸೇರಿದಂತೆ 100 ಕ್ಕೂ ಹೆಚ್ಚು ನಗರಗಳಲ್ಲಿ ಜಿಯೊ 5G ಲಭ್ಯವಿದೆ.

ಸಿಲಿಗುರಿ, ಜೈಪುರ, ಜೈಪುರ, ಉದೈ ಜೋದ್‌ಪುರ ಆಗ್ರಾ, ಕಾನ್ಪುರ, ಮೀರತ್, ಪ್ರಯಾಗರಾಜ್, ತಿರುಪತಿ, ನೆಲ್ಲೂರು, ಕೋಝಿಕ್ಕೋಡ್, ತ್ರಿಶೂರ್, ನಾಗ್ಪುರ, ಅಹಮದ್‌ನಗರ, ರಾಯ್‌ಪುರ, ದುರ್ಗ್, ಭಿಲಾಯಿ, ಪಾಟ್ನಾ, ಮುಜಾಫರ್‌ಪುರ, ರಾಂಚಿ, ಜಮ್ಶೆಡ್‌ಪುರ, ಉಡುಪಿ, ಕಲಬುರಗಿ, ಬಳ್ಳಾರಿ, ರೂರ್ಕೆಲಾ, ಬ್ರಹ್ಮಪುರವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಲಕ್ನೋ, ತಿರುವನಂತಪುರಂ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಕ್‌ಪುರ, ಖರಾರ್, ದೇರಬಸ್ಸಿ, ಭೋಪಾಲ್, ಇಂದೋರ್, ಭುವನೇಶ್ವರ್, ಕಟಕ್, ಜಬಲ್‌ಪುರ, ಗ್ವಾಲಿಯರ್, ಲೂಧಿಯಾನ, , ಕೊಲ್ಲಂ, ಎಲೂರು, ಅಮರಾವತಿಗಳಲ್ಲೂ ಜಿಯೋ 5G ಲಭ್ಯವಿದೆ.

English summary

Jio, Airtel bag 20 million 5G customers in 4 months of service rollout

Jio and Airtel launched 5G services in the country last October. Telecom companies have been successful in attracting crores of customers in these four months
Story first published: Friday, January 27, 2023, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X